27.5 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನ್ಯಾಯತರ್ಪು ಪ್ರದೇಶದಲ್ಲಿ ಒಂಟಿ ಸಲಗ ಓಡಾಟ ತೋಟಕ್ಕೆ ನುಗ್ಗಿ ಕೃಷಿಗೆ ಹಾನಿ

ಬೆಳ್ತಂಗಡಿ : ನ್ಯಾಯತರ್ಪು ಗ್ರಾಮದ ಕೇಲ್ದಡ್ಕ, ಒಂಜಾರೆ ಮುದ್ದುಂಜ,ಹಾಕೋಟೆ, ಕಲಾಯಿತೊಟ್ಟು,ಕಜೆ, ಕೆಳಗಿನಬೆಟ್ಟು ಮತ್ತು ನಾಳ ಸಮೀಪದ ಪಾಂಡಿಬೆಟ್ಟು ಗ್ರಾಮಸ್ಥರ ಕೃಷಿ ತೋಟಕ್ಕೆ ತಡರಾತ್ರಿ ನುಗ್ಗಿದ ಒಂಟಿಸಲಗದಿಂದ ಬಾಳೆ ಕೃಷಿ ನಾಶವಾಗಿದೆ.

ಗ್ರಾಮಸ್ಥರು ತಡ ರಾತ್ರಿ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು. ತಕ್ಷಣ ರಾತ್ರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಸ್ಥಳೀಯ ಕೃಷಿಕರ ಜೊತೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಹುಡುಕಾಟ ನಡೆಸಿದರೂ ಸುಳಿವು ಸಿಗಲಿಲ್ಲ. ಕೇಲ್ದಡ್ಕ ಉಮೇಶ್ ರವರ ಮನೆ ದನದ ಹಟ್ಟಿಯ ಪಕ್ಕದಲ್ಲಿ ಆನೆ ಬರುವುದನ್ನು ಗಮನಿಸಿದ ಸಾಕು ನಾಯಿ ಕೂಗಿದಾಗ ಒಂಟಿ ಸಲಗ ಗೀಳು (ಕೂಗು) ಶಬ್ದವು ಸಿಸಿ ಕ್ಯಾಮರಾದಲ್ಲಿ ಸೆರೆ ಯಾಗಿದೆ. ಹಾಗೂ ಸ್ವಲ್ಪ ಸಮಯದ ನಂತರ ಪಕ್ಕದ ಮನೆ ನಿವಾಸಿ ರಮಾನಂದ ಪೂಜಾರಿಯವರ ಮನೆಯಂಗಳದಲ್ಲಿ ಕಾಣಿಸಿಕೊಂಡಿದ್ದು,ವಸಂತ ಕುಮಾರ್ ಮತ್ತು ಜನಾರ್ದನ ಪೂಜಾರಿ ಯವರ ತೋಟದಲ್ಲಿ ಬಾಳೆ ಗಿಡಗಳನ್ನು ನಾಶಪಡಿಸಿರುವುದು ಕಂಡುಬರುತ್ತದೆ.ಕಲಾಯಿತೊಟ್ಟು ಗಿರಿಯಪ್ಪ ಗೌಡರ ಮನೆ ಅಂಗಳ ಪಕ್ಕದಲ್ಲಿ ಕಾಣಿಸಿಕೊಂಡು ನಂತರ ಕಜೆ ಕೆಳಗಿನ ಬೆಟ್ಟು ಶ್ರೀಧರ ಪೂಜಾರಿ ಯವರ ಮನೆ ದೈವದ ಕಟ್ಟೆ ಪಕ್ಕದಲ್ಲಿರುವ ಕಬ್ಬು ಗಿಡಗಳನ್ನು ತಿಂದು ಹಾಳು ಕೆಡವಿದೆ. ಹಾಗೂ ನಸುಕಿನಲ್ಲಿ ಪಾಂಡಿಬೆಟ್ಟು ವಿಠ್ಠಲ ಗೌಡರ ತೋಟದ ಬಾಳೆ ಗಿಡಗಳನ್ನು ಮುರಿದು ಹಾಕಿದ ದೃಶ್ಯ ಕಾಣಸಿಗುತ್ತವೆ ಎಂದು ಕೃಷಿಕರು ಹೇಳಿದ್ದರು. ಹಾಗೂ ರಾತ್ರಿ ವೇಳೆಯಲ್ಲಿ ಕೃಷಿಗೆ ನೀರು ಹಾಯಿಸಲು ತೋಟಕ್ಕೆ ಹೋಗಲು ಭಯ ಬೀತರಾಗಿದ್ದು ನೊಂದ ಕೃಷಿಕರ ನಿದ್ದೆ ಗೆಡಿಸಿದೆ.

