
ಕಣಿಯೂರು: ಇಲ್ಲಿಯ ಅಲೆಕ್ಕಿ, ಕುಕ್ಕುಂಜಾ, ಕುರಿಯಾಡಿ ಹಾಗೂ ಪದ್ಮುಂಜ ಕ್ವಾಟ್ರಾಸ್ ಬಳಿ ತಡರಾತ್ರಿ ಆನೆ ದಾಳಿ ಮಾಡಿದ್ದು ಬಾಳೆ ಕೃಷಿಗೆ ಹಾನಿ ಉಂಟುಮಾಡಿದೆ.

ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಕೂಡಲೇ ಸ್ಥಳಕ್ಕೆ ಬಂದ ಅಧಿಕಾರಿಗಳು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದರು. ಎತ್ತ ಕಡೆ ಹೋಗಿದೆ ಅನ್ನುವ ಮಾಹಿತಿ ಲಭ್ಯವಾಗಿಲ್ಲ.

ನಾರಾಯಣ ಗೌಡ ಕುಕ್ಕುಂಜಾ, ಬಾಲಕೃಷ್ಣ ಗೌಡ ಕುರಿಯಾಡಿ, ಯಶೋಧ ನಾಯ್ಕ ಕೇರಿಕಟ್ಟೆ, ರಮೇಶ್ ಮೂಲ್ಯ ಕೇರಿಕಟ್ಟೆ, ಚಂದಪ್ಪ ಅಲೆಕ್ಕಿ ಇವರ ತೋಟಕ್ಕೆ ನುಗ್ಗಿ ಬಾಳೆ ಕೃಷಿಗೆ ಹಾನಿಯಾಗಿದ್ದು ಅಪಾರ ನಷ್ಟ ಉಂಟಾಗಿದೆ.. ಅರಣ್ಯ ಇಲಾಖೆ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.
