24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಲ್ಮಂಜ: ಬೈಕ್ ಹಾಗೂ ಕಾರು ಡಿಕ್ಕಿ: ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಕಲ್ಮಂಜ: ಕಲ್ಮಂಜ ಸರಕಾರಿ ಪ್ರಾಥಮಿಕ ಶಾಲೆಯ ಬಳಿ ಮೋಟಾರು ಸೈಕಲ್ ಹಾಗೂ ಕಾರು ಡಿಕ್ಕಿ ಯಾದ ಘಟನೆ ಮಾ.8ರಂದು ನಡೆದಿದೆ.

ತವಂದಿ ಗ್ರಾಮ ಸೂರಗೊಂಡನಹಳ್ಳಿ ಹಿರಿಯೂರು ನಿವಾಸಿ ಚಿದಾನಂದಯ್ಯ (51ವ.) ಎಂಬವರ ದೂರಿನಂತೆ, ಮಾ.08 ರಂದು ಬೆಳಿಗ್ಗೆ ಬೆಳ್ತಂಗಡಿ ತಾಲೂಕು ಕಲ್ಮಂಜ ಗ್ರಾಮದ ಕಲ್ಮಂಜ ಸರಕಾರಿ ಪ್ರಾಥಮಿಕ ಶಾಲೆಯ ಬಳಿ, ಚಿದಾನಂದಯ್ಯ ರವರು ತನ್ನ ಬಾಬ್ತು ಕೆಎ16ಬಿ8176ನೇ ಮೋಟಾರು ಸೈಕಲನ್ನು ಉಜಿರೆ ಕಡೆಯಿಂದ ಚಾರ್ಮಾಡಿ ಕಡೆಗೆ ಹೋಗುತ್ತಿದ್ದಾಗ, ಕೆಎ08ಎಂ5139ನೇ ಕಾರನ್ನು ಅದರ ಚಾಲಕ ಸೋಮೇಶ್‌ ಎಂಬವರು ದುಡುಕುತನದಿಂದ ಚಲಾಯಿಸಿ ಕೊಂಡು ಬಂದು, ಚಿದಾನಂದಯ್ಯರವರ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ, ಚಿದಾನಂದಯ್ಯ ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದು ಬಲಕಾಲಿಗೆ ಗುದ್ದಿದ ಗಾಯವುಂಟಾಗಿ, ಉಜಿರೆ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 27/2024 ಕಲಂ: 279,337 ಭಾ.ದಂ.ಸಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಕುರಾಯ ಶ್ರೀ ಸದಾಶಿವ ದೇವಸ್ಥಾನದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಿಲಾನ್ಯಾಸ ನೆರವೇರಿಸಿದ ಶಾಸಕ ಹರೀಶ್ ಪೂಂಜ

Suddi Udaya

ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್‌ಗೂ, ಸೌತಡ್ಕ ದೇವಸ್ಥಾನಕ್ಕೂ ಯಾವುದೇ ಸಂಬಂಧ ಇಲ್ಲ

Suddi Udaya

ಎಕ್ಸೆಲ್ ಗೆ ಎಸ್ ಡಿ ಎಂ ನ ಎಕ್ಸ್ ಪಿರಿಯ ವಿಜ್ಞಾನ ಮೇಳದಲ್ಲಿ ಚಾಂಪಿಯನ್ ಶಿಪ್

Suddi Udaya

ಎಸ್ ಡಿ ಎಂ ಕಾಲೇಜು ಬಿ.ವೋಕ್ ವಿಭಾಗದ ವಿದ್ಯಾರ್ಥಿಗಳಿಗೆ ಹೈಪರ್ ಲೋಕಲ್ ನ್ಯೂಸ್ ಮೀಡಿಯಾದ ಮಾಹಿತಿ ಕಾರ್ಯಗಾರ

Suddi Udaya

ಬೆಳ್ತಂಗಡಿ ಗ್ರಾಹಕರ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಮಹಾವೀರ ಅರಿಗ, ಉಪಾಧ್ಯಕ್ಷರಾಗಿ ತುಕಾರಾಮ್ ಬಿ.

Suddi Udaya

ಅ.18 ರಂದು ನಡೆಯಲಿರುವ ರಾಜ್ಯಸಭಾ ಸದಸ್ಯ ಡಾ. ನಾಸಿರ್ ಹುಸೈನ್, ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಸಲೀಮ್ ಅಹಮ್ಮದ್ ರವರಿಗೆ ಅಭಿನಂದನಾ ಸಮಾರಂಭ ಹಾಗೂ ಅಲ್ಪಸಂಖ್ಯಾತರ ಸಮಾವೇಶ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಹಾಗೂ ಸಚಿವರುಗಳಿಗೆ ಆಹ್ವಾನ

Suddi Udaya
error: Content is protected !!