ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ದಿನಾಚರಣೆ

Suddi Udaya

ಉಜಿರೆ: “ಇಂದಿನ ವಿಜ್ಞಾನ, ನಾಳೆಯ ತಂತ್ರಜ್ಞಾನ. ವಿದ್ಯಾರ್ಥಿಗಳು ಹೊಸ ತನಿಖೆಗಳನ್ನು ಅಭಿವೃದ್ಧಿಪಡಿಸಬೇಕು ಆಗಲೇ ಆಲೋಚನೆಗಳನ್ನು ವ್ಯವಹಾರಕ್ಕೆ ಪರಿವರ್ತಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಉಪನಿಷತ್ ಪ್ರಾಚೀನ ಲಿಪಿಗಳಿಂದ ಹೊಸ ವಿಷಯಗಳನ್ನು ಕಂಡುಕೊಳ್ಳಬೇಕು” ಎಂದು ಉಜಿರೆಯ ಎಸ್.ಡಿ.ಎಮ್ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಅಮರೇಶ್ ಹೆಬ್ಬಾರ್ ಹೇಳಿದರು.

ಇವರು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಉಜಿರೆಯಲ್ಲಿ ನಡೆದ ವಿಜ್ಞಾನ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ರಾಷ್ಟ್ರೀಯ ಮಟ್ಟದ “ಎ.ಟಿ.ಎಲ್ ಮ್ಯಾರಥಾನ್ ಆಫ್ ದ ಇಯರ್ 2022-23” ಎಂಬ ಸ್ಪರ್ಧೆಯಲ್ಲಿ ಹತ್ತು ಸಾವಿರ ವಿಜ್ಞಾನ ಮಾದರಿಗಳ ಪೈಕಿ ಉತ್ತಮ 400 ಮಾದರಿಗಳಲ್ಲಿ ಆಯ್ಕೆ ಆಗಿ, ದಕ್ಷಿಣ ಕನ್ನಡದಿಂದ ಆಯ್ಕೆ ಆಗಿರುವ ಎರಡು ತಂಡಗಳಲ್ಲಿ ಒಂದಾಗಿರುವ ಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿ ಪವನ್ ಕೃಷ್ಣ ಮತ್ತು ಸೋಹನ್ ಶೆಟ್ಟಿ ಇವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ವಿಜ್ಞಾನ ಮಾದರಿ ತಯಾರಿ ಸ್ಪರ್ಧೆ ಆಯೋಜಿಸಿ ಪ್ರಶಸ್ತಿ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ವಿಜ್ಞಾನ ಸಂಘದ ವಾರ್ಷಿಕ ಚಟುವಟಿಕೆಗಳ ವಾಚನ, ಮೂಢ ನಂಬಿಕೆಗಳ ಕುರಿತು ಕಿರು ಪ್ರಹಸನ ನೀಡಲಾಯಿತು.

ವಿಜ್ಞಾನ ಸಂಘದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರು ಸ್ವಾಗತಿಸಿ, ವಿದ್ಯಾರ್ಥಿ ಅದ್ವೈತ್ ಡೋಂಗ್ರೆ ವಂದಿಸಿ, ಅಲ್ರಿಕ್ ಮತ್ತು ಆರ್ಯಮನ್ ನಿರೂಪಿಸಿದರು.

Leave a Comment

error: Content is protected !!