ಖಾಸಗಿ ವಿಮಾಕಂಪೆನಿಗಳಿಂದ ವಿಮಾ ಕಾನೂನಿನ ಉಲ್ಲಂಘನೆ ಆರೋಪ: ಜನಸಾಮಾನ್ಯರಿಗೆ ಅನ್ಯಾಯ: ಹಷ೯ ಡಿ’ಸೋಜ

Suddi Udaya

ಬೆಳ್ತಂಗಡಿ: ಅಪಘಾತ ವಾಹನಗಳಿಗೆ ಖಾಸಗಿ ವಿಮಾ ಕಂಪೆನಿಯವರು ವಿಮೆ ಪರಿಹಾರ ನೀಡುವಾಗ ಕಾನೂನು ಉಲ್ಲಂಘಿನೆ ಮಾಡುತ್ತಾರೆ. ಏಕೆಂದರೆ ಮೌಲ್ಯಮಾಪನವನ್ನು ತಮ್ಮ ಸಿಬ್ಬಂದಿಗಳು ಹಾಗೂ ಗುತ್ತಿಗೆಯವರು ಮಾಡುವಾಗ ಅವರು ಕಂಪೆನಿಯ ಹಿತ ದೃಷ್ಟಿಯನ್ನು ಕಾಪಾಡಲು ಕಡಿಮೆ ಪರಿಹಾರ ಕೊಡಬೇಕೆಂದು ವರದಿಯಲ್ಲಿ ಶಿಫಾರಸ್ಸು ಮಾಡುತ್ತಾರೆ ಇದರಿಂದಾಗಿ ಜನ ಸಾಮಾನ್ಯರಿಗೆ ಅನ್ಯಾಯವಾಗುತ್ತದೆ. ಎಂದು IIISLA ಮಂಗಳೂರು ಯುನಿಟ್ ಕೋ ಅಡಿ೯ನೇಟರ್ ಹಷ೯ ಡಿ’ ಸೋಜ ಆರೋಪಿಸಿದರು.


ಅವರು ಮಾ.2 ರಂದು ಬೆಳ್ತಂಗಡಿ ಸುವರ್ಣ ಆಕೇ೯ಡ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರತೀ ಮನೆಯಲ್ಲೂ ಒಂದು ದ್ವಿಚಕ್ರ ವಾಹನವಾದರೂ ಇರುವುದು ಸಹಜವಾಗಿದೆ. ರಸ್ತೆಯಲ್ಲಿ ಚಲಾಯಿಸುಕೊಂಡು ಹೋಗುವ ಪ್ರತೀ ವಾಹನಕ್ಕೆ ತರ್ಡ್ ಪಾರ್ಟಿ ವಿಮೆ ಮಾಡಿಸುವುದು ಕಡ್ಡಾಯವಾಗಿದೆ. ಇದರಿಂದಾಗಿ ರಸ್ತೆಯಲ್ಲಿ ಅಪಘಾತವಾದರೆ ಗಾಯಗೊಂಡವರಿಗೆ ಪರಿಹಾರ ಸಿಗುತ್ತದೆ ಇದು ದೇಶದ ಕಾನೂನು ವ್ಯವಸ್ಥೆ. ಇದರೊಂದಿಗೆ ಹೆಚ್ಚಿನವರು ತಮ್ಮ ವಾಹನಕ್ಕೆ ಅಪಘಾತದ ಸಂದರ್ಭದಲ್ಲಿ ನಷ್ಟ ಪರಿಹಾರ ಸಿಗಲು ವಿಮೆ ಕಟ್ಟಿರುತ್ತಾರೆ. ಇದಕ್ಕೆ ಫಸ್ಟ್ ಪಾರ್ಟಿ ವಿಮೆ ಎನ್ನುತ್ತಾರೆ ಎಂದರು.

ಆದರೆ ಈ ಕಾನೂನನ್ನು ಹೆಚ್ಚಿನ ಖಾಸಗಿ ವಿಮಾ ಕಂಪೆನಿಯವರು ಉಲ್ಲಂಘನೆ ಮಾಡಿ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುತ್ತಾರೆ. ಇದರಿಂದಾಗಿ ಜನ ಸಾಮಾನ್ಯರಿಗೆ ಅನ್ಯಾಯವಾಗುತ್ತದೆ ಏಕೆಂದರೆ ಮೌಲ್ಯಮಾಪನವನ್ನು ತಮ್ಮ ಸಿಬ್ಬಂದಿಗಳು ಹಾಗೂ ಗುತ್ತಿಗೆಯವರು ಮಾಡುವಾಗ ಅವರು ಕಂಪೆನಿಯ ಹಿತ ದೃಷ್ಟಿಯನ್ನು ಕಾಪಾಡಲು ಕಡಿಮೆ ಪರಿಹಾರ ಕೊಡಬೇಕೆಂದು ವರದಿಯಲ್ಲಿ ಶಿಫಾರಸ್ಸು ಮಾಡುತ್ತಾರೆ ಇದರಿಂದಾಗಿ ಜನ ಸಾಮಾನ್ಯರಿಗೆ ಅನ್ಯಾಯವಾಗುತ್ತದೆ. . ಇಂತಹ ಉಲ್ಲಂಘನೆಗಳು ಕಂಡು ಬಂದಲ್ಲಿ ನಮ್ಮ ಸಂಸ್ಥೆಯ ಪದಾಧಿಕಾರಿಗಳನ್ನು ಸಂಪರ್ಕ ಮಾಡಿದಲ್ಲಿ ನಾವು ಇದನ್ನು ಸಂಭಂದಪಟ್ಟ ಇಲಾಖೆಗಳಿಗೆ ತಿಳಿಸಿ ನ್ಯಾಯ ಒದಗಿಸಲು ಸಹಾಯ ಮಾಡುತ್ತೇವೆ ಎಂದು ತಿಳಿಸಿದ್ದಾರೆ.


