ಕಾವಳಮುಡೂರು ಧೂಮಳಿಕೆ ನಿರ್ಮಾಣ ಹಂತದ ಮನೆಯಲ್ಲಿ, ಜಾನುವಾರು ವಧೆ ಪೊಲೀಸ್ ದಾಳಿ ಆರೋಪಿಗಳು ಪರಾರಿ

Suddi Udaya

ಪುಂಜಾಲಕಟ್ಟೆ: ಇಲ್ಲಿಯ ಕಾವಳಮುಡೂರು ಗ್ರಾಮದ ಧೂಮಳಿಕೆ ಎಂಬಲ್ಲಿ ನಿರ್ಮಾಣ ಹಂತದ ಮನೆಯಲ್ಲಿ, ಜಾನುವಾರನ್ನು ವಧೆ ಮಾಡಿ ಮಾಂಸ ಮಾಡುತ್ತಿದ್ದಾಗ, ಪುಂಜಾಲಕಟ್ಟೆ ಪೊಲೀಸರು ದಾಳಿ ಮಾಡಿದ ಪ್ರಕರಣ ಮಾ.2ರಂದು ವರದಿಯಾಗಿದೆ.

ಕಾವಳಮುಡೂರು ಗ್ರಾಮದ ಧೂಮಳಿಕೆ ಎಂಬಲ್ಲಿ ನಿರ್ಮಾಣ ಹಂತದ ಮನೆಯಲ್ಲಿ, ಇಲ್ಯಾಸ್‌ ಧೂಮಳಿಕೆ @ ಕುಂಟ ಇಲ್ಯಾಸ್‌ ಮತ್ತು ಇಲ್ಯಾಸ್‌ ಬಂಗೇರಕೆರೆ ಎಂಬವರುಗಳು, ಇಲ್ಯಾಸ್‌ ಧೂಮಳಿಕೆ ಎಂಬವರ ನಿರ್ಮಾಣ ಹಂತದ ಮನೆಯಲ್ಲಿ, ಜಾನುವಾರನ್ನು ವಧೆ ಮಾಡಿ ಮಾಂಸ ಮಾಡುತ್ತಿದ್ದಾಗ, ಪುಂಜಾಲಕಟ್ಟೆ ಪೊಲೀಸ್‌ ಠಾಣಾ ಪೊಲೀಸ್‌ ಉಪ ನಿರೀಕ್ಷಕರಾದ ಉದಯರವಿ ವೈ.ಎಂ ರವರು ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.

ಈ ವೇಳೆ ಆರೋಪಿಗಳು ಓಡಿ ತಪ್ಪಿಸಿಕೊಂಡಿದ್ದು,‌ಸ್ಥಳದಲ್ಲಿ ದೊರೆತ ಸುಮಾರು 60 ಕೆ.ಜಿ ಜಾನುವಾರು ಮಾಂಸ ಮತ್ತು ಇತರೆ ಅಂಗಾಗಗಳು, ಎಲೆಕ್ಟ್ರಿಕ್‌ ತೂಕದ ಯಂತ್ರ, ಮಾಂಸ ಮಾಡುವರೇ ಉಪಯೋಗಿಸುವ ಇತರೆ ವಸ್ತುಗಳನ್ನು ವಶಕ್ಕೆ ಪಡೆದು, ಆರೋಪಿಗಳ ವಿರುದ್ದ ಪುಂಜಾಲಕಟ್ಟೆ ಠಾಣೆಯಲ್ಲಿ ಅ.ಕ್ರ 16/2024 ಕಲಂ: 4, 12 ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣಾ ಅಧಿನಿಯಮ 2020 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Comment

error: Content is protected !!