ಮಿತ್ತಬಾಗಿಲು: ಇಲ್ಲಿಯ ಕೂಡಬೆಟ್ಟು ಶ್ರೀ ಸದಾಶಿವ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಉತ್ಸವವು ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ಪಾವಂಜೆ ವಾಗೀಶ ಶಾಸ್ತ್ರಿಯವರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಿತು.
ಬೆಳಿಗ್ಗೆ ಪಂಚವಿಂಶತಿ ಕಲಶ ಸ್ಥಾಪನೆ, ಗಣಹೋಮ, ಅಧಿವಾಸ ಹೋಮ, ತೋರಣ ಮೂಹೂರ್ತ, ರುದ್ರಾಭಿಷೇಕ, ಪಂಚವಿಂಶತಿ ಕಲಶಾಭಿಷೇಕ, ಮಹಾಪೂಜೆ, ಉತ್ಸವ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮದ ವಿದ್ಯುಕ್ತ ಉದ್ಘಾಟನೆ, ಕುಣಿತ ಭಜನೆ, ನಡೆಯಿತು.
ಈ ಸಂದರ್ಭದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಅಶೋಕ ಗೌಡ, ಕಾರ್ಯದರ್ಶಿ ರಾಜೇಶ್ ಎನ್.ಆರ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧನಂಜಯ ರಾವ್ ವಕೀಲರು, ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು, ಉತ್ಸವ ಸಮಿತಿಯ ಗೌರವಾಧ್ಯಕ್ಷರು, ಪದಾಧಿಕಾರಿಗಳು, ಅರ್ಚಕ ವೃಂದ, ವಿಲಯದವರು, ಊರವರು ಉಪಸ್ಥಿತರಿದ್ದರು.
ಸಂಜೆ 4.45 ಕ್ಕೆ ಏಕಾದಶ ರುದ್ರಾಭಿಷೇಕ, ನಿತ್ಯಪೂಜೆ, ದೈವಗಳಿಗೆ ಪರ್ವ, ಭಂಡಾರ ಇಳಿಸಿಕೊಡುವುದು, ರಾತ್ರಿ ಯಕ್ಷನೃತ್ಯ ಗಾನ, ವೈಭವ, , ಮಹಾರಂಗಪೂಜೆ, ಬಲಿ, ಕಟ್ಟೆ ಪೂಜೆ, ಮಂತ್ರಾಕ್ಷತೆ, ಪಿಲಿಚಾಮುಂಡಿ, ಕಲ್ಕುಡ, ಕಲ್ಲುರ್ಟಿ ದೈವಗಳಿಗೆ ನೇಮೋತ್ಸವ, ರಾತ್ರಿ ಗಮಟೆ 1.30 ರಿಂದ ಶಿವಜಾಗರಣೆ ಅಂಗವಾಗಿ ಗ್ರಾಮೀಣ ಆಟವಾದ ತೆಂಗಿನಕಾಯಿ ಕುಟ್ಟುವ ಸ್ಪರ್ಧೆ ನಡೆಯಲಿದೆ.