26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಯುವಕರಿಬ್ಬರ ನಡುವೆ ಗಲಾಟೆ: ಮೂಗಿಗೆ ಕಚ್ಚಿ ಗಾಯಗೊಳಿಸಿದ ಸ್ನೇಹಿತ

ಬೆಳ್ತಂಗಡಿ : ಹೊಸ ವರ್ಷದ ಆಚರಣೆಯಲ್ಲಿ ಸ್ನೇಹಿತನ ಜೊತೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆಯಾಗಿ ನಂತರ ಒಬ್ಬನ ಮೂಗು ಕಚ್ಚಿ ತುಂಡರಿಸಿದ ಘಟನೆ ಬೆಳ್ತಂಗಡಿಯ ಪಿಲ್ಯದಲ್ಲಿ ನಡೆದಿದೆ‌.

ಬೆಳ್ತಂಗಡಿ ತಾಲೂಕಿನ ಪಿಲ್ಯ ಗ್ರಾಮದ ಉಲ್ಪೆ ಎಂಬಲ್ಲಿನ ನಿವಾಸಿ ದೀಕ್ಷಿತ್ (28ವ) ಯುವಕ ಮೂಗುಗೆ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಡಿ. 31 ರಂದು ರಾತ್ರಿ ಹೊಸ ವರ್ಷದ ಸಂದರ್ಭದಲ್ಲಿಯ ಪಾಟಿ೯ಯಲ್ಲಿ ಕ್ಷುಲ್ಲಕ ವಿಚಾರದಲ್ಲಿ ಸ್ನೇಹಿತನ ಜೊತೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿದಾಗ ಮೂಡುಗೆರೆ ನಿವಾಸಿ , ಪ್ರಸ್ತುತ ಬೆಳ್ತಂಗಡಿ ತಾಲೂಕಿನ ಪಿಲ್ಯ ಗ್ರಾಮದ ಸಂಬಂಧಿಕರ ಮನೆಯಲ್ಲಿ ವಾಸವಿರುವ ರಾಕೇಶ್ ಎಂಬಾತ ದೀಕ್ಷಿತ್ ಎಂಬಾತನ ಮೂಗಿಗೆ ಕಚ್ಚಿದ್ದಾನೆ ಎಂದು ಆರೋಪಿಸಲಾಗಿದೆ.


ಘಟನೆಯಿಂದ ಗಂಭೀರ ಗಾಯಗೊಂಡ ದೀಕ್ಷಿತ್ ನನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಕರಣ ಸಂಬಂಧ ವೇಣೂರು ಪೋಲಿಸರು ಆಸ್ಪತ್ರೆಗೆ ತೆರಳಿ ವಿಚಾರಣೆ ನಡೆಸುತ್ತಿದ್ದಾರೆ.

Related posts

ತೆಂಕಕಾರಂದೂರು: ಹಿಂದೂ ಸಂಗಮ ಬಳಂಜ ಮಂಡಲ ಆಮಂತ್ರಣ ಪತ್ರಿಕೆ ಬಿಡುಗಡೆ: ಜ 25 ಬಳಂಜ ಮಂಡಲದಿಂದ ಬೃಹತ್ ಹಿಂದೂ‌‌ ಸಂಗಮ ಶೋಭಾಯಾತ್ರೆ

Suddi Udaya

ನಿಡ್ಲೆ ಗ್ರಾಮದ ಕೆದಿಹಿತ್ಲು ಕೆ. ಕಾರ್ತಿಕ್ ರಿಗೆ ಪಿಹೆಚ್‌ಡಿ ಪದವಿ

Suddi Udaya

ಎ. 28 – ಮೇ.2: ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಬೇಸಿಗೆ ಶಿಬಿರ: ಬೇಸಿಗೆ ರಜೆ ಕಳೆಯಲು ಸುಮಾರು 50 ಚಿಣ್ಣರಿಗೆ ಅವಕಾಶವಿದೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

Suddi Udaya

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಿಂದ ಶೈಕ್ಷಣಿಕ ಸಾಧಕರಿಗೆ ಗೌರವಾರ್ಪಣೆ

Suddi Udaya

ಮದ್ದಡ್ಕ: ಅಬಕಾರಿ ಅಧಿಕಾರಿಗಳ ದಾಳಿ: 250 ಗ್ರಾಂ ಗಾಂಜಾ ಹಾಗೂ 2 ಮೊಬೈಲ್‌ಗಳು ವಶ: ಆರೋಪಿ ಪರಾರಿ

Suddi Udaya
error: Content is protected !!