ಧರ್ಮಸ್ಥಳ ಗ್ರಾ.ಪಂ. ನಲ್ಲಿ ವಿಶ್ವ ಮಹಿಳಾ ದಿನಾಚರಣೆ

Suddi Udaya

ಧರ್ಮಸ್ಥಳ : ಧರ್ಮಸ್ಥಳ ಗ್ರಾಮ ಪಂಚಾಯತ್ ನಲ್ಲಿ ಮಾ. 05 ರಂದು ವಿಶ್ವ ಮಹಿಳಾ ದಿನಾಚರಣೆ ಯನ್ನು ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ನಡೆಸಲಾಯಿತು.

ವೇದಿಕೆಯಲ್ಲಿರುವ ಗಣ್ಯರಿಂದ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ, ಪಂಚಾಯತ್ ಸದಸ್ಯರಾದ ಶ್ರೀಮತಿ ದಯಾಲಿನಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾದ ಉಜಿರೆಯ ದಂತ ವೈದ್ಯರಾದ ಡಾ. ದೀಪಾಲಿ ಡೋಂಗ್ರೆ ಯವರು ಮಹಿಳೆಯರ ಮಾನಸಿಕ ಆರೋಗ್ಯದ ಬಗ್ಗೆ ಮನಮುಟ್ಟುವಂತೆ, ಜೀವನದಲ್ಲಿ ಅಳವಡಿಸಿಕೊಳ್ಳುವಂತಹ ಮಾಹಿತಿಯನ್ನು ನೀಡಿದರು. ಆರ್ಥಿಕ ಸಮಾಲೋಚಕಿ ಶ್ರೀಮತಿ ಉಷಾ ರವರು ಆರ್ಥಿಕ ಸಬಲೀಕರಣದ ಬಗ್ಗೆ, ಸ್ವ ಸಹಾಯ ಸಂಘದ ಮಹಿಳೆಯರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಸವಿವರವಾಗಿ ತಿಳಿಸಿದರು. ಎನ್.ಆರ್.ಎಲ್.ಎಮ್ ನ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶ್ರೀಮತಿ ಪ್ರತಿಮಾ ಸಂಜೀವಿನಿ ತಾಲ್ಲೂಕ್ ಮಟ್ಟದ ಒಕ್ಕೂಟದ ಮಹಿಳೆಯರ ಯಶೋಗಾಥೆಗಳನ್ನು ತಿಳಿಸಿದರು.


ಈ ಸಂದರ್ಭದಲ್ಲಿ ಬೆನಕ ಸಂಜೀವಿನಿ ಸಂಘದ ಸದಸ್ಯರು ತಯಾರಿಸಿದ ದೇಶೀಯ ಮಸಾಲವಾದ ಬೆನಕ ಸಾಂಬಾರ್ ಮಸಾಲ , ಬೆನಕ ಚಿಕನ್ ಮಸಾಲ ಇದನ್ನು ಶುಭಾರಂಭಗೊಳಿಸಲಾಯಿತು.
ಒಕ್ಕೂಟದಲ್ಲಿ ಕೆಲವೊಂದು ಚಟುವಟಿಕೆಗಳ ಮೂಲಕ ಮಾದರಿಯಾಗಿರುವ ಶ್ರೀಮತಿ ಗೀತಾ, ಶ್ರೀಮತಿ ಮಮತಾ, ಶ್ರೀಮತಿ ಪುಷ್ಪಾ, ಶ್ರೀಮತಿ ಕೃಷ್ಣವೇಣಿ ಇವರನ್ನು ಸನ್ಮಾನಿಸಲಾಯಿತು. ಕೆಲವು ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.


ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಮಲ, ಉಪಾಧ್ಯಕ್ಷ ಪಿ. ಶ್ರೀನಿವಾಸ ರಾವ್ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ರಮ್ಯಾ, ಗೊಂಚಲು ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಯೋಗಿನಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮೇಶ್ ಕೆ, ಲೆಕ್ಕ ಸಹಾಯಕಿ ಶ್ರೀಮತಿ ಪ್ರಮೀಳಾ , ಎನ್.ಆರ್.ಎಲ್.ಎಮ್ ವಲಯ ಮೇಲ್ವಿಚಾರಕರಾದ ಶ್ರೀಮತಿ ವೀಣಾಶ್ರೀ , ಪಂಚಾಯತ್ ಸಿಬ್ಬಂದಿಗಳು , ಒಕ್ಕೂಟದ ಪದಾಧಿಕಾರಿಗಳು, ಗೊಂಚಲು ಸಮಿತಿಯ ಪದಾಧಿಕಾರಿಗಳು, ಎಮ್.ಬಿ.ಕೆ, ಎಲ್.ಸಿಆರ್.ಪಿ, ಕೃಷಿ ಸಖಿ, ಪಶು ಸಖಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ, ಸಂಜೀವಿನಿ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.

ಲೀಲಾವತಿ ಪ್ರಾರ್ಥಿಸಿ, ಎಮ್.ಬಿ.ಕೆ ಶ್ರೀಮತಿ ಚಂದ್ರಾವತಿಯವರ ನಿರೂಪಿಸಿ , ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಧನಲಕ್ಷ್ಮೀ ಸ್ವಾಗತಿಸಿ, ಎಲ್.ಸಿಆರ್.ಪಿ ಶ್ರೀಮತಿ ಪುಷ್ಪಾವತಿ ವಂದಿಸಿದರು.

Leave a Comment

error: Content is protected !!