September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಉಜಿರೆಯ ಲಾಡ್ಜ್ ಗೆ ಪೊಲೀಸ್ ದಾಳಿ: ವೇಶ್ಯಾವಾಟಿಕೆ‌ ನಿರತರಾಗಿದ್ದ‌ಮೂವರ ಬಂಧನ

ಉಜಿರೆ: ಉಜಿರೆಯ ಹಳೇ ಪೇಟೆ ಬಳಿಯ ಲಾಡ್ಜ್ ಒಂದರಲ್ಲಿ ವೇಶ್ಯಾವಾಟಿಕೆ‌ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿದ್ದು ವೇಶ್ಯಾವಾಟಿಕೆ‌ ನಿರತರಾಗಿದ್ದ ಆರೋಪಿಗಳನ್ನು ಬಂಧಿಸಿದ ಘಟನೆ ಮಾ. 6ರಂದು ನಡೆದಿದೆ.

ಮಾ.6 ರಂದು ಉಜಿರೆ ಗ್ರಾಮದ ಹಳೆ ಪೇಟೆ ಬಳಿಯ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ‌ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ, ಬೆಳ್ತಂಗಡಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಬಿ.ಜಿ. ಸುಬ್ಬಾಪೂರ ಮಠ್ ರವರು ಠಾಣಾ ಸಿಬಂದಿಗಳೊಂದಿಗೆ, ಸದ್ರಿ ಸ್ಥಳಕ್ಕೆ ದಾಳಿ ನಡೆಸಿ, ವೇಶ್ಯಾವಾಟಿಕೆ‌ ನಿರತರಾಗಿದ್ದ ಆರೋಪಿಗಳಾದ, ರೇಣುಕಾ ಪ್ರಸಾದ್, ಅರಳೇ ಪೇಟೆ, ತುಮಕೂರು, ರಾಜೇಶ್ ಮೋಹನ್ ನಾಯರ್ ನಿಟ್ಟೆ ಕಾರ್ಕಳ, ನಿತಿನ್ ಕುಮಾರ್, ನೂರಾಲ್ ಬೆಟ್ಟು ಕಾರ್ಕಳ ಎಂಬವರುಗಳನ್ನು ವಶಕ್ಕೆ ಪಡೆದುಕೊಂಡು, ಸ್ಥಳದಲ್ಲಿದ್ದ ಪ್ರಕರಣದ ನೊಂದ ಮಹಿಳೆಯನ್ನು ಮಹಿಳಾ ಸಿಬ್ಬಂದಿಗಳ ಭದ್ರತೆಗೆ ಕೊಟ್ಟು, ಸದ್ರಿ ಆರೋಪಿಗಳ ವಿರುದ್ದ ಹಾಗೂ ದಾಳಿಯ ವೇಳೆ ಪರಾರಿಯಾದ ಆರೋಪಿಗಳ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 30/24 ಕಲಂ:3,4,5,5 (d) ITP ACT ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಅಭಿವೃದ್ಧಿ ಕಾರ್ಯಗಳ ಕುರಿತು ಸಭೆ

Suddi Udaya

ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಅಧಿಕಾರಿಯಾಗಿ ಡಾ. ಪ್ರಕಾಶ್ ಎಸ್ ನೇಮಕ

Suddi Udaya

ಬೆಳ್ತಂಗಡಿ ತಾಲೂಕು ಹಬ್ಬಗಳ ಆಚರಣಾ ಸಮಿತಿ ಅಕ್ಕಮಹಾದೇವಿ ಜಯಂತಿ ಆಚರಣೆ

Suddi Udaya

ಪುಂಜಾಲಕಟ್ಟೆಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಮಾಸಿಕ ಆರೋಗ್ಯ ಜಾಗೃತಿ

Suddi Udaya

ಬೆಳ್ತಂಗಡಿ : ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಬೆಳ್ತಂಗಡಿಯ ಸ್ವರ್ಣ ಶಿಲ್ಪಿ ಎಚ್. ಗೋಪಾಲ ಆಚಾರ್ಯ ರವರಿಗೆ ‘ಎಸ್.ಕೆ.ಜಿ.ಐ ಪಾಲ್ಕೆ ಪ್ರಶಸ್ತಿ”

Suddi Udaya
error: Content is protected !!