ತೆಂಕಕಾರಂದೂರು : ಮಾ.5 ರಂದು ಕಾಪಿನಡ್ಕ ಸ.ಕಿ.ಪ್ರಾ ಶಾಲೆಯಲ್ಲಿ ಮೆಟ್ರಿಕ್ ಮೇಳವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲೆಯ ಸ್ಥಾಪಕ ಅಧ್ಯಕ್ಷರಾದ ವಸಂತ ಸಾಲ್ಯಾನ್ ನೆರವೇರಿಸಿ ಶುಭ ಹಾರೈಸಿದರು. ನಾರಾವಿ ಮತ್ತು ಪೆರೋಡಿತ್ತಾಯ ಕಟ್ಟೆ ಕ್ಲಸ್ಟರ್ ನ ಸಿ.ಆರ್.ಪಿ ಕಿರಣ್ ಮೆಟ್ರಿಕ್ ಮೇಳದ ಉದ್ದೇಶ ಮತ್ತು ಪ್ರಯೋಜನದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಶ್ ಪೂಜಾರಿ, ಗೆಳೆಯರ ಬಳಗದ ಅಧ್ಯಕ್ಷ ಪ್ರವೀಣ್ ಮತ್ತು ಸದಸ್ಯ ಪ್ರದೀಪ್ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಶಾಂತಿವಾಸ್ ಉಪಸ್ಥಿತರಿದ್ದರು.
ಮಕ್ಕಳು, ಪೋಷಕರ ಸಹಕಾರದೊಂದಿಗೆ ತರಕಾರಿ, ಹಣ್ಣುಗಳು, ಪಾನೀಯಗಳು, ಐಸ್ ಕ್ರೀಮ್, ಅದೃಷ್ಟ ಚೀಟಿ ಆಟ, ಜೇನು ತುಪ್ಪ, ಉತ್ಪನ್ನ ವಸ್ತುಗಳು, ಲೇಖನ ಸಾಮಾಗ್ರಿ ಇತ್ಯಾದಿಗಳನ್ನು ಮಾರಾಟ ಮಾಡಿದರು. ಸಿಕ್ಕಿದ ಮೊತ್ತವನ್ನು ಎಲ್ಲಾ ಪೋಷಕರು ಶಾಲೆಗೆ ನೀಡುವುದೆಂದು ತೀರ್ಮಾನಿಸಿದರು. ಊರ ವಿದ್ಯಾಭಿಮಾನಿಗಳು ಕ್ಲಸ್ಟರ್ ಶಾಲೆಗಳ ಶಿಕ್ಷಕ ವೃಂದದವರು ಮೆಟ್ರಿಕ್ ಮೇಳದಲ್ಲಿ ಭಾಗವಹಿಸಿ ಆರ್ಥಿಕ ಸಹಕಾರವನ್ನು ನೀಡಿ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಮೆಟ್ರಿಕ್ ಮೇಳದಿಂದ ದೊರೆತ ಮೊತ್ತವನ್ನು ಶಾಲಾ ಅಕ್ಷರ ದಾಸೋಹ ಕೊಠಡಿಯ ಮೇಲ್ಚಾವಣಿಗೆ ಶೀಟ್ ಅಳವಡಿಸಲು ಉಪಯೋಗಿಸುವಂತೆ ತೀರ್ಮಾನಿಸಲಾಯಿತು. ಶಿಕ್ಷಕಿ ಕು. ಅನುಷಾ ನಿರೂಪಿಸಿ, ಶಿಕ್ಷಕಿ ಅನಿತಾ ವಂದಿಸಿದರು.