ಬೆಳ್ತಂಗಡಿ : ಬಿಜೆಪಿ ಯುವ ಮೋರ್ಚಾ ವತಿಯಿಂದ ‘ರಾಷ್ಟ್ರ ಮೊದಲು’ ತಿರಂಗಾ ಯಾತ್ರೆಯು ಮಾ.4 ರಂದು ಬೆಳ್ತಂಗಡಿ ಸಂತೆಕಟ್ಟೆ ಬಳಿಯಿಂದ ತಾಲೂಕು ಮಿನಿ ವಿಧಾನ ಸೌಧದವರೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಂಎಲ್ಸಿ ಪ್ರತಾಪ್ ಸಿಂಹ ಮಾತನಾಡಿ ಬೆಂಗಳೂರಿನ ವಿಧಾನ ಸೌಧ ಇಡೀ ಕರ್ನಾಟಕದ ಶಕ್ತಿಕೇಂದ್ರ, ಇಲ್ಲಿ ಚುನಾವಣೆ ಆಯ್ತು ಎಂಬ ಕಾರಣಕ್ಕೋಸ್ಕರ, ರಾಜ್ಯ ಸಭಾ ಸದ್ಯರಾಗಿ ನಾಸಿರ್ ಉಸೇನ್ ಗೆದ್ರು ಎಂಬ ಕಾರಣವನ್ನು ಮುಂದಾಗಿ ಇಟ್ಟುಕೊಂಡು ಪಾಕಿಸ್ತಾನ ಪರವಾದಂತಹ ಘೋಷಣೆಯನ್ನು ಹಾಕುತ್ತಾರೆ ಎಂದಾದರೆ ಇದು ಕಾಂಗ್ರೆಸ್ ನ ಮಾನಸಿಕತೆಯನ್ನು ತೋರಿಸುತ್ತದೆ. ರಾಷ್ಟ್ರ ಮೊದಲು ಎನ್ನುವಂತಹ ಭಾವನೆ ಅವರಲ್ಲಿ ಇದ್ರೆ ತಕ್ಷಣ ಅವರನ್ನು ಬಂಧಿಸುವಂತಹ ಕೆಲಸ ಮಾಡ್ತಾ ಇದ್ರು. ನಿಮಗೆ ಅದರ ತನಿಖೆ ಮಾಡುವುದಕ್ಕೆ ಧೈರ್ಯ ಸಾಕಾಗುವುದಿಲ್ಲ ಎಂದದಾರೆ ಎನ್ಐಎ ಗೆ ಕೊಡಿ. ಜನರಿಗೆ ವಿಶ್ವಾಸ ಬರುವಂತಹ ರೀತಿಯಲ್ಲಿ ದೇಶ ದ್ರೋಹಿಗಳನ್ನು ನಾವು ಒಳಗಟ್ಟುತ್ತೇವೆ ಎಂಬ ಸಂದೇಶ ನೀಡಿ ಎಂದು ಆಗ್ರಹಿಸಿದರು.
