ಬೆಳ್ತಂಗಡಿ: ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದ ಅಭಿವೃದ್ಧಿಗೆ ರೂ 10 ಲಕ್ಷ ಅನುದಾನ ನೀಡುವುದಾಗಿ ಶಾಸಕ ಹರೀಶ್ ಪೂಂಜ ಭರವಸೆ ನೀಡಿದರು
ಅವರು ಮಾ.8 ರಂದು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ (ರಿ)ಬಳಂಜ, ಯುವಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಬಳಂಜ- ನಾಲ್ಕೂರು-ತೆಂಕಕಾರಂದೂರು ಇದರ ವತಿಯಿಂದ ನಡೆದ ಶ್ರಿಸತ್ಯನಾರಾಯಣ ಪೂಜೆ,ಶ್ರಿಗುರುಪೂಜೆ,ಶ್ರಿ ಸರ್ವೇಶ್ವರೀ ದೇವಿಯ ಪೂಜೆ ಹಾಗೂ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಉದ್ಯಮಿ ಮೋಹನ್ ಕುಮಾರ್ ಮಾತನಾಡಿ ಪ್ರತಿಯೊಬ್ಬರು ಜೀವನದಲ್ಲಿ ಉತ್ತಮ ಆದರ್ಶಗಳನ್ನು ಅಳವಡಿಸಿಕೊಂಡಾಗ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳಾಗಲು ಸಾದ್ಯ ಎಂದರು.
ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ ಮಾತನಾಡಿ ಬಳಂಜ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಸಾಧಕರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ ಎಂದರು.
ವೇದಿಕೆಯಲ್ಲಿ ಮುಂಡೂರು ಶ್ರೀ ನಾಗಕಲ್ಲುರ್ಟಿ ದೈವಸ್ಥಾನದ ಆಡಳಿತ ಮೊಕ್ತೇಸರ ರಾಜೀವ,ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಪೂಜಾರಿ,ಬೆಳ್ತಂಗಡಿ ಜೆಸಿಐ ಅದ್ಯಕ್ಷ ರಂಜಿತ್ ಹೆಚ್ ಡಿ,ಮಂಗಳೂರು ಸೋಮೇಶ್ವರ ಪುರಸಬೆ ಸದಸ್ಯ ಜಯ ಪೂಜಾರಿ,ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ ಶುಭ ಹಾರೈಸಿದರು.
ಬಳಂಜ ಬ್ರಹ್ಮಶ್ರೀ ನಾರಾಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಬಳಂಜ ಗ್ರಾ.ಪಂ ಅಧ್ಯಕ್ಷೆ ಶೋಭಾ ಕುಲಾಲ್, ಸಂಘದ ಗೌರವ ಅಧ್ಯಕ್ಷ ಹೆಚ್ ಧರ್ಣಪ್ಪ ಪೂಜಾರಿ,ಗೌರವ ಮಾರ್ಗದರ್ಶಕ ಕೆ.ವಸಂತ ಸಾಲ್ಯಾನ್,ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಭಾರತಿ ಸಂತೋಷ್, ಬಳಂಜ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಶರತ್ ಅಂಚನ್, ಸಂಘದ ಪ್ರದಾನ ಕಾರ್ಯದರ್ಶಿ ಜಗದೀಶ್ ಪೂಜಾರಿ ಬಳ್ಳಿದಡ್ಡ ಉಪಸ್ಥಿತರಿದ್ದರು.
ಸನ್ಮಾನ: ಅಳದಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ರಾಕೇಶ್ ಹೆಗ್ಡೆ,ನಿರ್ದೇಶಕರುಗಳಾದ ಹೆಚ್. ದೇಜಪ್ಪ ಪೂಜಾರಿ,ಗುರುಪ್ರಸಾದ್ ಹೆಗ್ಡೆ,ವಿಶ್ವನಾಥ್ ಹೊಳ್ಳ,ಹೇಮಂತ್ ಕಟ್ಟೆ,ದಿನೇಶ್ ಪಿ.ಕೆ,ಮಮತಾ ಕಟ್ಟೆ,ಮತ್ತು ಪಿಡಬ್ಲ್ಯೂಡಿ ಕಿರಿಯ ಇಂಜಿನಿಯರಿಂಗ್ ಸೂರಜ್ ಪೂಜಾರಿ, ಮಂಗಳೂರು ಪುರಸಭೆ ಸದಸ್ಯ ಜಯಪೂಜಾರಿ ಮಂಗಳೂರು, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಪೂಜಾರಿ, ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ರಂಜಿತ್ ಹೆಚ್‌ಡಿ ಇವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.
ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ವತಿಯಿಂದ ಶಾಸಕ ಹರೀಶ್ ಪೂಂಜರವರನ್ನು ಅಭಿನಂದಿಸಲಾಯಿತು.
ಸಂಘದ ಅಧ್ಯಕ್ಷ ಸಂತೋಷ್ ಪಿ ಕೊಟ್ಯಾನ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿ, ನಿರ್ದೇಶಕ ಯತೀಶ್ ವೈ ವಂದಿಸಿದರು. ಯುವ ಸಾಹಿತಿ ಚಂದ್ರಹಾಸ್ ಬಳಂಜ ಕಾರ್ಯಕ್ರಮ ನಿರೂಪಿಸಿದರು. ಸಂಘದ ನಿರ್ದೇಶಕರು ಸಹಕರಿಸಿದರು.