25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಿರು ಬೇಸಿಗೆಯಲ್ಲಿ ನೀರಿನ ಕೊರತೆಯ ನಡುವೆ ಕುಡಿಯುವ ನೀರನ್ನು ಪೂರೈಸಿ ಮಾದರಿ ಎನಿಸಿಕೊಂಡ ಲಾಯಿಲ ಗ್ರಾ.ಪಂ. ಸದಸ್ಯರು

ಬೆಳ್ತಂಗಡಿ: ಲಾಯಿಲ ಗ್ರಾಮದ 3 ನೇ ವಾರ್ಡ್ ಬೆಳ್ತಂಗಡಿ ಕಾಶಿಬೆಟ್ಟು ಬಳಿ ಕಳೆದ ಕೆಲವು ತಿಂಗಳಿಂದ ಈ ವ್ಯಾಪ್ತಿಯಲ್ಲಿ ರಾಷ್ಟೀಯ ಹೆದ್ದಾರಿ ಕಾಮಗಾರಿ ಬರದಿಂದ ಸಾಗುತ್ತಿದ್ದು ಇದರಿಂದ ಕುಡಿಯುವ ನೀರಿನ ಪ್ರಮುಖ ಪೈಪ್ ಲೈನ್ ಹೊಂದಿರುವ ಪೈಪ್ ಒಡೆದು ಹೋಗಿ ಆಗಾಗ ತೊಂದರೆ ಆಗುತ್ತಿರುವ ನಡುವೆ. ಕಳೆದ ಒಂದು ವಾರಗಳ ಹಿಂದೆ ಅನಿರೀಕ್ಷಿತವಾಗಿ ವಾರ್ಡ್ ನ ಕೊಯ್ಯೂರು ಕ್ರಾಸ್, ಅಯೋಧ್ಯ ನಗರ, ಕುಳೆಂಜಿಲೋಡಿ ಮನೆಗಳಿಗೆ ನೀರು ಸರಬರಾಜು ಆಗುತ್ತಿದ್ದ ಕೊಳವೆ ಬಾವಿಯಿಂದ ಮಣ್ಣು ಮಿಶ್ರಿತ ನೀರು ಬರಲು ಪ್ರಾರಂಭ ಗೊಂಡು ಈ ವ್ಯಾಪ್ತಿಯ ಮನೆಗಳಿಗೆ ಕುಡಿಯಲು ನೀರು ಕೂಡ ದೊರಕದಂತ ಪರಿಸ್ಥಿತಿ ಉದ್ಭವಗೊಂಡಿದೆ. ಹೊಸ ಕೊಳವೆ ಬಾವಿ ಕೊರೆಸಲು ಇನ್ನಷ್ಟು ದಿನ ತಗುಲಲಿದ್ದು ಈಗಾಗಲೇ ಕೊರೆದಿರುವ ಇನ್ನೆರಡು ಕೊಳವೆ ಬಾವಿಯಲ್ಲಿ ನೀರು ಸಿಗದೆ ನಿಷ್ಪ್ರಯೋಜಕವಾಗಿದೆ ಇದನ್ನು ಮನಗಂಡ ಲಾಯಿಲ ಗ್ರಾಮದ 3 ನೇ ವಾರ್ಡ್ ಸದಸ್ಯರಾದ ಅರವಿಂದ್ ಕುಮಾರ್ ಮತ್ತು ಗಣೇಶ್ ಆರ್ ಸೇರಿ ಮನೆಗಳಿಗೆ ಕುಡಿಯುವ ನೀರನ್ನು ಪೂರೈಸಿ ಮಾದರಿ ಎನಿಸಿಕೊಂಡಿದ್ದಾರೆ.

