ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸದ್ದು ಗದ್ದಲದೊಂದಿಗೆ ಪ್ರಾರಂಭಗೊಂಡ ಶಿರ್ಲಾಲು ಗ್ರಾಮಸಭೆ

ಶಿರ್ಲಾಲು ಗ್ರಾಮ ಪಂಚಾಯತ್ ನ 2023-24 ನೇ ಸಾಲಿನ ದ್ವೀತಿಯ ಸುತ್ತಿನ ಗ್ರಾಮ ಸಭೆಯು ಪಂಚಾಯತ್ ಅದ್ಯಕ್ಷೆ ಉಷಾ ಎಂ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಮಾ.7 ರಂದು ನಡೆಯಿತು.

ಸಮಾಜ ಕಲ್ಯಾಣಧಿಕಾರಿ ಹೇಮಚಂದ್ರರವರು ಗ್ರಾಮ‌ಸಭೆಯನ್ನು ಮುನ್ನಡೆಸಿದರು.

ಗ್ರಾಮ‌ಸಭೆ ಪ್ರಾರಂಭದಲ್ಲಿ ಅನುಪಾಲನ ವರದಿಯ ಬಗ್ಗೆ ಪ್ರಾಸ್ತಾಪಿಸಿದಾಗ ಇದರಲ್ಲಿ ಎಷ್ಟು ಕೆಲಸವನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ಕುಶಾಲಪ್ಪ ಗೌಡ ಪ್ರಶ್ನಿಸಿದರು. ಮುಂದಿನ ಗ್ರಾಮ ಸಭೆಯೊಳಗೆ ಅನುಪಾಲನ ವರದಿಯ ಬಗ್ಗೆ ತಿಳಿಸಲಾಗುವುದು ಎಂದರು.

ಈ ಅನುಪಾಲನ ವರದಿ ಬಗ್ಗೆ ಗ್ರಾಮಸಭೆಯಲ್ಲಿ ಸದ್ದು ಗದ್ದಲ ಪ್ರಾರಂಭಗೊಂಡಿತ್ತು. ವೈಯಕ್ತಿಕ ಚರ್ಚೆಗೆ ಗ್ರಾಮಸಭೆ ಸಾಕ್ಷಿಯಾಯಿತು. ಕುಶಾಲಪ್ಪ ಗೌಡ ಮತ್ತು ತಾರನಾಥ ಗೌಡರ ನಡುವೆ ಮಾತಿನ ಚಕಮಕಿ ನಡೆಯಿತು. ನೀವು ನಿಮ್ಮ ವೈಯಕ್ತಿಕ ದ್ವೇಷ ಸಾಧನೆಯನ್ನು ಹೊರಗಡೆ ಮಾಡಿ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು. ಗ್ರಾಮ ಸಭೆ ಸದ್ದು ಗದ್ದಲದಿಂದ ಕೂಡಿತ್ತು.

ಮದುವೆಯಾಗುವ ಮೊದಲೇ ನೀವು ಅವರಿಗೆ ರೂ 2000 ಸಾವಿರ ನೀಡುತ್ತಿರಿ. ಹಣ ನೀಡಿದ್ದು ತಪ್ಪುವಲ್ಲ ಆದರೆ ನೀವು ಗ್ರಾಮಸ್ಥ ಒರ್ವ ಮರಣ ಹೊಂದಿದರೆ ಅವರ ವ್ಯವಸ್ಥೆಯನ್ನು ಮಾಡೋಕೆ ಪಂಚಾಯತ್ ಲ್ಲಿ ಹಣವಿಲ್ಲ.ದಾಖಲೆ ನೀಡಿ ಎನ್ನುತ್ತೀರಿ.ಹಾಗದರೇ ಮದುವೆ ಆಗುವ ಮೊದಲೇ ಹಣ ಹೇಗೆ ನೀಡಿದ್ದು ಎಂದು ಗ್ರಾಮಸ್ಥ ಅಣ್ಣು ಅವರು ತಿಳಿಸಿದರು.

ಅದಕ್ಕೆ ಪಂಚಾಯತ್ ಆಡಳಿತ ಮಂಡಳಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಹಣ ನೀಡಿದ್ದೇವೆ. ಸಮಸ್ಯೆಗಳನ್ನು ಸರಿ ಪಡಿಸುವ ಭರವಸೆ ನೀಡಿದರು.