ಎರಡನೇಯದಾಗಿ ಖಾಸಗಿ ಕಂಪೆನಿಯವರು ಜನರಿಗೆ ತಮ್ಮ ತಮ್ಮ ವಾಹನದ ದುರಸ್ತಿಯ ಹಣವನ್ನು ತಾವೇ ಪಾವತಿ ಮಾಡಿ ವಾಹನವನ್ನು ಗ್ಯಾರೇಜಿನಿಂದ ಬಿಡುಗಡೆ ಮಾಡಲು ತಿಳಿಸುತ್ತಾರೆ. ಇಂಥಹ ಸಂಧರ್ಭಗಳಲ್ಲಿ ನಂತರ ಹಣ ಪಾವತಿಸುವಾಗ ಕಡಿಮೆ ಹಣ ಮಂಜೂರು ಮಾಡಿ ಜನರಿಗೆ ಮೋಸಮಾಡುತ್ತಾರೆ. ಇಂಥಹ ಸಂಧರ್ಭಗಳಲ್ಲಿ ಹೆಚ್ಚಿನ ಜನ ಕಾನೂನು ಕಟ್ಟಲೆಗೆ ಹೋಗಲು ಹಿಂಜರಿಯುವುದರಿಂದ ಕಂಪೆನಿಯವರು ಅದರ ಲಾಭವನ್ನು ಪಡೆದುಕೊಳ್ಳುತ್ತಾರೆ. ಆದರೆ ಸರ್ಕಾರಿ ಕಂಪೆನಿಗಳು ಕಾನೂನನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಎಲ್ಲಾ ರೂ.50,000/- ಮೇಲ್ಪಟ್ಟ ನಷ್ಟ ಪರಿಹಾರ ಅರ್ಜಿಗಳನ್ನು ಭಾರತ ಸರ್ಕಾರದ ಪರವಾನಿಗೆ ಹೊಂದಿದ ಸರ್ವೇಯರ್ ಗಳನ್ನೇ ನೇಮಿಸಿ ವಿಲೇವಾರಿ ಮಾಡುತ್ತಾರೆ. ಇದರಿಂದಾಗಿ ಜನ ಸಾಮಾನ್ಯರಿಗೆ ನ್ಯಾಯ ದೊರೆಯುತ್ತದೆ ಎಂದು ಹೇಳಿದರು.

ನಮ್ಮ ಸಲಹೆ ಏನೆಂದರೆ ತಮ್ಮ ವಾಹನ ಅಪಘಾತಕ್ಕೀಡಾದರೆ ರೂ.50,000/- ಕ್ಕಿಂತಲೂ ಹೆಚ್ಚಾದ ಅಂದಾಜು ಪಟ್ಟಿಯನ್ನು ಗ್ಯಾರೇಜಿನವರು ಕೊಟ್ಟಲ್ಲಿ ಭಾರತ ಸರ್ಕಾರದ ಪರವಾನಿಗೆ ಮತ್ತು IIISLA ಸದಸ್ಯತ್ವ ಹೊಂದಿದ ಸರ್ವೇಯರ್ ಗಳನ್ನೇ ನೇಮಿಸುವಂತೆ ನೋಡಿಕೊಳ್ಳಿ. ಅಲ್ಲದೆ ತಮ್ಮ ಸಿಬ್ಬಂದಿಗಳನ್ನು ಮೌಲ್ಯಮಾಪನಕ್ಕೆ ಕಳುಹಿಸಿದರೆ ಅಥವಾ ಗ್ಯಾರೇಜಿನವರೇ ಫೊಟೋ ತೆಗೆದು ಕಳುಹಿಸಿ ಮೌಲ್ಯಮಾಪನ ಮಾಡಿದ್ದಲ್ಲಿ ನಮ್ಮ ಸಂಸ್ಥೆಯ ಪದಾಧಿಕಾರಿಗಳಿಗೆ ತಿಳಿಸಬೇಕೆಂದು ಹಾಗೂ ನಾವು ನಿಮ್ಮ ಸಹಾಯಕ್ಕೆ ಬರುತ್ತೇವೆ ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಸವೇ೯ಯರ್ ವಿಷ್ಣು ಮರಾಠೆ, ರಾಜ್ಯ ಘಟಕದ ದೇವದಾಸ್ ಆಳ್ವ, ಹಿರಿಯ ಸವೇ೯ಯರ್ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.

ಮಂಗಳೂರು ಯುನಿಟ್ ಕೋ ಅಡಿ೯ನೇಟರ್ ಹಷ೯ ಡಿ’ ಸೋಜ ಮೊಬೈಲ್ ನಂಬ್ರ: 9880137989

ಸವೇ೯ಯರ್ ವಿಷ್ಣು ಮರಾಠೆ ಮೊಬೈಲ್ ನಂಬ್ರ: 9448549375

Leave a Comment

error: Content is protected !!