ಮಾ.5: ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಗ್ಯಾರಂಟಿ ಸಮಾವೇಶ

Suddi Udaya

ಬೆಳ್ತಂಗಡಿ : ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಮಾ.5 ರಂದು ಗ್ಯಾರಂಟಿ ಸಮಾವೇಶವನ್ನು ಆಯೋಜಿಸುವ ಕುರಿತು ಮಾ.1ರಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಯಿತು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಿ ಕಾಂಗ್ರೆಸ್ ತನ್ನ ಚುನಾವಣಾ ಸಂದರ್ಭದಲ್ಲಿ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು, ಬಹುಶಃ ಕರ್ನಾಟಕದ ಇತಿಹಾಸದಲ್ಲಿ ದಾಖಲೆ ನಿರ್ಮಾಣ ಮಾಡಿದಂತಹ ಯೋಜನೆ ಯಾವುದಾದರೂ ಇದ್ದರೆ ಅದು ಈ ಗ್ಯಾರಂಟಿ ಯೋಜನೆ, ಅಂತಹ ಒಂದು ಯೋಜನೆಯನ್ನು ನುಡಿದಂತೆ ನಡೆದ ಸರ್ಕಾರ ಅದು ನಮ್ಮ ಕಾಂಗ್ರೆಸ್ ಸರ್ಕಾರ. ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಹಾಗೂ ತಾಲೂಕಿನ ಪ್ರತೀ ಅರ್ಹ ಫಲಾನುಭವಿಗಳಿಗೆ ಈ ಯೋಜನೆಯ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ತಲುಪಿಸುವ ಉದ್ದೇಶದಿಂದ ತಾಲೂಕು ಮಟ್ಟದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಗ್ಯಾರಂಟಿ ಸಮಾವೇಶವು ಮಾ.5ರಂದು ಬೆಳಿಗ್ಗೆ 10.30 ಕ್ಕೆ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಫಲಾನುಭವಿಗಳ ಸಮಾವೇಶವು ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನ ಜೈನ್ ಪೇಟೆ ಬೆಳ್ತಂಗಡಿಯಲ್ಲಿ ನಡೆಯಲಿದೆ.

ಈ ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರು, ಜಿಲ್ಲೆಯ ಹಾಗೂ ತಾಲೂಕಿನ ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ.

ಬೆಳಿಗ್ಗೆ 10: 30 ಯಿಂದ 2 ಗಂಟೆಯ ವರೆಗೆ ನಡೆಯಲಿದ್ದು, ಯಾರಿಗೆಲ್ಲ ಈ ಯೋಜನೆ ದೊರಕಿಲ್ಲ ಅವರೆಲ್ಲ ಈ ಯೋಜನೆಗೆ ಬರಬೇಕು, ಪ್ರತ್ಯೇಕವಾದ ಕೌಂಟರ್ ಗಳು ಇರುತ್ತದೆ. ಯೋಜನೆಗೆ ಸಂಬಂಧ ಪಟ್ಟ ಯಾವುದೇ ಸಮಸ್ಯೆಗಳಿಗೂ ಕೂಡ ಅಲ್ಲೇ ಪರಿಹಾರ ಕೊಡಲಾಗುತ್ತದೆ.
ಗೃಹ ಜ್ಯೋತಿ ಜು.23 ರಿಂದ ಜ. 24 ರ ವರೆಗೆ 66 ಸಾವಿರ ಫಲಾನುಭವಿಗಳು ಸದುಪಯೋಗ ಪಡೆದುಕೊಂಡಿದ್ದಾರೆ. ಅನ್ನ ಭಾಗ್ಯ ಯೋಜನೆಯಲ್ಲಿ ಸರಿ ಸುಮಾರು 48 ಸಾವಿರ ಕುಟುಂಬಗಳು ಫಲಾನುಭವಿಗಳಾಗಿದ್ದಾರೆ.
ರೇಷನ್ ಕಾರ್ಡ್ ಸಮಸ್ಯೆ, ಆಧಾರ್ ಕಾರ್ಡ್ ಜೋಡಣೆ, ಕೆವೈಸಿ ಅಪ್ಲೋಡ್ ಮಾಡುವ ಕೆಲಸ ಆ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಕುಮಾರ್, ಬೆಳ್ತಂಗಡಿ ಯುವ ಕಾಂಗ್ರೆಸ್ ಗ್ರಾಮೀಣ ಸಮಿತಿ ಅಧ್ಯಕ್ಷ ಹಕೀಂ ಕೊಕ್ಕಡ, ಬೆಳ್ತಂಗಡಿ ಯುವ ಕಾಂಗ್ರೆಸ್ ನಗರ ಸಮಿತಿ ಅಧ್ಯಕ್ಷ ಸುದರ್ಶನ್ ಆರಂಬೋಡಿ ಉಪಸ್ಥಿತರಿದ್ದರು.

Leave a Comment

error: Content is protected !!