April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ದ.ಕ ಜಿಲ್ಲೆಗೆ ಕೃಷಿ ಇಲಾಖೆಯಿಂದ ಸಬ್ಸಿಡಿಯಲ್ಲಿ ಯಂತ್ರೋಪಕರಣಗಳು ಶೇ.50, 90ರ ಸಹಾಯಧನ ಲಭ್ಯ: ವಿವಿಧ ಬಗೆಯ ಯಂತ್ರೋಪಕರಣ ಪಡೆಯಲು ಅರ್ಜಿ ಆಹ್ವಾನ

ಬೆಳ್ತಂಗಡಿ: ದ.ಕ ಜಿಲ್ಲೆಗೆ ಕೃಷಿ ಇಲಾಖೆಯಿಂದ ಶೇ.90 ಮತ್ತು ಶೇ 50ರ ಸಹಾಯಧನದಲ್ಲಿ ವಿವಿಧ ಬಗೆಯ ಯಂತ್ರೋಪಕರಣಗಳ (Agriculture machinery) ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ರೈತರು ತಮಗೆ ಅವಶ್ಯವಿರುವ ಯಂತ್ರೋಪಕರಣಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಿ ಯಂತ್ರೋಪಕರಣಗಳನ್ನು ಪಡೆದುಕೊಳ್ಳಬಹುದು.

ಸಬ್ಸಿಡಿ ವಿವರ: ಎಲ್ಲಾ ವರ್ಗದ ರೈತರು SMAM ಯೋಜನೆಯಡಿ (Agriculture machoaery susbsidy yojana), ಪಡೆಯಲು ಈ ಕೆಳಗಿನ ಉಪಕರಣಗಳನ್ನು ಸಾಮಾನ್ಯ ರೈತರು ಶೇ.50ರ ಸಬ್ಸಿಡಿ ಪಡೆಯಬಹುದು. ಪ.ಜಾತಿ, ಪ.ಪಂಗಡದ ರೈತರಿಗೆ ಶೇ.90 ರವರೆಗೆ (ಕೆಲವು ಮಿತಿಗೊಳಪಟ್ಟು )ಸಬ್ಸಿಡಿ ದರದಲ್ಲಿ ಯಂತ್ರೋಪಕರಣಗಳನ್ನು ಪಡೆಯಬಹುದು.

ಸಬ್ಸಿಡಿಯಲ್ಲಿ ದೊರೆಯುವ ಯಂತ್ರೋಪಕರಣಗಳು:

  • ಕಳೆ ಕತ್ತರಿಸುವ ಯಂತ್ರ
  • ಅಗೆತ ಮಾಡುವ ಯಂತ್ರ / ರೋಟರಿ ಪವರ್ವೀಡರ್
  • ಮೇವು ಕತ್ತರಿಸುವ ಯಂತ್ರ
  • ಔಷಧಿ ಸಿಂಪಡಣೆಗೆ HTP spryayers
  • ಪವರ್ ಟಿಲ್ಲರ್
  • ಟ್ರಾಕ್ಟರ್
  • ಟ್ರಾಕ್ಟರ್ ಉಪಕರಣಗಳು
  • ಯಂತ್ರ ಚಾಲಿತ ಕೈಗಾಡಿ(Load cart )

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲಾತಿಗಳು: ಅರ್ಜಿದಾರರ ಪೋಟೋ ., ಆಧಾ‌ರ್ ಕಾರ್ಡ್‌ಪ್ರತಿ, ಹಿಡುವಳಿ ಪ್ರಮಾಣ ಪತ್ರ .(RTC) ಜಾತಿ ಪ್ರಮಾಣ ಪತ್ರ (ಪ.ಜಾತಿ/ಪ.ಪಂಗಡದ ರೈತರಿಗೆ ಮಾತ್ರ ), ಖಾತಾ ಪ್ರತಿ, ಬ್ಯಾಂಕ್‌ ಪಾಸ್‌ಬುಕ್ ಜೆರಾಕ್ಸ್ ಪ್ರತಿ

ಹೆಚ್ಚಿನ ಮಾಹಿತಿಗಾಗಿ ಬೆಳ್ತಂಗಡಿ ಇಕೋ ಪ್ರೆಸ್ ಎಂಟರ್ ಪ್ರೈಸಸ್ ಹಾಗೂ ಪುತ್ತೂರು ಇಕೋ ಪ್ರೆಸ್ ಎಂಟರ್ ಪ್ರೈಸಸ್ ಪ್ರತಿ ನಿಧಿ ಅಥವಾ ಮೊಬೈಲ್ 8618010550 / 9113959854 ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.

Related posts

ಉಜಿರೆ ದೇವಸ್ಥಾನದಲ್ಲಿ ಸಂಕಷ್ಟ ಚತುರ್ಥಿ ಪ್ರಯುಕ್ತ  ಕಾವ್ಯವಾಚನ-ವ್ಯಾಖ್ಯಾನ   

Suddi Udaya

ವೇಣೂರು: ಬಜಿರೆಯಲ್ಲಿ ಮನೆಯ ಬಾವಿ ತಡೆಗೋಡೆ ಕುಸಿತ

Suddi Udaya

ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತ ದಿನೇಶ್ ನಾಯ್ಕ ನಿಂತಿಕಲ್ಲು ಭಾರತೀಯ ಜನತಾ ಪಾರ್ಟಿ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಸೇರ್ಪಡೆ

Suddi Udaya

ಪಣಕಜೆ : ಮನೆಯಿಂದ ರಸ್ತೆಗೆ ಓಡಿ ಬಂದ 3 ವರ್ಷದ ಮಗು: ರಿಕ್ಷಾಕ್ಕೆ ತಾಗಿ ಗಂಭೀರಗಾಯಗೊಂಡು ಮೃತ್ಯು

Suddi Udaya

ರೈತರು ಆದಷ್ಟು ಬೇಗ ಫ್ರುಟ್ಸ್ ಐಡಿ ನೋಂದಣಿ ಮಾಡಬೇಕು ಹಾಗೂ: 18 ವರ್ಷವಾದವರು ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ನೋಂದಾವಣಿ ಮಾಡಿಕೊಳ್ಳಬೇಕು: ಪೃಥ್ವಿ ಸಾನಿಕಂ ಪತ್ರಿಕಾಗೋಷ್ಠಿ

Suddi Udaya

ಬೈಲಂಗಡಿ ಶ್ರೀ ಸೋಮನಾಥೇಶ್ವರ ಭಜನಾ ತಂಡದಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಭಜನಾ ತಂಡದ ಸದಸ್ಯ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ

Suddi Udaya
error: Content is protected !!