25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ರಾಜ್ಯ ಮಟ್ಟದಲ್ಲಿ ಕಪ್ಪು ಪಟ್ಟಿ ಧರಿಸಿ ಪಂಚಾಯತ್ ನೌಕರರ ಮುಂದುವರಿದ ಪ್ರತಿಭಟನೆ : ಗ್ರಾಮ ಪಂಚಾಯಿತಿ ನೌಕರರ ಸಮಸ್ಯೆಗಳ ಬಗ್ಗೆ ತಾರ್ಕಿಕ ಅಂತ್ಯ ನೀಡುವುದಾಗಿ ವಿಧಾನಸಭಾಧ್ಯಕ್ಷರ ಭರವಸೆ

ಬೆಳ್ತಂಗಡಿ: ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವರ್ಗದ ಗ್ರಾಮ ಪಂಚಾಯತ್ ನೌಕರರ / ಸಿಬ್ಬಂದಿಗಳ ಹಲವಾರು ಬೇಡಿಕೆಗಳನ್ನು ಒಟ್ಟೂಗೂಡಿಸಿ ಜು.13 ರಂದು ಅದಕ್ಕಿಂತ ಮೊದಲು ಹಲವಾರು ವರ್ಷಗಳಿಂದ ಇಲಾಖೆಯ ಮುಂದೆ ನಮ್ಮ ಸಂಘಟನೆಯ ಮೂಲಕ ಬೇಡಿಕೆಗಳನ್ನು ಮಂಡಿಸುತ್ತಾ ಬಂದಿರುತ್ತೇವೆ, ಆದರೆ ಇಲಾಖೆಯಿಂದ ಪಂಚಾಯತ್ ರಾಜ್ ವ್ಯವಸ್ಥೆ ಬರುವ ಪೂರ್ವದಿಂದಲ್ಲೂ ಸ್ಥಳೀಯಾಡಳಿತ ಸಂಸ್ಥೆ ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಚಾಯತ್ ನೌಕರರಿಗೆ ಅವರ ಮೂಲ ಬೇಡಿಕೆಗಳಾದ ಕನಿಷ್ಠ ವೇತನ ಬದಲು ಸಿ ಮತ್ತು ಡಿ ದರ್ಜೆಯ ವೇತನ ಶ್ರೇಣಿ, ಆರೋಗ್ಯ ಭದ್ರತೆ, ಅನುಮೋದನೆ ಆಗದೇ ಇರುವ ಬಿಲ್ಲ್ ಕಲೇಕ್ಟರ್, ಕ್ಲರ್ಕ್ ಕಮ್ ಡಿಇಓ, ವಾಟರ್ ಮ್ಯಾನ್, ಶುಚಿತ್ವ ನೌಕರ, ಅಟೆಂಡರ್ ವೃಂದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಸೇವಾ ಭದ್ರತೆ, ಡಾಟ ಎಂಟ್ರೀ ಅಪರೇಟರ್ ಗಳ ಅನುಮೋದನೆ ಸಮಸ್ಯೆ, ಸಕಾಲದಲ್ಲಿ ಮುಂಬಡ್ತಿ, ನಿವೃತ್ತಿ ಜೀವನಕ್ಕೆ ಆರ್ಥಿಕ ಭದ್ರತೆಗಳನ್ನು ಈಡೇರಿಸದೇ ನೌಕರರನ್ನು ಹಗಲಿರುಳು ದುಡಿಸಿಕೊಳ್ಳುತ್ತಿದ್ದು, ಪಂಚಾಯತ್ ನೌಕರರು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅತ್ಯಂತ ಶೋಷಣೆಗೊಳಗಾಗಿ ಆರೋಗ್ಯ ಭದ್ರತೆ ಇಲ್ಲದೇ ಒತ್ತಡದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆದರಿಂದ ಪಂಚಾಯತ್ ನೌಕರರು ದುಃಖ ಮತ್ತು ನೋವಿನಿಂದ ರಾಜ್ಯ ಮಟ್ಟದಲ್ಲಿ ಪಂಚಾಯತ್ ನೌಕರರು 2024 ರ ಮಾ.1ನೇ ತಾರೀಖಿನಿಂದ ನಮಗಾದ ನೋವು, ಶೋಷಣೆ ಮತ್ತು ಸಮಸ್ಯೆಗಳ ವಿರುದ್ದ ಸಾರ್ವಜನಿಕ ಸೇವೆಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದ0ತೆ ಕಚೇರಿಯಲ್ಲಿ ಸಾರ್ವಜನಿಕವಾಗಿ ಕಪ್ಪು ಬಟ್ಟೆ / ಕಪ್ಪು ಪಟ್ಟಿ ಧರಿಸಿ ಇಲಾಖೆಯಿಂದ ಬೇಡಿಕೆ ಈಡೇರಿಸುವವರೆಗೂ ಶಾಂತಿಯುತ ಪ್ರತಿಭಟನೆಯನ್ನು ಮಾಡಲಾಗುತ್ತಿದೆ .

