April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಾ.9: ಬಜಿರೆಯಲ್ಲಿ 60 ಕೆ.ಜಿ ವಿಭಾಗದ ಪುರುಷರ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ: ಯಂಗ್ ಬಾಯ್ಸ್ ಟ್ರೋಫಿ

ವೇಣೂರು: ಯಂಗ್ ಬಾಯ್ಸ್ ಬಜಿರೆ ಇದರ ಸಾರಥ್ಯದಲ್ಲಿ ಯುವಶಕ್ತಿ ಬಜಿರೆ ಇದರ ಸಹಕಾರದೊಂದಿಗೆ ದ.ಕ. ಜಿಲ್ಲಾ ಮತ್ತು ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಇದರ ಸಹಭಾಗಿತ್ವದಲ್ಲಿ 60 ಕೆ.ಜಿ ವಿಭಾಗದ ಪುರುಷರ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಯಂಗ್ ಬಾಯ್ಸ್ ಟ್ರೋಫಿ – 2024 ಮಾ.9ರಂದು ವೇಣೂರು ಬಜಿರೆಯಲ್ಲಿ ನಡೆಯಲಿದೆ.

ಅಧ್ಯಕ್ಷತೆಯನ್ನು ವೇಣೂರು ಗ್ರಾ.ಪಂ. ಅಧ್ಯಕ್ಷ ನೇಮಯ್ಯ ಕುಲಾಲ್ ವಹಿಸಲಿದ್ದಾರೆ, ಕಾರ್ಯಕ್ರಮದ ಉದ್ಘಾಟನೆಯನ್ನು ರಾಜೇಂದ್ರ ಆಚಾರ್ಯ, ಕಲ್ಪನೆ, ಬಜಿರೆ ಹಾಗೂ ಕ್ರೀಡಾಂಗಣ ಉದ್ಘಾಟನೆಯನ್ನು ಸುರೇಶ್ ಆರಿಗ, ಪೆರ್ಮಾಣುಗುತ್ತು, ಬಜಿರೆ ವಹಿಸಲಿದ್ದಾರೆ,

ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ್, ಹರೀಶ್ ಕುಮಾರ್, ಭಾ.ಜ.ಪಾ. ದ.ಕ. ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್ ಮರೋಡಿ, ವೇಣೂರು ಪ್ರಾ.ಕೃ.ಪ.ಸ.ಸಂಘ (ನಿ.) ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ., ಅಳದಂಗಡಿ ಕ್ಷೇತ್ರ ಮಾಜಿ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ , ವೇಣೂರು ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾವತಿ ಡಿ. ಹಾಗೂ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಬಜಿರೆಯ ಸಕ್ರೀಯ ಸದಸ್ಯರಾದ ಯುನಿವರ್ಸಿಟಿ ಗೋಲ್ಡ್ ಮೆಡಲಿಸ್ಟ್ ಹಾಗೂ ಖೋಲೋ ಇಂಡಿಯಾ ಯೂನಿವರ್ಸಿಟಿ ಗೋಲ್ಡ್ ಮೆಡಲಿಸ್ಟ್ ಗಳಾದ ಸುಶಾಂತ್ ಶೆಟ್ಟಿ, ಶಶಾಂಕ್ ಆಚಾರ್ಯ ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆಗೈದ ಸದಾಶಿವ ಕುಲಾಲ್, ಸದಾಶಿವ ಆಚಾರ್ಯ, ಶೈಕ್ಷಣೀಕ ಕ್ಷೇತ್ರದಲ್ಲಿ ದೀಪಕ್ ಹೆಗ್ಡೆ, ಕ್ರೀಡಾ ಕ್ಷೇಥ್ರ ಪ್ರಿಥ್ವಿ ಭಂಡಾರಿ ದೇರಾಜೆ, ಸಿಂಚನ್ ಎಸ್, ಸಾಕ್ಷಿತಾ ಇವರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

Related posts

ಪಜಿರಡ್ಕ ಸೇತುವೆಯ ಡ್ಯಾಮ್ ಸ್ವಚ್ಛಗೊಳಿಸಿದ ಸ್ಥಳೀಯರು

Suddi Udaya

ಬೆಳ್ತಂಗಡಿ ಸ.ಪ್ರ.ದ. ಕಾಲೇಜಿನಲ್ಲಿ ಮಾನವಿಕ ಸಂಘ ಹಾಗೂ ಐಕ್ಯುಎಸಿ ಆಶ್ರಯದಲ್ಲಿ ‘ವಿಶ್ರುತಿ 2k24’ ಹಬ್ಬ

Suddi Udaya

ಕೂಟದ ಕಲ್ಲು ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಪ್ರಭಾಕರ್, ಕಾರ್ಯದರ್ಶಿ ರಂಜನ್ ಆಯ್ಕೆ

Suddi Udaya

ಸುಲ್ಕೇರಿ ಶ್ರೀರಾಮ ಶಾಲೆಗೆ ಕೈಗಾರಿಕೋದ್ಯಮಿ ಅಶ್ವಥ್ ಹೆಗ್ಡೆಯವರಿಂದ 650 ಊಟದ ಸ್ಟೀಲ್ ತಟ್ಟೆ ಹಸ್ತಾಂತರ

Suddi Udaya

ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ದ.ಕ. ಜಿಲ್ಲೆಯ 7 ಮಸೀದಿಗಳಿಗೆ ಮೃತದೇಹ ಸಂರಕ್ಷಣಾ ಫ್ರೀಝರ್ ಹಸ್ತಾಂತರ

Suddi Udaya

ವೇಣೂರು ನವಚೇತನ ಆಂಗ್ಲಮಾಧ್ಯಮ ಶಾಲೆಯ ವಾರ್ಷಿಕೋತ್ಸವ

Suddi Udaya
error: Content is protected !!