24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಕ್ಕಡ: ಮೈಪಾಲ ಸೇತುವೆ ಬಳಿ ನೀರಿನ ಟ್ರಾಕ್ಟರ್‌ ಪಲ್ಟಿಯಾಗಿ ಕಾರ್ಮಿಕ ಸಾವು: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಕೊಕ್ಕಡ ಗ್ರಾಮದ ಮೈಪಾಳ ಎಂಬಲ್ಲಿ ಸೇತುವೆ ನಿರ್ಮಾಣ ಮತ್ತು ಡ್ಯಾಮ್ ಕಾಮಾಗಾರಿಗೆ ಬಂದಿದ್ದ ಹಾವೇರಿಯ ಯುವಕ ನೀರಿನ ಟ್ರಾಕ್ಟರ್‌ ಪಲ್ಟಿಯಾಗಿ ಸಾವನಪ್ಪಿದ ಘಟನೆ ಮಾ.1ರಂದು ನಡೆದಿದೆ.

ಹಾವೇರಿ ಯಳಗಚ್ಚು ಗ್ರಾಮ, ಕರ್ಜಗಿ ಹೋಬಳಿ ನಿವಾಸಿ ಮಂಜಪ್ಪ ಬರಮಪ್ಪ ತೋಟಿಗೇರ್‌ (40) ಎಂಬವರ ದೂರಿನಂತೆ, ಮಂಜಪ್ಪ ಹಾಗೂ ಮೃತ ಸುರೇಶ್‌ ಮಲ್ಲಪ್ಪ ಹೊಸಮನಿ ಎಂಬವರು ಕೊಕ್ಕಡ ಗ್ರಾಮದ ಮೈಪಾಳ ಎಂಬಲ್ಲಿ ಮೈಪಾಳ ವೆಂಟೆಂಡ್‌ ಡ್ಯಾಮ್‌ ಬ್ರಿಡ್ಜ್‌ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಕೆಲಸ ಮಾಡಿಕೊಂಡಿದ್ದು, ಮಾ.01 ರಂದು ಮದ್ಯಾಹ್ನ, ಮೃತ ಸುರೇಶ್‌ ಮಲ್ಲಪ್ಪ ಹೊಸಮನಿ ರವರು ನೀರಿನ ಟ್ಯಾಂಕರ್‌ ನಲ್ಲಿ ನೀರು ತುಂಬಿಸಿಕೊಂಡು, ಟ್ಯಾಂಕರ್‌ ನ್ನು ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಟ್ರಾಕ್ಟರ್‌ ಪಲ್ಟಿಯಾಗಿ ಚಾಲಕ ಸುರೇಶ್‌ ನು ಟ್ರಾಕ್ಟರ್ ನ ಅಡಿಯಲ್ಲಿ ಬಿದ್ದಿರುವುದಾಗಿದೆ. ಆಗ ಸ್ಥಳದಲ್ಲಿದ್ದವರು ಟ್ರಾಕ್ಟರ್‌ ನ್ನು ಆತನ ಮೇಲಿಂದ ಎತ್ತಿ ಬದಿಗೆ ನಿಲ್ಲಿಸಿ, ಆತನನ್ನು ಆರೈಕೆ ಮಾಡಲಾಗಿ, ಆತನ ತಲೆ ಜಜ್ಜಿ ಹೋಗಿ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ ಕ್ರ: 15/2024 ಕಲಂ: 304 (A), ಐ ಪಿ ಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಶಿಬಾಜೆ ಗ್ರಾಮ ಪಂಚಾಯತ್ ನ ಗ್ರಾಮಸಭೆ

Suddi Udaya

ಪದಗ್ರಹಣ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಎಲ್.ಹೆಚ್. ಮಂಜುನಾಥ್

Suddi Udaya

ಹತ್ಯಡ್ಕ ಪ್ರಾ.ಕೃ.ಪ.ಸ. ಸಂಘ ಅರಸಿನಮಕ್ಕಿ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಟಿ. ರವಿಚಂದ್ರ ರಾವ್

Suddi Udaya

ಭಗವದ್ಗೀತೆಯ 700 ಶ್ಲೋಕದ ಕಂಠಪಾಠ ಪರೀಕ್ಷೆ: ಸುರ್ಯ ಪಡ್ಪುವಿನ ಅದ್ವಿತಿ ರಾವ್ ಪ್ರಥಮ ಶ್ರೇಣಿ

Suddi Udaya

ಉಜಿರೆ: ಶ್ರೀ ಧ. ಮಂ. ಪ.ಪೂ. ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

Suddi Udaya

ಧರ್ಮಸ್ಥಳದಿಂದ ನಾರಾವಿಗೆ ಕೆಎಸ್ ಆರ್ ಟಿ ಸಿ ಬಸ್ ಸಂಚಾರ ಮುಂದೂಡಿಕೆ

Suddi Udaya
error: Content is protected !!