ಈಗ ಪಂಚಾಯತ್ ನೌಕರರ ಶಾಂತಿಯುತ ಹೋರಾಟ ಆರನೇ ದಿನಕ್ಕೆ ಕಾಲಿರಿಸಿದೆ, ಈಗಾಗಲೇ ರಾಜ್ಯದಲ್ಲಿ 31 ಜಿಲ್ಲೆಯಲ್ಲಿ ಸರಿಸುಮಾರು ಐದು ಸಾವಿರಕ್ಕೂ ಅಧಿಕ ಗ್ರಾಮ ಪಂಚಾಯತ್ ಗಳಲ್ಲಿ ಪ್ರತಿಭಟನೆಯು ಹಬ್ಬಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರತಿಭಟನೆಯಲ್ಲಿ ನೌಕರರು ಭಾಗವಹಿಸಲಿದ್ದಾರೆ, ಇಷ್ಟಾದರೂ ಪಂಚಾಯತ್ ರಾಜ್ ಇಲಾಖೆ ಕಣ್ಣು ಮುಚ್ಚಿ ಕುಳಿತಿರುವುದು ಅತ್ಯಂತ ದುಃಖದ ವಿಚಾರ, ಇಲಾಖೆಯ ಮೂಲ ನೌಕರರನ್ನು ಕಳೆದ ಆರೇಳು ವರ್ಷಗಳಿಂದ ಕಡೆಗಣಿಸುತ್ತಿರುವ ಇಲಾಖೆಯ ವಿರುದ್ದ ನೌಕರರು ಇನ್ನೂ ಹೆಚ್ಚಿನ ರೀತಿಯಲ್ಲಿ ಸಿಡಿದೇಳುವ ಮೊದಲು ನೌಕರರ ಮೂಲ ಬೇಡಿಕೆಗಳನ್ನು ಈಡೇರಿಸುವಲ್ಲಿ ಇಲಾಖೆಯು ಮುಂದೆ ಬರಬೇಕಾಗಿದೆ. ರಾಜ್ಯಮಟ್ಟದಲ್ಲಿ ಆಗುತ್ತಿರುವ ಈ ಶಾಂತಿಯುತ ಹೋರಾಟಕ್ಕೆ ಇಲಾಖೆ ಅಧಿಕಾರಿಗಳು ಸ್ಪಂದನೆ ನೀಡದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಬೃಹತ್ ಹೋರಾಟ ಅನಿವಾರ್ಯ ಎಂದು ಸಂಘದ ರಾಜ್ಯಾಧ್ಯಕ್ಷ ಡಾ. ದೇವಿಪ್ರಸಾದ್ ಬೊಲ್ಮ ತಿಳಿಸಿದ್ದಾರೆ.

