27.5 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ನಾ’ವುಜಿರೆ ನಿಧನಕ್ಕೆ ಡಿ. ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

ಉಜಿರೆ: ನಾ’ವುಜಿರೆ ಎಂದೇ ಚಿರಪರಿಚಿತರಾಗಿದ್ದ ನಾಗರಾಜ ಪೂವಣಿ ಅವರು ನಮ್ಮದೇ ಸಂಸ್ಥೆಯಾದ ಉಜಿರೆಯ ಶ್ರೀ ಸಿದ್ಧವನ ಗುರುಕುಲ, ಎಸ್.ಡಿ.ಎಂ. ಸೆಕೆಂಡರಿ ಶಾಲೆ (ಅಂದಿನ ಡಿ.ಕೆ.ವಿ. ಪ್ರೌಢಶಾಲೆ), ಎಸ್.ಡಿ.ಎಂ. ಕಾಲೇಜು ಮೊದಲಾದ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಮ್ಮ ಪ್ರೀತಿ-ವಿಶ್ವಾಸ, ಅಭಿಮಾನಕ್ಕೆ ಪಾತ್ರರಾಗಿದ್ದರು.ಸರಳ ವ್ಯಕ್ತಿತ್ವವನ್ನು ಹೊಂದಿದ್ದ ಅವರು ನಮ್ಮ ಸಂಸ್ಥೆಗಳಲ್ಲಿ ದೊರಕಿದ ಎಲ್ಲಾ ಅವಕಾಶಗಳ ಸದುಪಯೋಗ ಪಡೆದು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಂಡರು.


ನಾವು “ಮಂಜುವಾಣಿ” ಮಾಸಪತ್ರಿಕೆಯ ಪ್ರಕಾಶನ ಆರಂಭಿಸಿದಾಗ, ಉತ್ತಮ ಸೇವೆ ನೀಡಿದ್ದಾರೆ. ಅವರ ಸರಳ ವ್ಯಕ್ತಿತ್ವ, ಸೌಜನ್ಯಪೂರ್ಣ ಸೇವೆ, ನಮಗೆ ಸಂತೋಷ ಮತ್ತು ಅಭಿಮಾನವನ್ನು ಉಂಟುಮಾಡಿದೆ.
ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ ಅವರ ಅಗಲುವಿಕೆಯಿಂದ ಕುಟುಂಬವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಹಾಗೂ ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ ಎಂದು ಡಾ. ಡಿ. ವೀರೇಂದ್ರ ಹೆಗ್ಗಡೆ ಯವರು ಸಂತಾಪ ಸೂಚಿಸಿದರು.

Related posts

ಕಲ್ಮಂಜ: ಸತ್ಯನಪಲ್ಕೆ ಎಂಬಲ್ಲಿ ಸೇತುವೆ ಮೇಲೆ ಬಿದ್ದ ಬೃಹತ್ ಗಾತ್ರದ ಮರ: ಗ್ರಾಮಸ್ಥರಿಂದ ತೆರವು ಕಾರ್ಯ

Suddi Udaya

ರೋಟರಿ ಕ್ಲಬ್ ಬೆಳ್ತಂಗಡಿ : ರಾಷ್ಟ್ರೀಯ ರೈತರ ದಿನ ಆಚರಣೆ

Suddi Udaya

ಜ.6-10: ಎಸ್‌ಡಿಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಹಳೆಗನ್ನಡ ಪಠ್ಯಗಳ ಓದು ಮತ್ತು ಅರ್ಥೈಸುವಿಕೆ ಕಾರ್ಯಾಗಾರ

Suddi Udaya

ಮುಂಡಾಜೆ: ನೀಲಮ್ಮ ನಾಯ್ಕ ನಿಧನ

Suddi Udaya

ಧರ್ಮಸ್ಥಳ : ಮಳೆಗೆ ತೀರ ಹದಗೆಟ್ಟ ಮುಳಿಕ್ಕಾರು ಮಣ್ಣಿನ ರಸ್ತೆ: ದುರಸ್ತಿಗೊಳಿಸುವಂತೆ ಗ್ರಾಮಸ್ಥರ ಒತ್ತಾಯ

Suddi Udaya

ಮಾಯಿಲಕೋಟೆ ದೈವಸ್ಥಾನಕ್ಕೆ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಭೇಟಿ

Suddi Udaya
error: Content is protected !!