ಈ ಸಂದರ್ಭದಲ್ಲಿ ಬೆಳ್ತಂಗಡಿ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಮಡಂತ್ಯಾರು ಉಪವಲಯ ಅರಣ್ಯಾಧಿಕಾರಿ ರಾಜಶೇಖರ, ಗಸ್ತು ಅರಣ್ಯ ರಕ್ಷಕರಾದ ಸತೀಶ್ ಮತ್ತು ಅಕಿಲೇಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕೃಷಿಕರಿಗೆ ತೊಂದರೆಯಾಗದಂತೆ ನೀಗ ವಹಿಸಿದರು. ಕೊಯ್ಯೂರು ಗ್ರಾಮದಲ್ಲಿ ಕಳೆದ 2 ದಿನಗಳಿಂದ ಕೊಯ್ಯೂರು ಪರಿಸರದಲ್ಲಿ ರಾತ್ರಿ 2 ಆನೆಗಳು ಕೃಷಿ ತೋಟಕ್ಕೆ ನುಗ್ಗಿ ದಾಂಧಲೆ ಮಾಡಿದ ಬಗ್ಗೆ ಕೃಷಿಕರು ಅತಂಕದಲ್ಲಿದ್ದಾರೆ.

Related posts

ಬಡಗಕಾರಂದೂರು ಸ.ಉ.ಹಿ.ಪ್ರಾ. ಶಾಲೆಯಲ್ಲಿ “ಹದಿಹರೆಯ ಮತ್ತು ಆರೋಗ್ಯ” ಕಾರ್ಯಕ್ರಮ

Suddi Udaya

ಅಗ್ನಿಪಥ ಯೋಜನೆಯಡಿಯಲ್ಲಿ ಭಾರತೀಯ ಸೇನೆಗೆ ಲಾಯಿಲದ ಬಿ. ಅನಂತ್ ಪೈ ಆಯ್ಕೆ

Suddi Udaya

ಪುತ್ತೂರಿನ ಸಹಾಯಕ ಆಯುಕ್ತರಾಗಿದ್ದ ಜುಬಿನ್ ಮೊಹಾಪತ್ರ ರವರು ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನಕ್ಕೆ ಹಾಗೂ ಗುರುವಾಯನಕರೆ ನವಶಕ್ತಿ ಮನೆಗೆ ಭೇಟಿ

Suddi Udaya

ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಥಮ ದರ್ಜೆ ಸಹಾಯಕ ಸುರೇಶ್ ಪೂಜಾರಿ ಸೇವೆಯಿಂದ ನಿವೃತ್ತಿ

Suddi Udaya

ಅಂಡಿಂಜೆ : ಮಜಲಡ್ಡ ನಿವಾಸಿ ನೋಣಯ್ಯ ಪೂಜಾರಿ ನಿಧನ

Suddi Udaya

ಆ. 27: ಬೆಳ್ತಂಗಡಿ ಎಸ್‌ಸಿಡಿಸಿಸಿ ಬ್ಯಾಂಕ್ ಬೆಳ್ತಂಗಡಿ ಶಾಖಾ ಕಟ್ಟಡದಲ್ಲಿ ಹೊಸ ಎಟಿಎಂ ಉದ್ಘಾಟನೆ ಹಾಗೂ ನೂತನ ಲಿಪ್ಟ್ ಉದ್ಘಾಟನಾ ಕಾರ್ಯಕ್ರಮ

Suddi Udaya
error: Content is protected !!