24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲ ಮೂಲ್ಕಿ ಇದರ ಬೆಳ್ಳಿಹಬ್ಬ ಸಂಭ್ರಮ

ಬೆಳ್ತಂಗಡಿ: ತುಳುನಾಡಿನ ವೀರಪುರುಷರ ಆದರ್ಶ, ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಚಿಂತನೆಗಳನ್ನು ಅಳವಡಿಸಿಕೊಂಡು ಜಯ ಸಿ ಸುವರ್ಣ ರವರ ಮುಂದಾಳತ್ವದಲ್ಲಿ 275 ಬಿಲ್ಲವ ಸಂಘಗಳ ಸದಸ್ಯತ್ವದೊಂದಿಗೆ ಸ್ಥಾಪಿತವಾದ ಮಹಾಮಂಡಲವು ಎಲ್ಲರ ಸಹಕಾರದಿಂದ ಸಾಕಷ್ಟು ಯಶಸ್ಸನ್ನು ಸಾಧಿಸಿ 25 ವರ್ಷಗಳನ್ನು ಪೂರೈಸಿದೆ. ಸಮಾಜದ ಅಭಿವೃದ್ಧಿಯ ಚಿಂತನೆಗಳನ್ನು ಮೈಗೂಡಿಸಿಕೊಂಡು ಮಹಾಮಂಡಲದ ಚುಕ್ಕಾಣಿಯನ್ನು ಹಿಡಿದಿರುವ ಡಾ| ರಾಜಶೇಖರ್ ಕೋಟ್ಯಾನ್ ಇವರ ಸಾರಥ್ಯದಲ್ಲಿ ಮಾ. 10 ರಂದು ಮೂಲ್ಕಿಯಲ್ಲಿ ಬೆಳ್ಳಿಹಬ್ಬ ಸಮಾರಂಭ ಉದ್ಘಾಟನೆ ಗೊಂಡಿತು.

ಸಮಾರಂಭದ ಉದ್ಘಾಟನೆಯನ್ನು ವಿಧಾನ‌ಪರಿಷತ್ ಶಾಸಕ ಬಿ.ಕೆ ಹರಿಪ್ರಸಾದ್ ನೆರವೇರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಬಿಲ್ಲವರ ಮಹಾಂಮಡಲದ ಅಧ್ಯಕ್ಷ ಡಾ.ರಾಜ್ ಶೇಖರ್ ಕೋಟ್ಯಾನ್ ವಹಿಸಿದ್ದರು.ಬಿಲ್ಲವರ ಅಭಿವೃದ್ಧಿ ನಿಗಮ ಸ್ಥಾಪನೆ, ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರು,ನಾರಾಯಣ ಗುರುಗಳ ಅಧ್ಯಯನ ಪೀಠಕ್ಕೆ ಅನುದಾನ ಬಿಡುಗಡೆಗೆ ಸರಕಾರಕ್ಕೆ ಹಕ್ಕೊತ್ತಾಯ ಮಂಡನೆ ಮಾಡಲಾಯಿತು.ವೇದಿಕೆಯಲ್ಲಿ ಸೋಲೂರು ಮಠದ ವಿಖ್ಯಾತನಂದ ಸ್ವಾಮೀಜಿ,ಶಿವಗಿರಿ ಮಠದ ಸತ್ಯಾನಂದ ತೀರ್ಥ ಸ್ವಾಮೀಜಿ,ಅರುಣಾಮದ ಸ್ವಾಮೀಜಿ, ಮಹಾಬಲೇಶ್ವರ ಸ್ವಾಮೀಜಿ,ಖ್ಯಾತ ಚಿತ್ರ ನಟರಾದ ಸುಮನ್ ತಲ್ವಾರ್, ಜಯಮಾಲ,ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಕೋಟ ಶ್ರೀನಿವಾಸ್ ಪೂಜಾರಿ,ಶಾಸಕರಾದ ಸುನೀಲ್ ಕುಮಾರ್ ಕಾರ್ಕಳ,ಉಮಾನಾಥ ಕೋಟ್ಯಾನ್,ಮಾಜಿ‌ ಸಚಿವ ವಿನಯ ಕುಮಾರ್ ಸೊರಕೆ,ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಅಧ್ಯಕ್ಷ ಪೀತಾಂಬರ ಹೆರಾಜೆ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಉಪಾಧ್ಯಕ್ಷ ಯೋಗೀಶ್ ಕುಮಾರ್ ನಡಕ್ಕರ,ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್,ಕಂಕನಾಡಿ ಗರಡಿಯ ಚಿತ್ತರಂಜನ್ ಕಂಕನಾಡಿ,ನವೀನ್ ಚಂದ್ರ ಸುವರ್ಣ,ಸೂರ್ಯಕಾಂತ್,ನಟ ನವೀನ್ ಡಿ ಪಡಿಲ್ ಹಾಗೂ ವಿವಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು.ಹೊರ ರಾಜ್ಯ, ಹೊರ ದೇಶಗಳಲ್ಲಿ ಸಂಘಟಣೆಯಲ್ಲಿ ತೊಡಗಿರುವ ಬಿಲ್ಲವ ಸಂಘಗಳಿಗೆ ಪ್ರಶಸ್ತಿ ಪ್ರದಾನ, ಸಮಾಜದ ಆಯ್ದ ಚಲನಚಿತ್ರ ಕಲಾಕಾರರಿಗೆ ಪ್ರಶಸ್ತಿ ಪ್ರದಾನ, ಸ್ಥಾಪಕ ಸದಸ್ಯರಿಗೆ ಸನ್ಮಾನ, ಆಯ್ದ ವಿಶೇಷ ಚೇತನ ಮಕ್ಕಳ ಅಭಿವೃದ್ಧಿ ಸಂಸ್ಥೆಗಳಿಗೆ ಸಹಾಯ ಧನ, ಸಮಾಜದ ಬಡವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಯಿತು.

