September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಾರಿನಲ್ಲಿ ಬಂದು ಭಾಸ್ಕರ ನಾಯ್ಕ ಹಾಗೂ ಅವರ ಪತ್ನಿಗೆ ಹಲ್ಲೆ ನಡೆಸಿದ ಆರೋಪ: ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಆರು ಮಂದಿಯ ಮೇಲೆ ಪ್ರಕರಣ ದಾಖಲು

ಬೆಳ್ತಂಗಡಿ: ಮಂಗಳೂರಿನಲ್ಲಿ ಯೂ ಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿ ಹಿಂದುರುಗುತ್ತಿದ್ದ ತನಗೆ ಹಲ್ಲೆ ನಡೆಸಿ, ಅವಾಚ್ಯಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿದರೆಂದು ಆರೋಪಿಸಿ, ಉಜಿರೆ ಗ್ರಾಮದ ಪಣೆಯಾಲು ಭಾಸ್ಕರ್ ನಾಯ್ಕ (50ವ) ಎಂಬವರು ನೀಡಿದ ದೂರಿನ ಹಿನ್ನಲೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಆರು ಮಂದಿಯ ಮೇಲೆ ಸೆ.3 ರಂದು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


ಮಂಗಳೂರಿನಲ್ಲಿ ಯೂ ಟ್ಯೂಬ್ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿ ತಾನು ವಾಪಾಸು ತನ್ನ ಮನೆಗೆ ಬರುತ್ತಾ ಸಂಜೆ ಸಮಯ ಉಜಿರೆ ಗ್ರಾಮದ ಪಾಣೆಯಾಲು ಎ೦ಬಲ್ಲಿಗೆ ತಲುಪಿದಾಗ ಆರೋಪಿಗಳು ಕಾರಿನಲ್ಲಿ ಬಂದು ಅಡ್ಡವಾಗಿ ನಿಲ್ಲಿಸಿ, ಅಕ್ರಮ ಕೂಟ ಸೇರಿಕೊಂಡ ಮಹೇಶ್ ಶೆಟ್ಟಿ ತಿಮರೋಡಿ, ಮೋಹನ್ ಶೆಟ್ಟಿ ಪಾಣಿಯಾಲು, ಮುಖೇಶ್ ಶೆಟ್ಟಿ, ಪ್ರಜ್ವಲ್ ವಿ. ಗೌಡ, ನೀತು ಶೆಟ್ಟಿ ಪಾಣಿಯಾಲು, ಮತ್ತು ಪ್ರಮೋದ್ ಶೆಟ್ಟಿ ಇತರರು ನನಗೆ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿ, ನನ್ನನ್ನು ಲೈಟ್ ಕಂಬಕ್ಕೆ ಕಟ್ಟಿ ಹಾಕಿ ಕಲ್ಲಿನಿಂದ ಹಲ್ಲೆ ನಡೆಸಿದಾಗ, ನಾನು ಜೋರಾಗಿ ಬೊಬ್ಬೆ ಹೊಡೆದಿದ್ದು, ಹತ್ತಿರ ಮನೆಯಲಿದ್ದ ನನ್ನ ಪತ್ನಿ ಮಮತಾ ಓಡಿ ಬಂದಾಗ, ಪ್ರಮೋದ್ ಶೆಟ್ಟಿ ಎಂಬಾತ ಅವಳಿಗೂ ಕಲ್ಲಿನಿಂದ ಹೊಡೆದರು ಆಗ ಇಬ್ಬರೂ ಜೋರಾಗಿ ಬೊಬ್ಬೆ ಹೊಡೆಯುತ್ತಿದ್ದಾಗ ಅಲ್ಲಿಯೇ ಬರುತ್ತಿದ್ದ ಪರಿಚಯದ ಜಯಪ್ರಕಾಶ್ ಶೆಟ್ಟಿ, ಶಂಕರ ಶೆಟ್ಟಿ ತಿಮರೋಡಿ, ಸುರೇಶ್ ನಾಯ್ಕ ಮತ್ತು ಇತರರನ್ನು ನೋಡಿ ಆರೋಪಿಗಳು ಹಲ್ಲೆಗೆ ಬಳಸಿದ ಕಲ್ಲನ್ನು ಸ್ಥಳದಲ್ಲಿ ಬಿಸಾಡಿ, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಭಾಸ್ಕರ ನಾಯ್ಕ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.


ಭಾಸ್ಕರ್ ನಾಯ್ಕ ಅವರು ಆಸ್ಪತ್ರೆಗೆ ದಾಖಲಾಗಿ ಈ ದೂರನ್ನು ನೀಡಿದ್ದಾರೆ. ಯೂ ಟ್ಯೂಬ್ ಚಾನಲ್‌ನಲ್ಲಿ, ಸಂದರ್ಶನ ನೀಡಿದ ಕಾರಣಕ್ಕೆ ಆರೋಪಿಗಳು ಈ ಕೃತ್ಯ ಎಸಗಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಮಚ್ಚಿನ ಸರಕಾರಿ ಪ್ರೌಢ ಶಾಲಾ ಪ್ರಾರಂಭೋತ್ಸವ

Suddi Udaya

ವೇಣೂರು ವಿಪ್ರ ಬ್ರಾಹ್ಮಣ ಸಮಾಜ ಹಾಗೂ ಪಡಂಗಡಿ ಗ್ರಾ.ಪಂ. ವತಿಯಿಂದ ಶಾಸಕ ಹರೀಶ್ ಪೂಂಜರಿಗೆ ಗೌರವಾರ್ಪಣೆ

Suddi Udaya

ಉಜಿರೆ: ಅನಾರೋಗ್ಯದಿಂದ ಬಳಲುತ್ತಿರುವ ರಕ್ಷಿತ್ ರಾಜ್ ರವರ ಚಿಕಿತ್ಸೆಗೆ ಕರಿಗಂಧ ಸೇವಾ ಟ್ರಸ್ಟ್ ನಿಂದ ಧನಸಹಾಯ

Suddi Udaya

ಮಡಂತ್ಯಾರು ರೋಟರಿ ಕ್ಲಬ್ ವತಿಯಿಂದ ಪದಗ್ರಹಣ ಸಮಾರಂಭ

Suddi Udaya

ಕುವೆಟ್ಟು: ಚರಂಡಿ ವ್ಯವಸ್ಥೆ ದುರಸ್ತಿಗೊಳಿಸಿ, ಕಾಮಗಾರಿ ಪ್ರಾರಂಭ ಮಾಡುವಂತೆ ಕುವೆಟ್ಟು ಗ್ರಾ.ಪಂ. ಅಧ್ಯಕ್ಷೆ ಹಾಗೂ ಪಿಡಿಒ ರವರಿಗೆ ಮನವಿ

Suddi Udaya

ರಾಷ್ಟ್ರಮಟ್ಟದ ಸಾಂಸ್ಕೃತಿಕ ಸ್ಪರ್ಧೆ‌’ಸುವರ್ಣ ಸಿರಿ 2025′: ಮುಂಡೂರು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘಕ್ಕೆ ಪ್ರಶಸ್ತಿ.

Suddi Udaya
error: Content is protected !!