ಬೆಳ್ತಂಗಡಿ ಯುವ ಮೋರ್ಚಾದ ಅಧ್ಯಕ್ಷ ಶಶಿರಾಜ್ ಮಾತನಾಡಿ ಡಿಜೆ ಹಳ್ಳಿ ಕೆಜೆ ಹಳ್ಳಿಯಲ್ಲಿ ನಡೆದ ಘಟನೆಗಳನ್ನು ನಾವು ನೋಡಿರಬಹುದು, ಅವತ್ತಿನಿಂದ ಇವತ್ತಿನವರೆಗೂ ಹಲವಾರು ಘಟನೆಗಳು ನಡೆದಾಗಳು ವೋಟ್ ಬ್ಯಾಂಕ್ ಎನ್ನುವಂತಹ ಒಂದೇ ಒಂದು ಕಾರಣಕ್ಕಾಗಿ ಕಾಂಗ್ರೆಸ್ ನ ನಾಯಕರು ಯಾವುದೇ ಕಾರಣಕ್ಕೂ ಮತಾಂದರನ್ನು ಬೆಂಬಲಿಸುತ್ತ ಬಂದಿದ್ದಾರೆಯೇ ಹೊರತು ಯಾವುದೇ ಕಾರಣಕ್ಕೂ ವಿರೋಧ ಮಾಡಿಲ್ಲ ಆ ಕಾರಣಕ್ಕಾಗಿ ನಾವು ಇಂದು ಬೆಳ್ತಂಗಡಿ ಯುವ ಮೋರ್ಚಾ ವತಿಯಿಂದ ಯಾತ್ರೆಯನ್ನು ಮಾಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಮಂಡಲದ ನೂತನ ಅಧ್ಯಕ್ಷರಾದ ಶ್ರೀನಿವಾಸ್ ರಾವ್, ಜಿಲ್ಲಾ ಕಾರ್ಯದರ್ಶಿ ಸೀತಾರಾಮ್ ಬೆಳಾಲು, ಪ್ರಧಾನ ಕಾರ್ಯದರ್ಶಿ ಜಯಾನಂದ್, ಪ್ರಶಾಂತ್ ಪಾರೆಂಕಿ, ಜಿಲ್ಲಾ ಉಪಾಧ್ಯಕ್ಷ ಪ್ರಮೋದ್, ಉಮೇಶ್ ಕುಲಾಲ್, ಬೆಳ್ತಂಗಡಿ ಯುವ ಮೋರ್ಚಾದ ಉಪಾಧ್ಯಕ್ಷರಾದ ಪ್ರಶಾಂತ್ ಗೌಡ, ಗಣೇಶ್ ಲಾಯಿಲ, ಪ್ರಕಾಶ್ ಪೂಜಾರಿ, ಪದ್ಮನಾಭ ಕುಲಾಲ್, ಸುಜಿತ್ ಪೆರಾಡಿ, ಪ್ರಧಾನ ಕಾರ್ಯದರ್ಶಿಯಾಗಿ ವಿನೀತ್ ಕೋಟ್ಯಾನ್, ಜಯಪ್ರಸಾದ್ ಗೌಡ, ಕಾರ್ಯದರ್ಶಿಯಾಗಿ ಸುಧೀರ್ ಪೂಜಾರಿ ಚಾರ್ಮಾಡಿ, ಹರೀಶ್ ಗೌಡ ಸಂಭೂಳ್ಯ, ಗಿರೀಶ್ ಗೌಡ ಬಿ.ಕೆ ಬಂದಾರು, ರಂಜು ಕೊಕ್ಕಡ, ಕೋಶಾಧಿಕಾರಿಯಾಗಿ ಸ್ವಸ್ತಿಕ್ ಗೌಡ ಕುಕ್ಕಳ, ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಅವಿನಾಶ್ ಹೊಸಂಗಡಿ, ಅಶ್ವಿನ್ ಅಂಡಿಂಜೆ. ಪ್ರಸಾದ್ ಸುದೇಮುಗೇರು, ಮನೋಹರ ಪೂಜಾರಿ ಧರ್ಮಸ್ಥಳ, ಜಯಕುಮಾರ್ ಶಿರ್ಲಾಲು, ಪವನ್ ಬಂಗೇರ, ಪ್ರದೀಪ್ ಕುಲಾಲ್ ಕಾಯರ್ತ್ತಡ್ಕ, ರಾಮೇಶ್ವರ ಆಚಾರ್ಯ ಕುತ್ಲುರು, ಉದಯ ಬಂಗೇರ ನಾವೂರು, ಪವನ್ ಶೆಟ್ಟಿ ಉಜಿರೆ, ಸಂಕೇತ್ ಶೆಟ್ಟಿ ಉಪಸ್ಥಿತರಿದ್ದರು.