ಶಿರ್ಲಾಲು ಗ್ರಾಮ ಪಂಚಾಯತ್ ನ 2023-24 ನೇ ಸಾಲಿನ ದ್ವೀತಿಯ ಸುತ್ತಿನ ಗ್ರಾಮ ಸಭೆಯು ಪಂಚಾಯತ್ ಅದ್ಯಕ್ಷೆ ಉಷಾ ಎಂ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಮಾ.7 ರಂದು ನಡೆಯಿತು.
ಸಮಾಜ ಕಲ್ಯಾಣಧಿಕಾರಿ ಹೇಮಚಂದ್ರರವರು ಗ್ರಾಮಸಭೆಯನ್ನು ಮುನ್ನಡೆಸಿದರು.
ಗ್ರಾಮಸಭೆ ಪ್ರಾರಂಭದಲ್ಲಿ ಅನುಪಾಲನ ವರದಿಯ ಬಗ್ಗೆ ಪ್ರಾಸ್ತಾಪಿಸಿದಾಗ ಇದರಲ್ಲಿ ಎಷ್ಟು ಕೆಲಸವನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ಕುಶಾಲಪ್ಪ ಗೌಡ ಪ್ರಶ್ನಿಸಿದರು. ಮುಂದಿನ ಗ್ರಾಮ ಸಭೆಯೊಳಗೆ ಅನುಪಾಲನ ವರದಿಯ ಬಗ್ಗೆ ತಿಳಿಸಲಾಗುವುದು ಎಂದರು.
ಈ ಅನುಪಾಲನ ವರದಿ ಬಗ್ಗೆ ಗ್ರಾಮಸಭೆಯಲ್ಲಿ ಸದ್ದು ಗದ್ದಲ ಪ್ರಾರಂಭಗೊಂಡಿತ್ತು. ವೈಯಕ್ತಿಕ ಚರ್ಚೆಗೆ ಗ್ರಾಮಸಭೆ ಸಾಕ್ಷಿಯಾಯಿತು. ಕುಶಾಲಪ್ಪ ಗೌಡ ಮತ್ತು ತಾರನಾಥ ಗೌಡರ ನಡುವೆ ಮಾತಿನ ಚಕಮಕಿ ನಡೆಯಿತು. ನೀವು ನಿಮ್ಮ ವೈಯಕ್ತಿಕ ದ್ವೇಷ ಸಾಧನೆಯನ್ನು ಹೊರಗಡೆ ಮಾಡಿ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು. ಗ್ರಾಮ ಸಭೆ ಸದ್ದು ಗದ್ದಲದಿಂದ ಕೂಡಿತ್ತು.
ಮದುವೆಯಾಗುವ ಮೊದಲೇ ನೀವು ಅವರಿಗೆ ರೂ 2000 ಸಾವಿರ ನೀಡುತ್ತಿರಿ. ಹಣ ನೀಡಿದ್ದು ತಪ್ಪುವಲ್ಲ ಆದರೆ ನೀವು ಗ್ರಾಮಸ್ಥ ಒರ್ವ ಮರಣ ಹೊಂದಿದರೆ ಅವರ ವ್ಯವಸ್ಥೆಯನ್ನು ಮಾಡೋಕೆ ಪಂಚಾಯತ್ ಲ್ಲಿ ಹಣವಿಲ್ಲ.ದಾಖಲೆ ನೀಡಿ ಎನ್ನುತ್ತೀರಿ.ಹಾಗದರೇ ಮದುವೆ ಆಗುವ ಮೊದಲೇ ಹಣ ಹೇಗೆ ನೀಡಿದ್ದು ಎಂದು ಗ್ರಾಮಸ್ಥ ಅಣ್ಣು ಅವರು ತಿಳಿಸಿದರು.
ಅದಕ್ಕೆ ಪಂಚಾಯತ್ ಆಡಳಿತ ಮಂಡಳಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಹಣ ನೀಡಿದ್ದೇವೆ. ಸಮಸ್ಯೆಗಳನ್ನು ಸರಿ ಪಡಿಸುವ ಭರವಸೆ ನೀಡಿದರು.
ಗ್ರಾಮದ ಅಭಿವೃದ್ಧಿಯ ದೃಷ್ಟಿಯಿಂದ ಹಲವಾರು ಚರ್ಚೆಗಳು ನಡೆದವು. ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಬಗ್ಗೆ ತಿಳಿಯಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಪವರ್ ಕಟ್ ಸಮಸ್ಯೆ ಎದುರಾಗಿದೆ.10 ನಿಮಿಷಕ್ಕೊಮ್ಮೆ ವಿದ್ಯುತ್ ತೆಗಿತಾ ಇರುತ್ತೀರಿ. ಮಕ್ಕಳು ಓದುವ ಸಮಯ ಸಂಜೆ ಗಂಟೆ 6 ತಿಂದ 20 ರ ತನಕ ಆ ಸಮಯದಲ್ಲಿ ದಯವಿಟ್ಟು ಪವರ್ ಕಟ್ ಮಾಡಬೇಡಿ ಎಂದು ಗ್ರಾಮಸ್ಥರು ಒತ್ತಾಯಿಸಿದರು. ಅದಕ್ಕೆ ಮೆಸ್ಕಾಂ ಅಧಿಕಾರಿ ಒವರ್ ಲೋಡುನಿಂದ ಈ ಸಮಸ್ಯೆ ಎದುರಾಗಿದೆ. ಶೀಘ್ರದಲ್ಲೇ ಸರಿ ಪಡಿಸುವ ಭರವಸೆ ನೀಡಿದರು.
ಪಂಚಾಯತ್ ಉಪಾಧ್ಯಕ್ಷ ಸೋಮನಾಥ ಬಂಗೇರ, ಸದಸ್ಯರಾದ ತಾರನಾಥ ಗೌಡ,ಮಾಧವ,ಮಮತಾ ಜೈನ್,ಕೊರಗಪ್ಪ, ಗೀತಾ,ಪ್ರಕಾಶ್ ಹೆಗ್ಡೆ,ಜ್ಯೋತಿ ಪೂಜಾರಿ,ಗೀತಾ,ಸುಶೀಲ ಹಾಗೂ ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಶೀಲ, ಕಾರ್ಯದರ್ಶಿ ಮೊನಮ್ಮ ಅನಪಾಲನ ವರದಿ ಮತ್ತು ಜಮಾ ಖರ್ಚಿನ ಬಗ್ಗೆ ತಿಳಿಸಿದರು.
ಗ್ರಾಮಸ್ಥರ ಪರವಾಗಿ ಕುಶಾಲಪ್ಪ ಗೌಡ, ನವೀನ್ ಸಾಮಾನಿ, ಪುಷ್ಪರಾಜ್, ಸುನೀಲ್ ಜೈನ್, ಅಣ್ಣು, ಬಾಬು,ಶಿವ, ಅರುಣ ಮಡಿವಾಳ,ನಜೀರ್,ಆನಂದ ಗ್ರಾಮಸಭೆಯಲ್ಲಿ ಗ್ರಾಮದ ಅಭಿವೃದ್ಧಿಗೆ ಚರ್ಚಿಸಿದರು.