ಗ್ರಾಮದ ಅಭಿವೃದ್ಧಿಯ ದೃಷ್ಟಿಯಿಂದ ಹಲವಾರು ಚರ್ಚೆಗಳು ನಡೆದವು. ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಬಗ್ಗೆ ತಿಳಿಯಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಪವರ್ ಕಟ್ ಸಮಸ್ಯೆ ಎದುರಾಗಿದೆ.10 ನಿಮಿಷಕ್ಕೊಮ್ಮೆ ವಿದ್ಯುತ್ ತೆಗಿತಾ ಇರುತ್ತೀರಿ. ಮಕ್ಕಳು ಓದುವ ಸಮಯ ಸಂಜೆ ಗಂಟೆ 6 ತಿಂದ 20 ರ ತನಕ ಆ ಸಮಯದಲ್ಲಿ ದಯವಿಟ್ಟು ಪವರ್ ಕಟ್ ಮಾಡಬೇಡಿ ಎಂದು ಗ್ರಾಮಸ್ಥರು ಒತ್ತಾಯಿಸಿದರು. ಅದಕ್ಕೆ ಮೆಸ್ಕಾಂ ಅಧಿಕಾರಿ ಒವರ್ ಲೋಡುನಿಂದ ಈ ಸಮಸ್ಯೆ ಎದುರಾಗಿದೆ. ಶೀಘ್ರದಲ್ಲೇ ಸರಿ ಪಡಿಸುವ ಭರವಸೆ ನೀಡಿದರು.

ಪಂಚಾಯತ್ ಉಪಾಧ್ಯಕ್ಷ ಸೋಮನಾಥ ಬಂಗೇರ, ಸದಸ್ಯರಾದ ತಾರನಾಥ ಗೌಡ,ಮಾಧವ,ಮಮತಾ ಜೈನ್,ಕೊರಗಪ್ಪ, ಗೀತಾ,ಪ್ರಕಾಶ್ ಹೆಗ್ಡೆ,ಜ್ಯೋತಿ ಪೂಜಾರಿ,ಗೀತಾ,ಸುಶೀಲ ಹಾಗೂ ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಶೀಲ, ಕಾರ್ಯದರ್ಶಿ ಮೊನಮ್ಮ ಅನಪಾಲನ ವರದಿ ಮತ್ತು ಜಮಾ ಖರ್ಚಿನ ಬಗ್ಗೆ ತಿಳಿಸಿದರು.

ಗ್ರಾಮಸ್ಥರ ಪರವಾಗಿ ಕುಶಾಲಪ್ಪ ಗೌಡ, ನವೀನ್ ಸಾಮಾನಿ, ಪುಷ್ಪರಾಜ್, ಸುನೀಲ್ ಜೈನ್, ಅಣ್ಣು, ಬಾಬು,ಶಿವ, ಅರುಣ ಮಡಿವಾಳ,ನಜೀರ್,ಆನಂದ ಗ್ರಾಮಸಭೆಯಲ್ಲಿ ಗ್ರಾಮದ ಅಭಿವೃದ್ಧಿಗೆ ಚರ್ಚಿಸಿದರು.

Related posts

ಮುಂಡಾಜೆ ದಿನೇಶ್ ಆಚಾರ್ಯ ರವರಿಗೆ “ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ” ಪ್ರದಾನ

Suddi Udaya

ಧರ್ಮಸ್ಥಳ: ಶ್ರೀ ಧ.ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ವತಿಯಿಂದ ಯೋಗ ರತ್ನ ಪ್ರಶಸ್ತಿಗೆ ಖುಷಿ. ಹೆಚ್, ಮೈಸೂರು ಆಯ್ಕೆ

Suddi Udaya

ಕುವೆಟ್ಟು ಗ್ರಾ.ಪಂ. ನಿಂದ ಸಹಾಯಧನ ಹಸ್ತಾಂತರ

Suddi Udaya

ನಡ: ಕನ್ಯಾಡಿ-1 ಸಾರ್ವ ಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲೆಂದು ಕೇರಳದ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬೆಳ್ತಂಗಡಿ ಯುವ ಕಾಂಗ್ರೆಸ್ ನ ಉಪಾಧ್ಯಕ್ಷ ಪ್ರಜ್ವಲ್ ಜೈನ್ ನಾವರ

Suddi Udaya

ನ.7: ಅಡಿಕೆ ಬೆಳೆ ಮತ್ತು ಕಾಳು ಮೆಣಸು ಬೆಳೆಗಳ ಆಧುನಿಕ ಬೇಸಾಯ ಕ್ರಮದ ಕುರಿತು ಕೃಷಿಕರಿಗೆ ತರಬೇತಿ ಕಾರ್ಯಕ್ರಮ

Suddi Udaya
error: Content is protected !!