30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳಂಜ: ಬಂಟರ ತಾಲೂಕು ಮಟ್ಟದ ವಾಲಿಬಾಲ್ ಹಾಗೂ ದಿ. ಅನಿಲ್ ನಾಯ್ಗ ಟ್ರೋಫಿಯ ಕ್ರೀಡೋತ್ಸವ: ಸನ್ಮಾನ

ಬಳಂಜ: ಬಂಟರ ಗ್ರಾಮ ಸಮಿತಿ ಬಳಂಜ, ನಾಲ್ಕೂರು, ಕಾರ್ಯಣ ಇದರ ವತಿಯಿಂದ ಬಂಟರ ತಾಲೂಕು ಮಟ್ಟದ ವಾಲಿಬಾಲ್ ಹಾಗೂ ಆರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ದಿ. ಅನಿಲ್ ನಾಯ್ಗ ಟ್ರೋಫಿ ಯ ಕ್ರೀಡೋತ್ಸವವು ಮಾ.3 ರಂದು ಅಟ್ಲಾಜೆ ಶಾಲಾ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮೀನಾಕ್ಷಿ ನಾಯ್ಗ ಅಟ್ಲಾಜೆ ಉದ್ಘಾಟಿಸಿದರು. ಮಧ್ಯಾಹ್ನದ ಸಭಾ ಕಾರ್ಯಕ್ರಮದ ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಗ್ರಾಮ ಸಮಿತಿಯ ಅಧ್ಯಕ್ಷರಾದ ಹರೀಶ್ ಶೆಟ್ಟಿ ಕರಂಬಿತ್ತಿಲು ವಹಿಸಿ ಮಾತನಾಡಿ ಈ ಕ್ರೀಡೋತ್ಸವ ಮಾಡುತ್ತಿರುವುದು ಕೇವಲ ಮನರಂಜನೆಗಲ್ಲ ಸಮುದಾಯದ ಜನರ ಒಟ್ಟು ಸೆರುವಿಕೆಗೋಸ್ಕರ ಹಾಗೂ ಸಮಾಜಮುಖಿ ಕಾರ್ಯಕ್ರಮ ನಡೆಸುದಕ್ಕಾಗಿ ಈ ಕಾರ್ಯಕ್ರಮ ಹಮ್ಮಿ ಕೊಂಡಿದ್ದೇವೆ, ಅಲ್ಲದೆ ಬಳಂಜ ಗ್ರಾಮದ ಒಬ್ಬ ಬಡ ಕುಟುಂಬದ ವಿದ್ಯಾರ್ಥಿನಿರ್ಯೋಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ನಮ್ಮ ಬಂಟರ ಗ್ರಾಮ ಸಮಿತಿ ಹೊತ್ತಿಕೊಂಡಿವೆ ಎಂದರು.

ಮುಖ್ಯ ಅತಿಥಿಗಳಾಗಿ ಚಲನಚಿತ್ರ ಹಾಗೂಝ ಕಿರುತೆರೆ ನಿರ್ದೇಶಕ ವಿನು ಬಳಂಜ, ರವೀಂದ್ರ ಶೆಟ್ಟಿ ಬಳಂಜ, ಸಂಜೀವ ಶೆಟ್ಟಿ ಕುಂಠಿನಿ, ಸುರೇಶ್ ಶೆಟ್ಟಿ ಲಾಯಿಲ, ದೇವಿ ಪ್ರಸಾದ್ ಶೆಟ್ಟಿ ಬಿರ್ಮನೊಟ್ಟು, ಶೋಭಾ. ವಿ. ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಕರಾವಳಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ನ ಅಧ್ಯಕ್ಷ ರವೀಂದ್ರ ಶೆಟ್ಟಿ ಬಳಂಜ, ನಾಲ್ಕೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಮಜಲು, ಬೆಳ್ತಂಗಡಿ ಮೀಡಿಯಾ ಕ್ಲಬ್ ನ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ನೇಸರ, ಬಳಂಜ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ಯಶೋಧರ್ ಶೆಟ್ಟಿ ಅಟ್ಲಾಜೆ, ನಾಲ್ಕೂರು ಕಂಚಿನಡ್ಕ ಶ್ರೀ ಮೂಜಿಲ್ನಾಯ ಹಾಗು ಪರಿವಾರ ದೈವ ಕ್ಷೇತ್ರದ ಅಧ್ಯಕ್ಷ ವಿನಯ ಶೆಟ್ಟಿ ಯೈಕುರಿ ಇವರುಗಳನ್ನು ಸನ್ಮಾನಿಸಲಾಯಿತು.

