ಉಜಿರೆ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್’ನಲ್ಲಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗೆ ಬೇಸಿಕ್ಸ್ ಆಫ್ ಸ್ಟ್ರಕ್ಚರಲ್ ಅನಾಲಿಸಿಸ್ (ಕಟ್ಟಡಗಳ ತಾಂತ್ರಿಕ ವಿನ್ಯಾಸದ ವಿಷಯ) ಕುರಿತು ಒಂದು ದಿನದ ಶೈಕ್ಷಣಿಕ ಕಾರ್ಯಾಗಾರವನ್ನು ಮಾ. 2ರಂದು ಆಯೋಜಿಸಲಾಯಿತು.
ಸಂಪನ್ಮೂಲ ವ್ಯಕ್ತಿ, ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ (ಇಂಡಿಯಾ) [ಎಸಿಸಿಇ(ಐ)] ಬೆಳ್ತಂಗಡಿ ಸೆಂಟರ್ ನ ಇಂಜಿನಿಯರ್ ವಿದ್ಯಾಶ್ರೀ ಪಿ ಎಸ್ ಅವರು ವಿದ್ಯಾರ್ಥಿಗಳಿಗೆ ಕಟ್ಟಡ ರಚನೆಯಲ್ಲಿನ ತಾಂತ್ರಿಕ ವಿನ್ಯಾಸದ ವಿಧಾನವನ್ನು ತಿಳಿಸಿಕೊಟ್ಟರು.
ಎಸಿಸಿಇ(ಐ) ಬೆಳ್ತಂಗಡಿ ಸೆಂಟರ್ ಅಧ್ಯಕ್ಷ ಇಂಜಿನಿಯರ್ ಜಗದೀಶ್ ಪ್ರಸಾದ್ ಎನ್. ಮಾತನಾಡಿದರು. ಎಸಿಸಿಇ(ಐ) ಬೆಳ್ತಂಗಡಿ ಸೆಂಟರ್ ಕಾರ್ಯದರ್ಶಿ ಇಂಜಿನಿಯರ್ ಚೇತನ್, ಮ್ಯಾನೇಜಿಂಗ್ ಕಮಿಟಿ ಸದಸ್ಯ ಇಂಜಿನಿಯರ್ ಪ್ರಮೋದ್, ಸದಸ್ಯ ಇಂಜಿನಿಯರ್ ಹರ್ಷೇಂದ್ರ, ಎಸ್.ಡಿ.ಎಂ. ಪಾಲಿಟೆಕ್ನಿಕ್ ಸಿವಿಲ್ ಎಂಜಿನಿಯರಿಂಗ್ ವಿಭಾಗ ಮುಖ್ಯಸ್ಥೆ ತೃಪ್ತಿ ಶೆಟ್ಟಿ ಮತ್ತು ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ದಿವ್ಯದರ್ಶಿನಿ ಕಾರ್ಯಕ್ರಮ ನಿರ್ವಹಿಸಿದರು.