ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ವತಿಯಿಂದ ಪಿಂಕ್ ಮ್ಯಾರಥಾನ್ “ನಾರಿ ಇನ್ ಪಿಂಕ್ ಸಾರಿ”ಕ್ಯಾನ್ಸರ್ ಜಾಗೃತಿ ಜಾಥಾ ಕಾರ್ಯಕ್ರಮ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಮಹಿಳಾ ಜೆಸಿ ಹಾಗೂ ಜೂನಿಯರ್ ಜೆಸಿ ವಿಭಾಗದ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಬೆಳ್ತoಗಡಿ, ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ (ರಿ) ಬೆಳ್ತಂಗಡಿ, ಎನ್.ಸಿಸಿ ಘಟಕ ಎಸ್.ಡಿ.ಎಮ್ ಕಾಲೇಜು ಉಜಿರೆ, ಮಹಿಳಾ ವೃಂದ (ರಿ) ಬೆಳ್ತಂಗಡಿ, ತಾಲೂಕು ಅರೋಗ್ಯ ಅಧಿಕಾರಿ ಕಚೇರಿ ಬೆಳ್ತಂಗಡಿ, ಪಂಚಶ್ರೀ ಭಜನಾ ಮಂಡಳಿ ಬಳಂಜ, ಶ್ರೀ ಬಲಮುರಿ ಗಣಪತಿ ಭಜನಾ ಮಂಡಳಿ ಲಾಯಿಲ ಮತ್ತು ಲಿಯೋ ಕ್ಲಬ್ ಬೆಳ್ತಂಗಡಿ ಇದರ ಜಂಟಿ ಸಹಯೋಗದಲ್ಲಿ ಪಿಂಕ್ ಮ್ಯಾರಥಾನ್ “ನಾರಿ ಇನ್ ಪಿಂಕ್ ಸಾರಿ” ಕ್ಯಾನ್ಸರ್ ಜಾಗೃತಿ ಜಾಥಾ ವನ್ನು ಮಾ.01ರಂದು ಬೆಳ್ತಂಗಡಿ ಸಂತೆಕಟ್ಟೆ ಅಯ್ಯಪ್ಪ ಗುಡಿಯಿಂದ ಜೆಸಿ ಭವನದ ವರೆಗೆ ಆಯೋಜಿಸಲಾಯಿತು.

ಪಿಂಕ್ ಮ್ಯಾರಥಾನ್ ಗೆ ಜಾಥಾಕ್ಕೆ ಬೆಳ್ತಂಗಡಿ ತಾಲೂಕಿನ ತಹಶೀಲ್ದಾರ್ ಪೃಥ್ವಿ ಸಾನಿಕಮ್ ಮತ್ತು ಬೆಳ್ತಂಗಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ (CDPO )ಶ್ರೀಮತಿ ಪ್ರಿಯಾ ಆಗ್ನೇಸ್ ಚಾಲನೆಯನ್ನು ನೀಡಿ ಉತ್ತಮ ಕಾರ್ಯಕ್ರಮ ಆಯೋಜಿಸಿದ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಹಾಗೂ ಸಹಕರಿಸಿದ ಎಲ್ಲಾ ಸಂಘ ಸಂಸ್ಥೆಗಳಿಗೆ ಅಭಿನಂದಿಸಿದರು.

ಸಂಜೆ ಜೆಸಿ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಬಗ್ಗೆ ಡಾ| ವಿದ್ಯಾವತಿ, ನಿವೃತ್ತ ಸರಕಾರಿ ತಜ್ಞ ವೈದ್ಯರು, ಬೆಳ್ತಂಗಡಿ ಇವರು ಜಾಗೃತಿಯನ್ನು ನೀಡಿದರು ಮತ್ತು ಸಂವಾದ ನಡೆಸಿದರು.

ಜೆಸಿಐ ಬೆಳ್ತಂಗಡಿಯ ಮಹಿಳಾ ವಿಭಾಗದ ಸಂಯೋಜಕರಾದ ಜೆಸಿ ಶ್ರುತಿ ರಂಜಿತ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಾಗಿ ಲ.ಉಮೇಶ್ ಶೆಟ್ಟಿ, ಅಧ್ಯಕ್ಷರು ಲಯನ್ಸ್ ಕ್ಲಬ್ ಬೆಳ್ತಂಗಡಿ, ಶಂಕರ್ ರಾವ್, ವಲಯ ಉಪಾಧ್ಯಕ್ಷರು, ವಲಯ 15, ಜೆಸಿಐ ಭಾರತ, ಶ್ರೀಮತಿ ಶಾಂತ ಬಂಗೇರ, ಗೌರವಾಧ್ಯಕ್ಷರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಬೆಳ್ತಂಗಡಿ(ರಿ) , ಶ್ರೀಮತಿ ಸವಿತಾ ಜಯದೇವ, ಅಧ್ಯಕ್ಷರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ (ರಿ ), ಬೆಳ್ತಂಗಡಿ, ಶ್ರೀಮತಿ ಆಶಾ ಸತೀಶ್, ಅಧ್ಯಕ್ಷರು ಮಹಿಳಾ ವೃಂದ (ರಿ) ಬೆಳ್ತಂಗಡಿ, ಶ್ರೀಮತಿ ಪುಷ್ಪ ಗಿರೀಶ್, ಅಧ್ಯಕ್ಷರು ಪಂಚಶ್ರೀ ಭಜನಾ ಮಂಡಳಿ ಬಳಂಜ, ಶ್ರೀಮತಿ ಉಷಾ,ಸದಸ್ಯರು ಶ್ರೀ ಬಲಮುರಿ ಗಣಪತಿ ಭಜನಾ ಮಂಡಳಿ ಲಾಯಿಲ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಘಟಕದ ಅಧ್ಯಕ್ಷರಾದ ರಂಜಿತ್ ಎಚ್ ಡಿ ಬಳಂಜ ಸ್ವಾಗತಿಸಿದರು. ವೇದಿಕೆ ಆಹ್ವಾನವನ್ನು ಘಟಕದ ಉಪಾಧ್ಯಕ್ಷರಾದ ಹೇಮಾವತಿ ಕೆ, ಜೆಸಿ ವಾಣಿಯನ್ನು ಉಪಾಧ್ಯಕ್ಷರಾದ ಜೆಸಿ ಆಶಾ ಪ್ರಶಾಂತ್, ಸಂಪನ್ಮೂಲ ವ್ಯಕ್ತಿಗಳ ಪರಿಚಯವನ್ನು ಜೆಸಿ ಸುಭಾಷಿಣಿ, ಸನ್ಮಾನ ಪತ್ರವನ್ನು ಕಾರ್ಯಕ್ರಮದ ಸಂಯೋಜಕರಾದ ಜೆಸಿ ಮಧುರ ರಾಘವ್ ವಾಚಿಸಿದರು. ಘಟಕದ ಕಾರ್ಯದರ್ಶಿಗಳಾದ ಅನುದೀಪ್ ಜೈನ್ ಧನ್ಯವಾದ ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ ಜೆಸಿಐ ಬೆಳ್ತಂಗಡಿಯ ಪೂರ್ವ ಅಧ್ಯಕ್ಷರುಗಳು, ಮಹಿಳಾ ವಿಭಾಗದ ಪೂರ್ವ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಎಲ್ಲಾ ಸಹಯೋಗ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರುಗಳು, ಸಾರ್ವಜನಿಕರು ಭಾಗವಹಿಸಿದರು.

Leave a Comment

error: Content is protected !!