ಮಕ್ಕಳಿಗೆ ಲಿಂಬೆಹುಳಿ ಚಮಚ ಓಟ, ಬಾಲ್ ಪಾಸಿಂಗ್, ಲಕ್ಕಿ ಗೇಮ್, ಗೋಣಿಚೀಲ ಓಟ, ಸೂಜಿ ನೂಲು ಸ್ಪರ್ಧೆ, ಮಹಿಳೆಯರಿಗೆ ತ್ರೋಬಾಲ್, ಗುಂಡೆಸೆತ, ಸಂಗೀತ ಕುರ್ಚಿ, ಹಗ್ಗ ಜಗ್ಗಾಟ , ಪುರುಷರಿಗೆ ಗುಂಡೆಸೆತ, ವಾಲಿಬಾಲ್, ಹಗ್ಗ ಜಗ್ಗಾಟ ಹಾಗು ಪುರುಷರಿಗೆ ಸೂಜಿಗೆ ನೂಲು ಹಾಕುವ ಸ್ಪರ್ಧೆ ಹಾಗೂ ವಿವಿಧ ಸ್ಪರ್ಧೆ ಜರಗಿತು. ಈ ಕ್ರೀಡೋತ್ಸವಕ್ಕೆ ಗಣ್ಯ ಅತಿಥಿಗಳು ಬಂದು ಶುಭ ಹಾರೈಸಿದರು. ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.

ಸಮಾರಂಭದಲ್ಲಿ ಸತೀಶ್ ರೈ ಬಾರ್ದಡ್ಕ, ನವೀನ್ ಶೆಟ್ಟಿ ಸಾಮಾನಿ ಕರಂಬಾರು, ಪ್ರಶಾಂತ್ ಶೆಟ್ಟಿ ಕರಂಬಾರು, ರಾಜೇಂದ್ರ ಶೆಟ್ಟಿ ಕುರೆಲ್ಯ, ವಸಂತ ಶೆಟ್ಟಿ ಮಜಲು ಅಜಿತ್ ರೈ ಅನಿಲ್ ಶೆಟ್ಟಿ, ಕಾರ್ಯದರ್ಶಿ ಅಶೋಕ್ ಶೆಟ್ಟಿ ಪೊಸಮಾರ್, ಸದಾಶಿವ ಶೆಟ್ಟಿ ತಾರೀದೊಟ್ಟು ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಭಾಸ್ಕರ್ ಶೆಟ್ಟಿ ಕಾರ್ಯಾಣ ಹಾಗೂ ಹರೀಶ್ ಶೆಟ್ಟಿ ಕುಪ್ಪೆಟ್ಟಿ ನಿರೂಪಿಸಿದರು.

Related posts

ಎಕ್ಸೆಲ್ ನ ವಿದ್ಯಾರ್ಥಿಗಳು ಬನಾರಸ್ ಹಿಂದೂ ವಿ.ವಿ, ಎ ಐ ಐ ಎಂ ಎಸ್ ಭೋಪಾಲ್ ಸೇರಿ, ದೇಶದ ಅತ್ಯುನ್ನತ ಮೆಡಿಕಲ್ ಕಾಲೇಜುಗಳಲ್ಲಿ ಓದಿಗೆ ಆಯ್ಕೆ

Suddi Udaya

ಆದಿದ್ರಾವಿಡ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಗಣರಾಜ್ಯೋತ್ಸವ ಸಂಭ್ರಮಾಚರಣೆ

Suddi Udaya

ಶಿರ್ಲಾಲು ಯುವವಾಹಿನಿ ಸಂಚಲನ ಸಮಿತಿ ವತಿಯಿಂದ ಆರೋಗ್ಯ ನಿಧಿ ವಿತರಣೆ

Suddi Udaya

ಅಳದಂಗಡಿ ಬೆಟ್ಟದ ಬಸದಿ ಅಭಿವೃದ್ಧಿಯ ಕಾರ್ಯಕ್ಕೆ ಸರಕಾರದಿಂದ ರೂ. 50ಲಕ್ಷ ಮಂಜೂರು ಸಹಕರಿಸಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂರವರಿಗೆ ಆಡಳಿತ ಮಂಡಳಿಯಿಂದ ಗೌರವ

Suddi Udaya

ಹೊಸಪಟ್ಣ: ಸಾಮೂಹಿಕ ಸತ್ಯನಾರಾಯಣ ಪೂಜೆ, ಧಾರ್ಮಿಕಸಭೆ

Suddi Udaya

ವಾಲಿಬಾಲ್ ಪಂದ್ಯಾಟ: ಮುಂಡಾಜೆ ವಿವೇಕಾನಂದ ಪ್ರೌಢಶಾಲಾ ಬಾಲಕಿಯರ ತಂಡ ಪ್ರಥಮ ಸ್ಥಾನ

Suddi Udaya
error: Content is protected !!