ನಡ : ಸರಕಾರಿ ಪ್ರೌಢಶಾಲೆ ನಡ ಪ್ರಸಕ್ತ 2023-24 ನೇ ಸಾಲಿನಲ್ಲಿ ಒಟ್ಟು 138 ವಿದ್ಯಾರ್ಥಿಗಳಿರುವ ವಿದ್ಯಾಸಂಸ್ಥೆಯಲ್ಲಿ ಕರ್ನಾಟಕ ರಾಜ್ಯದಲ್ಲಿಯೇ ಗಣಿತ, ಹಿಂದಿ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳ ಪ್ರಯೋಗಶಾಲೆ ಮತ್ತು ಸ್ಮಾರ್ಟ್ ಕ್ಲಾಸ್ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ನವೀನತೆಯ ಶಿಕ್ಷಣ ನೀಡುತ್ತಿರುವ ಮಾದರಿ ಸರಕಾರಿ ಶಾಲೆಯಲ್ಲಿ ಮಾ. 9 ರಂದು ಸಾರಸ್ವತ ಲರ್ನಿಂಗ್ ಫೌಂಡೇಶನ್ USA ಕ್ಯಾಲಿಪೋರ್ನಿಯಾ ಇವರ ವತಿಯಿಂದ ಶಾಲೆಯಲ್ಲಿ ಕಲಿಯುತ್ತಿರುವ ಪ್ರತೀ ವಿದ್ಯಾರ್ಥಿಗೆ ತಲಾ ವಿದ್ಯಾರ್ಥಿ ವೇತನ 1750/ (ಸಾವಿರದ ಏಳುನೂರ ಐವತ್ತು) ರೂ ನಂತೆ ವಿತರಿಸಲಾಯಿತು. ಹಾಗೂ ಮೂವರು ಅಡುಗೆ ಸಿಬಂದಿಯವರಿಗೆ ತಲಾ 3000 ದಂತೆ ಸಹಾಯ ಧನವನ್ನು ವಿತರಿಸಲಾಯಿತು.
ನಡ ಪ್ರೌಢಶಾಲೆಯ ನಿವೃತ್ತ ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಜಾಹ್ನವಿ ಕೆ ಎಸ್ ಇವರ ಸಹೋದರರಾಗಿರುವ ಕೆ ನರೇಂದ್ರನಾಥ್, ವ್ಯವಸ್ಥಾಪಕರು ಸಾರಸ್ವತ ಲರ್ನಿಂಗ್ ಫೌಂಡೇಶನ್ ಇವರು ಸತತ 5 ವರ್ಷಗಳಿಂದ ವಿದ್ಯಾರ್ಥಿ ವೇತನ ನೀಡುತ್ತಾ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿದ್ದಾರೆ. ಈ ಸಂದರ್ಭ ಶ್ರೀಮತಿ ಜಾಹ್ನವಿ ಕೆ ಎಸ್ ನಿವೃತ್ತ ಪ್ರಥಮ ದರ್ಜೆ ಸಹಾಯಕರು, ಮುಖ್ಯ ಶಿಕ್ಷಕರಾದ ಮೋಹನ ಬಾಬು ಡಿ ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಚೆಕ್ ಮೂಲಕ ವಿದ್ಯಾರ್ಥಿ ವೇತನ ನೀಡಿದರು.
ಶಾಲೆಯ ಮುಖ್ಯ ಶಿಕ್ಷಕರಾದ ಮೋಹನ ಬಾಬು ಡಿ ಸಾರಸ್ವತ ಲರ್ನಿಂಗ್ ಫೌಂಡೇಶನ್ ಸಂಸ್ಥೆಯ ವ್ಯವಸ್ಥಾಪಕರಿಗೆ ಹಾಗೂ ಈ ವಿದ್ಯಾರ್ಥಿ ವೇತನದ ರೂವಾರಿಗಳಾದ ಶ್ರೀಮತಿ ಜಾಹ್ನವಿ ಕೆ ಎಸ್ ಧನ್ಯವಾದವಿತ್ತರು.