ಕರ್ನಾಟಕದ ರಾಜ್ಯ ಸಚಿವರು, ಶಾಸಕರು, ಮಾಜಿ ಶಾಸಕರು ಸಮಾಜದ ಸ್ವಾಮೀಜಿಯವರು ಹಾಗೂ ಇತರ ಗಣ್ಯ ವ್ಯಕ್ತಿಗಳು ಮತ್ತು ದೇಶದ ಮೂಲೆ ಮೂಲೆಗಳಿಂದ ಸುಮಾರು 25,000 ಕ್ಕೂ ಮೇಲ್ಪಟ್ಟು ಸಮಾಜದ ಬಂಧುಗಳು ಸೇರಿದ್ದರು.ಬೆಳ್ತಂಗಡಿಯಿಂದ ಸುಮಾರು 5 ಸಾವಿರ ಮಂದಿ ಭಾಗವಹಿಸಿದರು.

Related posts

ಬೆಳ್ತಂಗಡಿ ತಹಶೀಲ್ದಾರ ಯಾಗಿ ಸುರೇಶ್ ಕುಮಾರ್ ಟಿ ಎಸ್ ನೇಮಕ

Suddi Udaya

ಕಳೆಂಜ: ಕೃಷಿಕ ಪೆರ್ನು ಗೌಡ ನಿಧನ

Suddi Udaya

ಪಾದಾಯಾತ್ರಿಗಳಿಗೆ ಕಲ್ಮಂಜದ ಮದಿಮಾಲಕಟ್ಟೆಯ ಜಾನಕಿ ಮತ್ತು ಮಕ್ಕಳಿಂದ ಅನ್ನದಾನ ಸೇವೆ

Suddi Udaya

ಗಾಳಿ ಮಳೆ: ಕೃಷಿ ಸೋತ್ತುಗಳಿಗೆ ಹಾನಿ : ತಡೆಗೋಡೆ‌ ಕುಸಿತ

Suddi Udaya

ಕನ್ನಡ, ತುಳು ಸಾರಸ್ವತ ಲೋಕದ ಖ್ಯಾತ ಸಾಹಿತಿ, ಯಕ್ಷಗಾನ ಪ್ರಸಂಗಕರ್ತರಾಗಿ ಪ್ರಸಿದ್ಧರಾಗಿದ್ದ ಡಾ. ಅಮೃತ ಸೋಮೇಶ್ವರ ರವರ ನಿಧನಕ್ಕೆ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

Suddi Udaya

ಕಳಿಯ ಗ್ರಾಮ ಸಾಮಾಜಿಕ ಲೆಕ್ಕ ಪರಿಶೋಧನೆ ಸಭೆ

Suddi Udaya
error: Content is protected !!