25.7 C
ಪುತ್ತೂರು, ಬೆಳ್ತಂಗಡಿ
May 17, 2025
ಜಿಲ್ಲಾ ಸುದ್ದಿತಾಲೂಕು ಸುದ್ದಿ

ರಾಜ್ಯ ಸರ್ಕಾರ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಕೇವಲ 3 ತಿಂಗಳಲ್ಲಿಗ್ಯಾರಂಟಿಗಳನ್ನು, ಅನುಷ್ಠಾನಗೊಳಿಸಿದೆ:ಎಂಎಲ್ಸಿ ಹರೀಶ್ ಕುಮಾರ್

ಬೆಳ್ತಂಗಡಿ: ಕರ್ನಾಟಕ ರಾಜ್ಯದ ನೂತನ ಸರಕಾರ, ರಾಜ್ಯದ ಜನತೆಗಾಗಿ ಚನಾವಣಾ ಸಂಧರ್ಭದಲ್ಲಿ ನೀಡಿದ ಗ್ಯಾರಂಟಿಗಳನ್ನು, ಕೇವಲ 3 ತಿಂಗಳ ಒಳಗಾಗಿ ಅನುಷ್ಠಾನಗೊಳಿಸಿದ್ದು, ರಾಜ್ಯದ ಕೋಟ್ಯಾಂತರ ಬಡ ಜನರು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶಕ್ತಿ, ಗ್ರಹಲಕ್ಷ್ಮಿ, ಗ್ರಹಜ್ಯೋತಿ, ಅನ್ನಭಾಗ್ಯ, ಹಾಗೂ ಯುವನಿಧಿ ಕಾಠ್ಯಕ್ರಮಗಳು ನಿರೀಕ್ಷೆಗೂ ಮೀರಿ ಜನರಿಂದ ಸ್ವೀಕೃತವಾಗಿದೆ. ರಾಜ್ಯದ ಮಹಿಳೆಯರು ಈ ಎಲ್ಲಾ ಗ್ಯಾರಂಟಿಗಳ ಫಲಾನುಭವಿಗಳಾಗಿದ್ದು, ಪದವೀಧರ ಯುವಕ ಯುವತಿಯರೂ ಫಲಾನುಭವಿ
ಗಳಾಗಿದ್ದಾರೆ. ರಾಜ್ಯ ಸರಕಾರ ವಾರ್ಷಿಕ 58,000/- ಕೋಟಿ ಹಣವನ್ನು ಈ ಕಾಯ೯ ಕ್ರಮಗಳಿಗೆ ಆಯವ್ಯಯದಲ್ಲಿ ಮೀಸಲಿರಿಸಿದೆ. ಫಲಾನುಭವಿ ಪ್ರತಿ ಕುಟುಂಬಗಳಿಗೂ ಮಾಸಿಕ 5000/- ದಂತೆ ವಾರ್ಷಿಕ 60,000/- ರೂ ಗಳವರೆಗಿನ ಪ್ರಯೋಜನ ಪಡೆಯುತ್ತಿದ್ದಾರೆ. ಮುಖ್ಯಮಂತ್ರಿಗಳಾದ ಸಿದ್ದಾರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ ರವರ ಒತ್ತಾಸೆಯ ಮೇರೆಗೆ ಇಡೀ ಸರಕಾರ ಶ್ರಮವಹಿಸಿ ಫಲಾನುಭವಿಗಳಿಗೆ ಯೋಜನೆ ತಲುಪುವಂತೆ ಶ್ರಮಿಸುತ್ತಿದ್ದಾರೆ. ಆದುದರಿಂದ ಫೆ.7, 9 ಹಾಗು 10ನೇ ಮಾರ್ಚ್‌ ನಲ್ಲಿ ಜಿಲ್ಲೆಯ 9 ತಾಲೂಕುಗಳಲ್ಲಿ ಗ್ಯಾರಂಟಿ ಸಮವೇಶಗಳನ್ನು ಹಮ್ಮಿಕೊಂಡಿದ್ದು ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್ ರವರು, ಶಾಸಕರು ಪಾಲ್ಗೊಳ್ಳಲ್ಲಿದ್ದಾರೆ. ಈ ಎಲ್ಲಾ ಕಾಠ್ಯಕ್ರಮಗಳಿಗೆ ಸಿದ್ಧತೆ ನಡೆಸಿದ್ದು ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೆರೆ ನೀಡಿದ್ದಾರೆ.

Related posts

ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಧ್ವಜಸ್ತಂಭದ ವೃಕ್ಷ ಮುಹೂರ್ತ

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದಿಂದ ಉಚಿತ ಬಸ್ಸು ಪಾಸು ವಿತರಣೆ

Suddi Udaya

ಭರತನಾಟ್ಯ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಅನುಜ್ಞಾ ತೇರ್ಗಡೆ

Suddi Udaya

ಕಲ್ಲೇರಿಯಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಶಿಬಿರ ಉದ್ಘಾಟನೆ

Suddi Udaya

ನಡ: ಪದ್ಮನಾಭ ಗೌಡರ ಕೈಬೆರಳು ಕಬ್ಬು ಜ್ಯೂಸ್ ಯಂತ್ರಕ್ಕೆ ಸಿಲುಕಿ ನಜ್ಜುಗುಜ್ಜು

Suddi Udaya

ಅಳದಂಗಡಿ ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನಕ್ಕೆ ದೈವದ ಆಸನ(ಮುಕ್ಕಾರ್) ಸಮಪ೯ಣೆ: ವಾಸ್ತು ಶಿಲ್ಪಿ ಸುಂದರ ಆಚಾರ್ಯ ಮಡೆಂಜಿಮಾರುರವರಿಗೆ ಕ್ಷೇತ್ರದಿಂದ ಗೌರವಾರ್ಪಣೆ

Suddi Udaya
error: Content is protected !!