25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸಿಯೋನ್ ಆಶ್ರಮದಲ್ಲಿ ಉಚಿತ ಶ್ರವಣದೋಷ ತಪಾಸಣಾ ಶಿಬಿರ

ನೆರಿಯ: ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಮಾ.1 ರಂದು ಮಂಗಳೂರು ಫಾದರ್ ಮುಲ್ಲರ್ಸ್ ಕಾಲೇಜು ಮತ್ತು ಮಂಗಳೂರು ರೋಶನಿ ನಿಲಯ ಸಮಾಜಕಾರ್ಯ ವಿಭಾಗದ ಕಾಲೇಜು ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ಶ್ರವಣದೋಷ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.

ಶಿಬಿರವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಫಾದರ್ ಮುಲ್ಲರ್ಸ್ ಕಾಲೇಜು ವೈದ್ಯರುಗಳಾದ ವಿಯೋನಾ ಮರಿಯನ್ ಡಿ’ಸೋಜ, ಲಕ್ಷ್ಮಿ ಎಸ್. ಕುನ್ನತ್ ಮತ್ತು ತಂಡದವರು ಶಿಬಿರಾರ್ಥಿಗಳನ್ನು ತಪಾಸಣೆ ನಡೆಸಿದರು. 160 ಕ್ಕೂ ಅಧಿಕ ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದುಕೊಂಡರು.

ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟೀಯವರಾದ ಡಾ.ಯು.ಸಿ.ಪೌಲೋಸ್‌ರವರು, ಟ್ರಸ್ಟೀ ಸದಸ್ಯರಾದ ಶ್ರೀಮತಿ ಮೇರಿ ಯು.ಪಿ.ಯವರು, ಮ್ಯಾನೇಜರ್ ಸಂದ್ಯಾ ಸುಭಾಷ್‌ರವರು, ರೋಶನಿ ನಿಲಯದ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು, ಸಿಯೋನ್ ಆಶ್ರಮದ ಆಡಳಿತ ಮಂಡಳಿಯವರು ಮತ್ತು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

Related posts

ಮದ್ದಡ್ಕ ಮಠದಲ್ಲಿ ಶ್ರೀ ರಾಮೋತ್ಸವ ಆಚರಣೆ:ಆಯೋಧ್ಯೆ ಶ್ರೀರಾಮ ಮಂದಿರ ಹೊಕ್ಕರೆ ದೇಶದ ಸಂಸ್ಕೃತಿಗಳ ಅನಾವರಣ: ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

Suddi Udaya

ಪುತ್ತೂರು : ರಾಧಾ’ಸ್‌ನಲ್ಲಿ ಆಫರ್‌ಗಳ ಬಿಗ್‌ಬಾಸ್‌ ರಾಧಾ’ಸ್ ಉತ್ಸವದ 11ನೇ ವಾರದ ಡ್ರಾ. ವಿಜೇತರು

Suddi Udaya

ಉಜಿರೆ ಗ್ರಾಮ ಪಂಚಾಯಿತಕ್ಕೆ
ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಪ್ರದಾನ

Suddi Udaya

ಮರ ಕಟ್ಟಿಂಗ್ ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಮೆಷಿನ್ ತಗುಲಿ ಸಾವ್ಯದ ವ್ಯಕ್ತಿ ಪ್ರಶಾಂತ್ ಪೂಜಾರಿ ಸಾವು

Suddi Udaya

ಮಡಂತ್ಯಾರು ಉಪ್ಪಿನಂಗಡಿ ರಸ್ತೆಯ ಮಾರಿಗುಡಿ ಸಮೀಪ ಅಪಾಯಕಾರಿ ಮರ: ಸಂಬಂಧಪಟ್ಟ ಇಲಾಖೆಯವರು ತೆರವುಗೊಳಿಸುವಂತೆ ಸ್ಥಳೀಯರ ಒತ್ತಾಯ

Suddi Udaya

ನಾವೂರಿನಲ್ಲಿ 78ನೇ ವರ್ಷದ ಸ್ವಾತಂತ್ರ್ಯೋತ್ಸವ

Suddi Udaya
error: Content is protected !!