ಈ ಮದ್ಯೆ ನೌಕರರು ಪ್ರತಿಭಟನೆಯ ನಡುವೆ ಮಂಗಳೂರಿನಲ್ಲಿ ನಡೆದ ಹೊಂಬೆಳಕು-2024 ಕಾರ್ಯಕ್ರಮದಲ್ಲಿ ಕಪ್ಪು ಪಟ್ಟಿ ಧರಿಸಿ ಭಾಗವಹಿಸಿದ ಸಂದರ್ಭದಲ್ಲಿ ವಿಧಾನ ಸಭಾ ಸಭಾಧ್ಯಕ್ಷ ಯು ಟಿ ಖಾದರ್ ರವರು ನೌಕರರ ನಿಯೊಗದೊಂದಿಗೆ ಮಾತನಾಡಿ ಗ್ರಾಮ ಪಂಚಾಯತ್ ನೌಕರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಿ ನೌಕರರ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಹಾಕುವುದಾಗಿ ತಿಳಿಸಿದರು.

ಕಳೆದ ಮೂರು ದಶಕಗಳಿಂದ ಪಂಚಾಯತ್ ರಾಜ್ ವ್ಯವಸ್ಥೆಯ ಬುನಾದಿಯಾಗಿ ಕಾರ್ಯನಿರ್ವಹಿಸುತ್ತಿರುವ ನೌಕರರ ಕುರಿತು ಇಲಾಖೆಯ ಮುಖ್ಯಸ್ಥರುಗಳ ಅಸಡ್ಡೆಯ ನಿಲುವುಗಳ ವಿರುದ್ದ ಈ ಹೋರಾಟ ನಡೆಯುತ್ತಿದೆ, ನಮ್ಮ ಇಲಾಖೆಯು ನೌಕರರನ್ನು ಜೀತದಾಳುಗಳಂತೆ ಒತ್ತಾಡ ಹೇರಿ ಕಾರ್ಯವನ್ನು ತೆಗೆಸಿಕೊಳ್ಳುತ್ತಿದೆ, ತನ್ನ ಇಲಾಖೆಯ ಮೂಲ ನೌಕರರ ಬದಲು ಅನ್ಯ ಇಲಾಖೆಯಿಂದ ಹಸ್ತಾಂತರ ಗೊಂಡ ನೌಕರರನ್ನು ಒಲೈಕೆ ಮಾಡುತ್ತಿರುವುದು ಇಲಾಖೆಯ ಮುಖ್ಯಸ್ಥರುಗಳಿಗೆ ಪಂಚಾಯತ್ ನೌಕರರ ಮೇಲಿರುವ ಅಸಡ್ಡೆ, ಶೋಷಣೆ ಎದ್ದು ಕಾಣುತ್ತಿದೆ, ಇದೇ ತರ ಮುಂದುವರೆದಲ್ಲಿ ಇಡೀ ರಾಜ್ಯದಲ್ಲಿ ಪಂಚಾಯತ್ ನೌಕರರು ಇಲಾಖೆಯ ದೋರಣೆಯ ವಿರುದ್ದ ತಿರುಗಿ ಬೀಳುದಂತು ಖಚಿತ ಎಂದು ನೌಕರರು ವ್ಯಕ್ತಪಡಿಸಿದರು.

Related posts

ನೆರಿಯ: ಕಡವೆ ಬೇಟೆ, ಬಂದೂಕು ಸಹಿತ ಆರೋಪಿ ವಶಕ್ಕೆ

Suddi Udaya

ಪುದುವೆಟ್ಟು: ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಭೇಟಿ

Suddi Udaya

ಕಾನರ್ಪ ಪುರುಷರ ಬಳಗದ ಪುರುಷರ ರಾಶಿ ಪೂಜೆ

Suddi Udaya

ಜೆ ಇ ಇ ಮೈನ್ಸ್ – 2: ಎಕ್ಸೆಲ್ ಗುರುವಾಯನಕೆರೆ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ

Suddi Udaya

ಅಳದಂಗಡಿಯಲ್ಲಿ ಹಿಂದೂ ರುದ್ರಭೂಮಿಗಾಗಿ ಮೀಸಲಾಗಿರುವ ಜಾಗವನ್ನು ಅಭಿವೃದ್ಧಿ ಪಡಿಸಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಗೆ ಮನವಿ

Suddi Udaya
error: Content is protected !!