26.5 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ರೂ. 7 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಯಾತ್ರಿ ನಿವಾಸ: ನ. 23 ರಂದು ಯಾತ್ರಿ ನಿವಾಸದ ಶಿಲಾನ್ಯಾಸ, ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ: ಇತಿಹಾಸ ಪ್ರಸಿದ್ದ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಭಕ್ತರ ಅನುಕೂಲಕ್ಕಾಗಿ ಯಾತ್ರಿನಿವಾಸಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದ್ದು ಆ ಪ್ರಯುಕ್ತ ಆಮಂತ್ರಣ ಪತ್ರಿಕೆ ಬಿಡುಗಡೆಯು ನ. 11 ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸಭಾಭವನದಲ್ಲಿ ನಡೆಯಿತು.

ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಗೌರವಾಧ್ಯಕ್ಷ ಪೀತಾಂಬರ ಹೇರಾಜೆ ಎಲ್ಲರ ಸಹಕಾರ ಕೋರಿದರು.ಈ ಸಂದರ್ಭದಲ್ಲಿ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಸಂಜೀವ ಪೂಜಾರಿ ಬಿರ್ವ, ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಟ್ರಸ್ಟ್ ಗೌರವಾಧ್ಯಕ್ಷ ಡಾ.ರಾಜಶೇಖರ್ ಕೋಟ್ಯಾನ್,ಕ್ಷೇತ್ರಾಡಳಿತ ಸಮಿತಿ ಜೊತೆ ಕಾರ್ಯದರ್ಶಿ ಡಾ.ಸಂತೋಷ್ ಕೋಟ್ಯಾನ್,ಪ್ರಮುಖರಾದ ಪ್ರಮಲ್ ಕುಮಾರ್ ಕಾರ್ಕಳ, ಶ್ರೀ ಕ್ಷೇತ್ರ ಗೆಜ್ಜೆಗಿರಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ಬೆಳ್ತಂಗಡಿ ಶ್ರೀ ಗುರುದೇವಾ ವಿವಿಧೋದ್ದೇಶ ಸಹಕಾರಿ‌ ಸಂಘದ ಅಧ್ಯಕ್ಷ ಭಗೀರಥ ಜಿ, ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ,ಗೆಜ್ಜೆಗಿರಿ ಕ್ಷೇತ್ರದ ಪ್ರ‌.ಕಾರ್ಯದರ್ಶಿ ಡಾ.ರಾಜಾರಾಮ್ ಕೆಬಿ, ಅಭಿವೃದ್ಧಿ ಟ್ರಸ್ಟ್ ಕೋಶಾಧಿಕಾರಿ ಉಲ್ಲಾಸ್ ಕೋಟ್ಯಾನ್ ಕೆವಿ,ಮಹಿಳಾ ಬಿಲ್ಲವ ವೇದಿಕೆ ಸ್ಥಾಪಕಾದ್ಯಕ್ಷರಾದ ಸುಜಿತಾ ವಿ ಬಂಗೇರ,ಶ್ರೀ ಗುರುದೇವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಕೃಷ್ಣಪ್ಪ ಪೂಜಾರಿ,ಬೆಳ್ತಂಗಡಿ ಸಂಘದ ಕಾರ್ಯದರ್ಶಿ ನಿತೀಶ್ ಕೋಟ್ಯಾನ್,ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಎಂ.ಕೆ ಪ್ರಸಾದ್,ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ,ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಸುಮತಿ ಪ್ರಮೋದ್ ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರ ಸಮಿತಿ ಬೆಳ್ತಂಗಡಿ ಸಂಚಾಲಕ ನಿತ್ಯಾನಂದ ಎನ್ ನಾವರ ಸ್ವಾಗತಿಸಿದರು.ಬಿಲ್ಲವ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

Related posts

ಚಿರಂಜೀವಿ ಶೆಟ್ಟಿ ಮತ್ತು ತಂಡದವರಿಂದ ಒಂದೇ ದಿನದಲ್ಲಿ 20 ಗಣೇಶನ ಪ್ರತಿಷ್ಠಾಪನಾ ಸ್ಥಳಕ್ಕೆ ಭೇಟಿ, ವಿಡಿಯೋ ಚಿತ್ರೀಕರಣ

Suddi Udaya

ಡಿ.17: ಕೊಕ್ಕಡ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಂಭ್ರಮದ ಕೋರಿಜಾತ್ರೆ

Suddi Udaya

ತುಳು ಭಾಷೆಗೆ ಅಧಿಕೃತ ಭಾಷಾ ಮಾನ್ಯತೆ ಹಾಗೂ ಕನ್ಯಾಡಿ ಶ್ರೀರಾಮ ಕ್ಷೇತ್ರಕ್ಕೆ ರೂ. 1 ಕೋಟಿ ಅನುದಾನ: ರಾಜ್ಯ ಕಾಂಗ್ರೆಸ್ ಸರ್ಕಾರದ ಐತಿಹಾಸಿಕ ನಿರ್ಧಾರಗಳಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅಭಿನಂದನೆ

Suddi Udaya

ಪುಂಜಾಲಕಟ್ಟೆ ಯುವಕ ಸೈನೇಡ್ ಸೇವಿಸಿ ಆತ್ಮಹತ್ಯೆ

Suddi Udaya

ಧರ್ಮಸ್ಥಳ ಗ್ರಾಮ ಪಂಚಾಯತ್ ಗ್ರಂಥಾಲಯ ಸಲಹಾ ಸಮಿತಿಯ ಸಭೆ

Suddi Udaya

ಉಜಿರೆ: ಸ್ನೇಹ ಕಿರಣ್ ಬೇಬಿ ಸಿಟ್ಟಿಂಗ್ ಗೆ ಮರ ಬಿದ್ದು ಹಾನಿ, ಅಪಾಯದಿಂದ ಪಾರಾದ ಮಕ್ಕಳು

Suddi Udaya
error: Content is protected !!