22.8 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪ್ರೋ| ನಾ ವುಜಿರೆ ನಿಧನಕ್ಕೆ ಬೆಳ್ತಂಗಡಿ ಜೈನ್ ಮಿಲನ್ ವತಿಯಿಂದ ಸಂತಾಪ

ಉಜಿರೆ: ಪ್ರೊ. ಎನ್. ನಾಗರಾಜ ಪೂವಣಿ (ನಾ.ವುಜಿರೆ) ಯವರು ಬೆಳ್ತಂಗಡಿ ಜೈನ್ ಮಿಲನ್ ಅಧ್ಯಕ್ಷರಾಗಿ
ಸೇವೆ ಸಲ್ಲಿಸಿದ್ದರು. ತುಳು, ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಇವರು
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.
ಇವರು ಕಥೆ, ಕಾವ್ಯ, ಅನುವಾದ ಕ್ಷೇತ್ರಗಳಲ್ಲಿ ಹಾಗೂ ಕಾರ್ಯಕ್ರಮ ನಿರೂಪಕರಾಗಿ, ವೈಚಾರಿಕ
ಬರಹಗಳ ಮೂಲಕವೂ ಗುರುತಿಸಿಕೊಂಡವರು. ಕರ್ನಾಟಕ ಸಾಹಿತ್ಯ ಅಕಾಡಮಿಯ ಪುರಸ್ಕಾರ, ದ.ಕ.
ಜಿಲ್ಲಾ ರಾಜೋತ್ಸವ ಪ್ರಶಸ್ತಿ, ರತ್ನಾಕರವರ್ಣಿ ಪ್ರಶಸ್ತಿ ಇದೇ ಮೊದಲಾದ ಹತ್ತು ಹಲವು ಪ್ರಶಸ್ತಿಗಳಿಂದ
ಪುರಸ್ಕೃತಗೊಂಡಿದ್ದರು.

ಇವರ ಅಗಲುವಿಕೆಯಿಂದ ಸಮಾಜಕ್ಕೆ ಅಪಾರ ನಷ್ಟವಾಗಿದೆ. ಬೆಳ್ತಂಗಡಿ ಜೈನ ಮಿಲನ್‌ನ ಅಧ್ಯಕ್ಷರು ಮತ್ತು ಸರ್ವ ಸದಸ್ಯರ ಪರವಾಗಿ ನಿರ್ದೇಶಕ ಬಿ. ಸೋಮಶೇಖರ ಶೆಟ್ಟಿಯವರು ಅಗಲಿದ ಆತ್ಮಕ್ಕೆ ಶಾಂತಿಯನ್ನು ಬಯಸಿ ತಮ್ಮ ಸಂತಾಪದ ನುಡಿಯನ್ನು ತಿಳಿಸಿರುವರು.

Related posts

ಅಳದಂಗಡಿ: ಆಯಾನ್ಸ್ ಮೊಬೈಲ್ ಮಾಲಕ ಅರಿಹಂತ್ ಜೈನ್ ರವರ ಪತ್ನಿ ಪಲ್ಲವಿ ಜೈನ್ ನಿಧನ

Suddi Udaya

ಉಜಿರೆ: ದ.ಕ.ಜಿ.ಪ.ಕಿ ಪ್ರಾ ಜನಾರ್ಧನ ಶಾಲೆಯಲ್ಲಿ ಪರಿಸರ ಕಾರ್ಯಕ್ರಮ, ಹಣ್ಣಿನ ಗಿಡ ನಾಟಿ

Suddi Udaya

ಗುರುವಾಯನಕೆರೆಯಲ್ಲಿ ಸಂಭ್ರಮದ ಬಂಟೋತ್ಸವ

Suddi Udaya

ಗೋಕರ್ಣನಾಥ ಕೋ ಅಪರೇಟಿವ್ ಬ್ಯಾಂಕ್ ಚುನಾವಣೆ: ಯುವವಾಹಿನಿ ಕೇಂದ್ರ ಸಮಿತಿ ನಿಕಟಪೂರ್ವಾಧ್ಯಕ್ಷ ಬಳಂಜ ಬೈಲಬರಿ ಹರೀಶ್ ಕೆ ಪೂಜಾರಿಯವರಿಗೆ ಗೆಲುವು

Suddi Udaya

ಬೆಳ್ತಂಗಡಿ ಸ್ಥಾಯಿ ಸಮಿತಿಯ ಅಧ್ಯಕ್ಷ ಶರತ್ ಕುಮಾರ್ ರವರ ಮನೆಗೆ ಸಂಸದ ಕ್ಯಾ| ಬ್ರಿಜೇಶ್ ಚೌಟ ಭೇಟಿ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ವತಿಯಿಂದ ಡಾ.ವೀಣಾ ಬನ್ನಂಜೆಯವರಿಗೆ ಗೌರವಾರ್ಪಣೆ

Suddi Udaya
error: Content is protected !!