ಬೆಳ್ತಂಗಡಿ: ತಾಲೂಕಿನ ಹೋಬಳಿವಾರು ಸ್ವೀಪ್ ತರಬೇತಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಇಲ್ಲಿನ ಸಂಗಮ ಸಭಾ ಭವನ ಲಾಯಿಲದಲ್ಲಿ ಫೆ . ರಂದು ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಬೆಳ್ತಂಗಡಿ ತಾಲೂಕು ಸ್ವೀಪ್ ಸಮಿತಿಯ ಸಹಯೋಗದಲ್ಲಿ ತಾಲೂಕಿನ ಹೋಬಳಿವಾರು ಸ್ವೀಪ್ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಳ್ತಂಗಡಿ ತಾಲೂಕಿನ ತಹಶೀಲ್ದಾರ್ ಪೃಥ್ವಿ ಸಾನಿಕಂ ತಾಲೂಕಿನ ಚುನಾವಣಾ ವ್ಯವಸ್ಥೆಯಲ್ಲಿ ಆಗಿರುವ ಸುಧಾರಣೆಗಳು ಹಾಗೂ ಬಿ.ಎಲ್.ಒ ಗಳು ನಿರ್ವಹಿಸುವ ಕಾರ್ಯಗಳನ್ನು ಶ್ಲಾಘಿಸಿ , 2024 ರ ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವಲ್ಲಿ ಸ್ವೀಪ್(SVEEP) ಸಮಿತಿಯ ಈ ತರಬೇತಿಯು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ದ.ಕ ಜಿಲ್ಲಾ ಸ್ವೀಪ್ ಸಮಿತಿಯ DLMT(District Level master trainer) ಯೋಗೇಶ ಹೆಚ್.ಆರ್ 2009 ರಿಂದ ಸ್ವೀಪ್ ಸಮಿತಿಯು ಕೈಗೊಂಡಿರುವ ಮತದಾರ ಜಾಗೃತಿ ಕಾರ್ಯಕ್ರಮವು ಮತದಾನ ಪ್ರಮಾಣ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ,ಈ ಬಾರಿ ಅರ್ಹರೆಲ್ಲರೂ ಮತದಾರರ ಪಟ್ಟಿಗೆ ನೋಂದಣಿಯಾಗುವಂತೆ ಮಾಡುವ ಹಾಗೂ ನೋಂದಾಯಿತರೆಲ್ಲರೂ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶವನ್ನು ಹೊಂದಿದೆ ಎಂದರು.

ಸ್ವೀಪ್-4 ರಲ್ಲಿ ,ಶೇಕಡ ಐದರಷ್ಟು ಮತದಾನದ ಪ್ರಮಾಣವನ್ನು ಹೆಚ್ಚಿಸುವ ಗುರಿ ಹಾಗೂ ಇದರಲ್ಲಿ ಬಿ.ಎಲ್.ಒ ಹಾಗೂ ಸೂಪರ್ವೈಸರ್ ಗಳು ವಹಿಸುವ ಪಾತ್ರ ಬಹಳ ಮುಖ್ಯ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕು SVEEP(Systematic Voter’s Education & Electoral Participation ) ಸಮಿತಿಯ ಅಧ್ಯಕ್ಷರು, ತಾ.ಪಂ ನ ಕಾರ್ಯನಿರ್ವಾಹಣಾಧಿಕಾರಿಗಳಾದ ಭವಾನಿ ಶಂಕರ್ ರವರ ಅನುಪಸ್ಥಿತಿಯನ್ನು ಸ್ಮರಿಸಿ
ಸ್ವೀಪ್ ತರಬೇತಿ ನಡೆಸಲು ಅವರು ಮಾಡಿಕೊಟ್ಟಿರುವ ವ್ಯವಸ್ಥೆಗಳನ್ನು ಶ್ಲಾಘಿಸಿದರು.

ವೇದಿಕೆಯಲ್ಲಿ ತಾ.ಪಂ. ನ ವ್ಯವಸ್ಥಾಪಕರಾದ ಪ್ರಶಾಂತ್ ರವರು ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮವನ್ನು ತಾ.ಸಂಪನ್ಮೂಲ ವ್ಯಕ್ತಿ(TLMT) ಶುಭ ಕೆ ನಿರೂಪಿಸಿ, TLMT ದಿವ್ಯಾ ಕುಮಾರಿ ಸ್ವಾಗತಿಸಿ, TLMT ರವಿಕುಮಾರ್ ಬಿ.ಆರ್. ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿ ವಂದಿಸಿದರು.

ಈ ಸಂದರ್ಭದಲ್ಲಿ PDO ಅಶೋಕ್ ತಾ.ಪಂ. ನ ವಿಷಯ ನಿರ್ವಾಹಕರಾದ ಸುಶೀಲಾ ಹಾಗೂ ಇತರೆ ಸಿಬ್ಬಂದಿಗಳು ಸಹಕರಿಸಿದರು.

Leave a Comment

error: Content is protected !!