29.6 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಾ.1: ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ವತಿಯಿಂದ ಪಿಂಕ್ ಮ್ಯಾರಥಾನ್ “ನಾರಿ ಇನ್ ಪಿಂಕ್ ಸಾರಿ”ಕ್ಯಾನ್ಸರ್ ಜಾಗೃತಿ ಜಾಥಾ ಕಾರ್ಯಕ್ರಮ

ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಮಹಿಳಾ ಜೆಸಿ ಹಾಗೂ ಜೂನಿಯರ್ ಜೆಸಿ ವಿಭಾಗದ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಬೆಳ್ತoಗಡಿ, ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ, ಮಹಿಳಾ ವೃಂದ ಬೆಳ್ತಂಗಡಿ, ತಾಲೂಕು ಆರೋಗ್ಯ ಅಧಿಕಾರಿ ಕಚೇರಿ ಬೆಳ್ತಂಗಡಿ, ಪಂಚಶ್ರೀ ಭಜನಾ ಮಂಡಳಿ ಬಳಂಜ, ಶ್ರೀ ಬಲಮುರಿ ಗಣಪತಿ ಭಜನಾ ಮಂಡಳಿ ಲಾಯಿಲ ಮತ್ತು ಲಿಯೋ ಕ್ಲಬ್ ಬೆಳ್ತಂಗಡಿ ಇದರ ಜಂಟಿ ಸಹಯೋಗದಲ್ಲಿ ಪಿಂಕ್ ಮ್ಯಾರಥಾನ್ “ನಾರಿ ಇನ್ ಪಿಂಕ್ ಸಾರಿ”ಕ್ಯಾನ್ಸರ್ ಜಾಗೃತಿ ಜಾಥಾ ಮಾ.1ರಂದು ಸಂಜೆ 5 ಘಂಟೆಗೆ ಬೆಳ್ತಂಗಡಿ ಸಂತೆಕಟ್ಟೆ ಅಯ್ಯಪ್ಪ ಗುಡಿಯಿಂದ ಜೆಸಿ ಭವನದವರೆಗೆ ನಡೆಯಲಿದೆ.

ಪಿಂಕ್ ಮ್ಯಾರಥಾನ್ ಗೆ ಬೆಳ್ತಂಗಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯಾ ಆಗ್ನೇಸ್ ಚಾಲನೆ ನೀಡಲಿದ್ದಾರೆ.

ಸಂಜೆ 6 ಗಂಟೆಗೆ ಜೆಸಿ ಭವನದಲ್ಲಿ ಸಭಾಕಾರ್ಯಕ್ರಮ ನಡೆಯಲ್ಲಿದ್ದು ಕ್ಯಾನ್ಸರ್ ಬಗ್ಗೆ ಜಾಗೃತಿಯನ್ನು ಡಾ.ವಿದ್ಯಾವತಿ, ನಿವೃತ್ತ ಸರಕಾರಿ ತಜ್ಞ ವೈದ್ಯರು ನೀಡಲಿದ್ದಾರೆ.

ಜೆಸಿಐ ಬೆಳ್ತಂಗಡಿಯ ಮಹಿಳಾ ವಿಭಾಗದ ಸಂಯೋಜಕರಾದ ಜೆಸಿ ಶ್ರುತಿ ರಂಜಿತ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ “ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ” ವಿಭಾಗದಲ್ಲಿ ಮೆಸ್ಕಾಂ ಬೆಳ್ತಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಗೇಶ್ ಕುಲಾಲ್ ಇವರನ್ನು ಗೌರವವಿಸಲಿದ್ದೇವೆ.

ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಾಗಿ ಲ. ಉಮೇಶ್ ಶೆಟ್ಟಿ, ಅಧ್ಯಕ್ಷರು ಲಯನ್ಸ್ ಕ್ಲಬ್ ಬೆಳ್ತಂಗಡಿ, ಜೆಸಿ ಶಂಕರ್ ರಾವ್, ವಲಯ ಉಪಾಧ್ಯಕ್ಷರು,ಶ್ರೀಮತಿ ಶಾಂತ ಬಂಗೇರ, ಗೌರವಾಧ್ಯಕ್ಷರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಬೆಳ್ತಂಗಡಿ,ಶ್ರೀಮತಿ ಸವಿತಾ ಜಯದೇವ, ಅಧ್ಯಕ್ಷರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ, ಶ್ರೀಮತಿ ಆಶಾ ಸತೀಶ್, ಅಧ್ಯಕ್ಷರು ಮಹಿಳಾ ವೃಂದ ಬೆಳ್ತಂಗಡಿ, ಶ್ರೀಮತಿ ಪುಷ್ಪ ಗಿರೀಶ್, ಅಧ್ಯಕ್ಷರು ಪಂಚಶ್ರೀ ಭಜನಾ ಮಂಡಳಿ ಬಳಂಜ, ಪ್ರಸಾದ್ ಓಡದಕರಿಯ, ಅಧ್ಯಕ್ಷರು ಶ್ರೀ ಬಲಮುರಿ ಗಣಪತಿ ಭಜನಾ ಮಂಡಳಿ ಲಾಯಿಲ ಇವರುಗಳು ಭಾಗವಹಿಸಲಿದ್ದಾರೆ.ಜೆಸಿ ಮಧುರ ರಾಘವ್ ಕಾರ್ಯಕ್ರಮದ ನಿರ್ದೇಶಕರಾಗಿರುತ್ತಾರೆ ಎಂದು ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷ ರಂಜಿತ್ ಹೆಚ್.ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಥಮ ದರ್ಜೆ ಸಹಾಯಕ ಸುರೇಶ್ ಪೂಜಾರಿ ಸೇವೆಯಿಂದ ನಿವೃತ್ತಿ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ರಾಷ್ಟ್ರೀಯ ಯುವದಿನಾಚರಣೆ

Suddi Udaya

ಹಳ್ಳಿಂಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ “ಕ್ಷೀರಾಬ್ಧಿ” ಉದ್ಘಾಟನೆ

Suddi Udaya

ಕಾಶಿಪಟ್ಣ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ಉಜಿರೆ ಗ್ರಾಮ ಪಂಚಾಯತ್ ನ ಗ್ರಾಮಸಭೆ

Suddi Udaya

ಧರ್ಮಸ್ಥಳದ ಬಿ. ಪ್ರಕಾಶ ದೇವಾಡಿಗರವರು ಸ್ಯಾಕ್ಸೋಪೋನ್ ಕಾರ್ಯಕ್ರಮ ನೀಡಲು ಮೂರನೇ ಬಾರಿಗೆ ಅಮೇರಿಕಕ್ಕೆ

Suddi Udaya
error: Content is protected !!