ಬಂಗಾಡಿ :ಕೊಲ್ಲಿ ಇಲ್ಲಿಯ 26ನೇ ವರ್ಷದ ಹೊನಲು ಬೆಳಕಿನ ಸೂರ್ಯ – ಚಂದ್ರ ಜೋಡುಕರೆ ಬಯಲು ಕಂಬಳದ ಉದ್ಘಾಟನೆಯು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿವಿಧ ಸಂಘ – ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಹಾಗೂ ಯುವ ನಾಯಕ ರಂಜನ್ ಜಿ. ಗೌಡ ರವರ ಸಾರಥ್ಯದಲ್ಲಿ ಮಾ.9ರಂದು ಬಂಗಾಡಿ ಕೊಲ್ಲಿಯ ನೇತ್ರಾವತಿ ನದಿ ಕಿನಾರೆಯ ವಿಶಾಲ ಪ್ರದೇಶದ ಕಂಬಳ ಕ್ರೀಡಾಂಗಣದಲ್ಲಿ ನಡೆಯಿತು.
ಕಂಬಳದ ಉದ್ಘಾಟನೆಯನ್ನು ಬಂಗಾಡಿ ಅರಮನೆಯ ಯಶೋಧರ ಬಳ್ಳಾಲ್ ನೆರವೇರಿಸಿ ಶುಭ ಕೋರಿದರು.
ತುಳುನಾಡಿನ ಅತ್ಯಂತ ಶ್ರೀಮಂತ ಜಾನಪದ ಕ್ರೀಡೆ ಕಂಬಳ: ರಂಜನ್ ಜಿ ಗೌಡ
ಕಂಬಳ ತುಳುನಾಡಿನ ಅತ್ಯಂತ ಶ್ರೀಮಂತ ಜಾನಪದ ಕ್ರೀಡೆ. ಇತ್ತೀಚಿನ ಕೆಲ ವರ್ಷಗಳಲ್ಲಂತೂ ಕರಾವಳಿಯ ಗಡಿಯನ್ನೂ ಮೀರಿ ದೇಶ ವಿದೇಶಗಳಲ್ಲೂ ಕಂಬಳ ತನ್ನ ಪ್ರಖ್ಯಾತಿಯ ಮೂಲಕ ಸದ್ದು ಮಾಡುತ್ತಿದೆ.ಕಂಬಳಕ್ಕೆ ಸುಮಾರು 8 ಶತಮಾನಗಳ ಇತಿಹಾಸವಿದೆ.ಕೊಲ್ಲಿ ಕಂಬಳವು ಹಲವಾರು ವಿಶೇಷತೆಗಳಿಗೆ ಸಾಕ್ಷಿಯಾಗಿದೆ.ವಿವಿಧ ಕ್ಷೇತ್ರದ ಹಲವಾರು ಸಾಧಕರನ್ನು ಗುರುತಿಸುತ್ತಿದ್ದೇವೆ.ಹೊನಲು ಬೆಳಕಿನ ಜೊಡುಕರೆ ಕಂಬಳಕ್ಕೆ ಇಗಾಗಲೇ ಹಲವಾರು ಕಂಬಳ ಕೋಣಗಳು ಆಗಮಿಸಿದ್ದು ನೂರೈವತ್ತುಕ್ಕೂ ಮಿಕ್ಕಿ ಕಂಬಳ ಕೋಣಗಳು ಬರುವ ನಿರೀಕ್ಷೆಯಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ರಂಜನ್ ಜಿ.ಗೌಡ ಹೇಳಿದರು.
ಸಭಾಧ್ಯಕ್ಷತೆಯನ್ನು ಕಾಜೂರು ಆರ್.ಜೆ.ಎಂ ಉಪಾಧ್ಯಕ್ಷ ಬಬ್ರುದ್ದೀನ್ ವಹಿಸಿದ್ದರು.
ವೇದಿಕೆಯಲ್ಲಿ ಮಾಜಿ ತಾ.ಪಂ ಅಧ್ಯಕ್ಷ ಮುಕುಂದ ಸುವರ್ಣ, ಕಾಳಬೈರವೇಶ್ವರ ಒಕ್ಕಲಿಗ ಗೌಡರ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಗೌಡ ಕಲ್ಲಾಜೆ, ಉಜಿರೆ ದಯಾಕರ್, ಕಂಬಳ ಸಮಿತಿ ಯ ಬಿ.ಮಧುಕರ ಸುವರ್ಣ, ಭರತ್ ಕುಮಾರ್, ಕಿಶೋರ್ ವಳಂಬ್ರ, ನೇಮಿರಾಜ ಕಿಲ್ಲೂರು,ಖಾಸಿಂ ಮಲ್ಲಿಗೆ ಮನೆ,ಸೀತರಾಮ ಆರ್ತಾಜೆ,ವಿನಯ ಪಡೆಂಕಲ್ಲು,ರವಿ ಆರ್ತಾಜೆ, ಆನಂದ ಮೈರ್ನೋಡಿ,ಸುಧೀಶ್ ಕುಮಾರ್ ಆರಿಗ ಬಂಗಾಡಿ,ತುಂಗಪ್ಪ ಪೂಜಾರಿ ಹಾಗೂ ಕಂಬಳ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ಪ್ರಧಾನ ಆರ್ಚಕರು ಆಗಮಿಸಿ ಕಂಬಳ ಕರೆಯ ವೈದಿಕ ವಿಧಾನ ಪೂರೈಸಿದರು.
ಕಿಶೋರ್ ಕುಮಾರ್ ವಳಂಬ್ರ ಸ್ವಾತಿಸಿದರು, ಭರತ್ ಕುಮಾರ್ ವಂದಿಸಿದರು.
ಸಂಜೆ ನಡೆಯುವ ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಮಾಜಿ ಸಚಿವರಾದ ಕೆ. ಗಂಗಾಧರ ಗೌಡ ವಹಿಸಲಿದ್ದಾರೆ. ಹಾಗೂ ಅತಿಥಿಗಳಾಗಿ ರಾಜಕೀಯ ನಾಯಕರು, ವಿವಿಧ ಕ್ಷೇತ್ರದ ಗಣ್ಯರು, ಕಲಾ ಪ್ರೋತ್ಸಾಹಿಗಳು ಭಾಗವಹಿಸಲಿದ್ದಾರೆ.
ಈ ಬಾರಿಯ ಕಂಬಳದಲ್ಲಿ ವಿಶೇಷವಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಾರ್ಮಾಡಿ ಹಸನಬ್ಬ, ಪ್ರಗತಿಪರ ಕೃಷಿಕ ದೇವರಾಯ ರಾವ್, ಸಮಾಜ ಸೇವಕ ರಾಮಚಂದ್ರ ಶೆಟ್ಟಿ ಇವರಿಗೆ ಗುರುತಿಸುವಿಕೆ ಕಾರ್ಯಕ್ರಮ ನಡೆಯಲಿದೆ.