ಬೆಳ್ತಂಗಡಿ ಹಳೆ ಸೇತುವೆ ಬಳಿ ಹೊಸ ಸೇತುವೆ ಕಾಮಗಾರಿ ಪ್ರಾರಂಭಗೊಂಡ ಕಾರಣ ಸ್ಥಳೀಯ ಕೃಷಿ ಚಟುವಟಿಕೆಗೆ ಮತ್ತು ಕೆರೆ ಬಾವಿಗಳಿಗೆ ನೀರಿನ ವಸರು ಹೆಚ್ಚಾಗಲು ಹೊಳೆಬದಿ ಅಣೆಕಟ್ಟುಗೆ ಪ್ರತಿ ವರುಷ ಅಳವಡಿಸುತ್ತಿದ್ದ ಹಲಗೆಯನ್ನು ಈ ಬಾರಿ ಅಳವಡಿಸದ ಕಾರಣ ಈ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಯೂ ತಲೆದುರಿದ್ದು ಇದರ ಪರಿಣಾಮ ಸ್ಥಳೀಯ ಕೊಳವೆ ಬಾವಿಯಲ್ಲಿ ಮತ್ತು ಕೆರೆ ,ಬಾವಿ ಗಳಲ್ಲಿ ನೀರಿನ ಪ್ರಮಾಣವು ಸಂಪೂರ್ಣ ಕಡಿಮೆ ಗೊಂಡಿದೆ.ಇದೇ ನೀರಿನ ಸಮಸ್ಯೆಯಿಂದ ಇಂದು ಅಯೋಧ್ಯ ನಗರ ಎಂಬಲ್ಲಿ ಕಳೆದ ಕೆಲವು ದಿನಗಳಿಂದ ನೀರಿಲ್ಲದೆ ಇರುವ ಮನೆಗಳಿಗೆ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಬಿಜೆಪಿ ಪಕ್ಷದ ಪ್ರಮುಖರಾದ ಅರವಿಂದ್ ಲಾಯಿಲ ಹಾಗೂ ಗಣೇಶ್ ಲಾಯಿಲ ಎಂಬವರು ಸೇರಿಕೊಂಡು ಸ್ವತಃ ಪೈಪ್ ತಂದು ಸರಕಾರಿ ಬಾವಿಯಿಂದ ನೀರನ್ನು ಪಂಪ್ ಮೂಲಕ ಮನೆ ಮನೆಗೆ ನೀರನ್ನು ತಲುಪಿಸಿ ತಮ್ಮ ಕರ್ತವ್ಯ ಪ್ರಜ್ಞೆಯನ್ನು ಮೆರೆದಿದ್ದಾರೆ.

ಬಾವಿಯಲ್ಲಿ ನೀರಿನ ಪ್ರಮಾಣವು ಕಡಿಮೆ ಇದ್ದರು ಕೆಲವು ಮನೆಗಳಿಗೆ ನೀರನ್ನು ನೀಡುವ ಯೋಜನೆ ಹಾಕಿಕೊಂಡಿದ್ದು ಇವರ ಈ ಕೆಲಸ ನೋಡಿ ಅಯೋಧ್ಯ ನಗರ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯತ್ ಸದಸ್ಯರಿಗೆ ಇವರ ಕೆಲಸ ಮಾದರಿ ಪ್ರತಿ ಗ್ರಾಮ ಪಂಚಾಯತ್ ಗೆ ಇಂತ ಸದಸ್ಯರು ಅಗತ್ಯವಿದೆ ಎಂದು ಸ್ಥಳೀಯ ನಿವಾಸಿ ಸುರೇಶ್ ಬರೆಮೇಲು ಇವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Related posts

ದೀಕ್ಷಾನ್ವಯ : ಎಸ್.ಡಿ.ಎಂ. ಬಿ.ಎಡ್ ಕಾಲೇಜಿನ ಪ್ರಾರಂಭೋತ್ಸವ

Suddi Udaya

ಸೋಮಂತಡ್ಕದಲ್ಲಿ ಕಾರು ನಿಯಂತ್ರಣ ತಪ್ಪಿ ಪಲ್ಟಿ: ಮೂವರರಿಗೆ ಗಾಯ

Suddi Udaya

ಬೆಳ್ತಂಗಡಿ ಯುವ ಕಾಂಗ್ರೆಸ್ ನಗರ ಸಮಿತಿಯ ನೂತನ ಅಧ್ಯಕ್ಷರಾಗಿ ಸುದರ್ಶನ್ ಶೆಟ್ಟಿ ನೇಮಕ

Suddi Udaya

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ 

Suddi Udaya

ಸ್ಟೂಡೆಂಟ್ ನರ್ಸಸ್ ಅಸೋಸಿಯೇಷನ್ ಇನ್ ಟ್ರೈನ್ಡ್ ನರ್ಸಸ್ ಅಸೋಸಿಯೇಷನ್ ಆಫ್ ಇಂಡಿಯಾ ಕಾರ್ಯದರ್ಶಿಯಾಗಿ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿ ಸಿಂಚನಾ ಎಂ.ಡಿ ಆಯ್ಕೆ

Suddi Udaya

ರಕ್ಷಿತ್ ಶಿವರಾಂ ಮನವಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸ್ಪಂದನೆ : ಅರಸಿನಮಕ್ಕಿ ಶಾಲೆಗೆ ಶಿಕ್ಷಕರ ನೇಮಕ

Suddi Udaya
error: Content is protected !!