April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ: ಶ್ರೀ ಧ.ಮಂ. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ (ಡಿ.ಇಎಲ್.ಇಡಿ) ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಉಜಿರೆ :ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಕರ ತರಬೇತಿ( ಡಿ .ಇಎ ಲ್. ಇಡಿ) ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಡಾಟ್ ಮಂಡಲ ಆರ್ಟ್ ನಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಮಾಡಿದ ಹಾಗು ಇನ್ನಿತರ ಚಿತ್ರಕಲಾ ಪ್ರದರ್ಶನದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡ ಬೆಳ್ತಂಗಡಿಯ ಲಾಯಿಲ ಗ್ರಾಮದ ಕು. ಸುರಕ್ಷ ಆಚಾರ್ಯ ಮಾತನಾಡುತ್ತಾ ಮಹಿಳೆಯು ಕುಟುಂಬದ ಆಧಾರಸ್ತಂಭ. ಸಮಾಜದಲ್ಲಿ ಹೆಣ್ಣು ತಾಯಿಯಾಗಿ, ಮಗಳಾಗಿ, ಸಹೋದರಿಯಾಗಿ, ಹೆಂಡತಿಯಾಗಿ ಪಾತ್ರ ನಿರ್ವಹಿಸುವುದರ ಜೊತೆಗೆ ಸಮಾಜದ ಮುಖ್ಯ ವಾಹಿನಿಯಲ್ಲಿ ತೊಡಗಿಸಿಕೊಂಡು ಸ್ವತಂತ್ರಳಾಗಿ ಜೀವನ ನಡೆಸುವುದರೊಂದಿಗೆ ಇನ್ನೊಬ್ಬರಿಗೆ ಸ್ಫೂರ್ತಿಯಾಗಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಉಪನ್ಯಾಸಕಿ ಅನುಷಾ ಡಿ.ಜೆ. ವಹಿಸಿ ಮಾತನಾಡುತ್ತಾ ಹೆಣ್ಣು ಸಮಾಜದ ಕಣ್ಣು ಸಮಾಜದಲ್ಲಿ ಹೆಣ್ಣಿಗೆ ವಿಶೇಷವಾದ ಸ್ಥಾನಮಾನವಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿ ವಿಶ್ವದ ಗಮನ ಸೆಳೆಯುವಲ್ಲಿ ಮಹಿಳೆಯ ಪಾತ್ರ ಮಹತ್ತರವಾದದ್ದು ಎಂದು ಹೇಳಿದರು.

ಪ್ರಶಿಕ್ಷಣಾರ್ಥಿಗಳಾದ ವಂದನಾ ಹಾಗೂ ಭೂಮಿಕಾ ಅಂತರಾಷ್ಟ್ರೀಯ ಮಹಿಳಾ ದಿನದ ಕುರಿತು ಮಾತನಾಡಿದರು.

ಉಪನ್ಯಾಸಕರಾದ ಮಂಜು ಆರ್ ಹಾಗೂ ಸಿಬ್ಬಂದಿ ವರ್ಗದವರು, ಪ್ರಶಿಕ್ಷಣಾರ್ಥಿಗಳು ಉಪಸ್ಥಿರಿದ್ದರು.

ಪ್ರಶಿಕ್ಷಣಾರ್ಥಿಗಳಾದ ಅಂಬಿಕಾ ಪ್ರಾರ್ಥಿಸಿ ಧನ್ಯಶ್ರೀ ಸ್ವಾಗತಿಸಿ. ಸುರಕ್ಷಾ ವಂದಿಸಿ. ಫಾತಿಮತ್ ರಾಯೀಝ ಕಾರ್ಯಕ್ರಮ ನಿರೂಪಿಸಿದರು.

Related posts

ಕಪಿಲ ಕೇಸರಿ ಯುವಕ ಮಂಡಲದ ವತಿಯಿಂದ ಧನ ಸಂಗ್ರಹ, ಹಸ್ತಾಂತರ

Suddi Udaya

ಆಟೋ ಚಾಲಕನಿಗೆ ಅಪರಿಚಿತ ತಂಡದಿಂದ ಹಲ್ಲೆ: ಠಾಣೆಗೆ ದೂರು

Suddi Udaya

ಮುಂಡೂರು ಶ್ರೀ ಕ್ಷೇತ್ರ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ

Suddi Udaya

ದಿ. ಕೆ.ವಸಂತ ಬಂಗೇರ ಮತ್ತು ಎಚ್ ಶೇಖರ ಬಂಗೇರರವರಿಗೆ ಗೆಜ್ಜೆ ಗಿರಿಯಲ್ಲಿ ಶ್ರದ್ಧಾಂಜಲಿ

Suddi Udaya

ಉಜಿರೆ: ಶ್ರೀ ಶಾರದಾ ಪೂಜೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ನಿಟ್ಟಡೆ ಕುಂಭ ಶ್ರೀ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya
error: Content is protected !!