25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಹೊಸಂಗಡಿ: ಪೆರಿಂಜೆ ಮಲಿಯಾಳ ಪಲ್ಕೆಯಲ್ಲಿ ದ್ವಿಚಕ್ರ ವಾಹನಗಳ ನಡುವೆ ಅಪಘಾತ: ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಹೊಸಂಗಡಿ : ಪೆರಿಂಜೆ ಮಲಿಯಾಳ ಪಲ್ಕೆ ಎಂಬಲ್ಲಿ ದ್ವಿಚಕ್ರ ವಾಹನಗಳ ನಡುವೆ ಅಪಘಾತ ನಡೆದ್ದಿದ್ದು ಈ ಬಗ್ಗೆ ಫೆ.29ರಂದು ವರದಿಯಾಗಿದೆ.

ಬೆಳ್ತಂಗಡಿ ತಾಲೂಕು ಹೊಸಂಗಡಿ ಗ್ರಾಮದ ಪೆರಿಂಜೆ ಮಲಿಯಾಳ ಪಲ್ಕೆ ಎಂಬಲ್ಲಿ ಆರಂಬೋಡಿ – ಪಡ್ಯಾರಬೆಟ್ಟು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಬೊಳ್ಳಾಜೆ ಎಂಬಲ್ಲಿಂದ ಶಾಂತಿಕಾಡು ಕಡೆಗೆ ವಸಂತರವರು ಸಹಸವಾರರಾಗಿ ಸವಾರಿ ಮಾಡಿಕೊಂಡು ಬರುತ್ತಿದ್ದ ದ್ವಿಚಕ್ರ ವಾಹನ ನಂ: ಕೆಎ 19 ಹೆಚ್‌ ಎನ್‌ 0984 ನೇದನ್ನು ಆರೋಪಿತ ಸವಾರ ಎಡ್ವರ್ಡ್‌ ಎಂಬವರು ಇಳಿಜಾರು ಹಾಗೂ ಕಿರಿದಾದ ಪ್ರದೇಶದಲ್ಲಿ ಎದುರಿನಿಂದ ಅಂದರೆ ಪಡ್ಯಾರಬೆಟ್ಟು ಕಡೆಯಿಂದ ಬರುತ್ತಿದ್ದ ಟಿಪ್ಪರ್‌ ಲಾರಿಯನ್ನು ಕಂಡು ಒಮ್ಮೆಲೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿದ ಪರಿಣಾಮ ದ್ವಿಚಕ್ರ ವಾಹನವು ಡಾಮಾರು ರಸ್ತೆಯ ಅಂಚಿನಲ್ಲಿ ಅಂದರೆ ತಗ್ಗು(ಗುಂಡಿ) ಪ್ರದೇಶದಲ್ಲಿ ಚಲಾಯಿಸಿದಾಗ ಸಹಸವಾರರಾಗಿ ಕುಳಿತಿದ್ದ ವಸಂತರವರ ಹಿಡಿತ ತಪ್ಪಿ ದ್ವಿಚಕ್ರ ವಾಹನದಿಂದ ರಸ್ತೆಗೆ ಕುಸಿದು ಬಿದ್ದು, ಬೆನ್ನಿಗೆ ಗುದ್ದಿದ ಪರಿಣಾಮ ತೀವ್ರ ನೋವುಂಟಾದವರನ್ನು ಆರೋಪಿ ಸವಾರ ಹಾಗೂ ಇತರರು ಸೇರಿ ಖಾಸಗಿ ವಾಹನದಲ್ಲಿ ಕಾರ್ಕಳದ ಸ್ಪಂದನಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುತ್ತಾರೆ.

ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

Related posts

ಬಜಿರೆ ಹೊಸಪಟ್ಣ ಪೇರಂದಡ್ಕ ನಿವಾಸಿ ಸುಂದರಿ ನಿಧನ

Suddi Udaya

ಜ 7: ಪೆರಾಡಿ ಮಾವಿನಕಟ್ಟೆಯಲ್ಲಿ 50ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವ

Suddi Udaya

ಕೊಕ್ಕಡದಲ್ಲಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನೆ

Suddi Udaya

ಎಸ್.ಡಿ.ಎಂ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆ ಭೇಟಿ

Suddi Udaya

ಲಾಯಿಲ ಪ್ರಸನ್ನ ಪ.ಪೂ. ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಫೌಂಡೇಶನ್‌ ತರಗತಿ ಆರಂಭ

Suddi Udaya

ವೇಣೂರು : ದಿ| ಸತೀಶ್ ಆಚಾರ್ಯ ರವರ ಮನೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ

Suddi Udaya
error: Content is protected !!