29.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪ್ರೊ. ನಾವುಜಿರೆ ನಿಧನಕ್ಕೆ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ. ಯದುಪತಿ ಗೌಡರಿಂದ ಸಂತಾಪ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಹಿರಿಯ ಸಾಹಿತಿಗಳು, ಪತ್ರಕರ್ತರು, ಬರಹಗಾರರೂ ಆಗಿರುವ ಪ್ರೊ. ನಾವುಜಿರೆಯವರ ನಿಧನಕ್ಕೆ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಪಾಂಡಿತ್ಯವುಳ್ಳವರಾಗಿ, ಉತ್ತಮ ಶಿಕ್ಷಕರು ಮತ್ತು ಅಧ್ಯಯನಶೀಲರು ಎಂದು ಹೆಸರು ಪಡೆದವರು. 1999ರಂದು ಮುಂಡಾಜೆಯಲ್ಲಿ ಜರಗಿದ ಬೆಳ್ತಂಗಡಿ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು. ತಾಲೂಕಿನ ಸಾಹಿತ್ಯ ಚಟುವಟಿಕೆಗಳಲ್ಲಿ, ಸಂಘಟನಾ ಕಾರ್ಯಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಂಡವರು ಎಂದು ಅಗಲಿದ ಆತ್ಮಕ್ಕೆ ಶಾಂತಿಯನ್ನು ಬಯಸಿ ತನ್ನ ಸಂತಾಪದ ನುಡಿಯಲ್ಲಿ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ. ಯದುಪತಿ ಗೌಡರು ತಿಳಿಸಿದರು.

Related posts

ವೇಣೂರು: ಕೃಷಿಕ ಕೆ. ಹಸನಬ್ಬ ನಿಧನ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಘಟಕದಿಂದ ಗೃಹಲಕ್ಷ್ಮಿಯೋಜನೆ ಸಮಸ್ಯೆ ಪರಿಹರಿಸಲು ಗ್ರಾಮವಾರು ಸಂಚಾಲಕರ ನೇಮಕ

Suddi Udaya

ಅಳದಂಗಡಿ ಸ.ಪ.ಪೂ. ಕಾಲೇಜಿನಲ್ಲಿ ಪೋಕ್ಸೋ ಕಾಯ್ದೆ ಮತ್ತು ಬಾಲ್ಯ ವಿವಾಹ ಬಗ್ಗೆ ಕಾನೂನು ಅರಿವು ಕಾರ್ಯಕ್ರಮ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ರಕ್ಷಿತ್ ಶಿವರಾಮ್ ಭೇಟಿ, ಪ್ರಾರ್ಥನೆ

Suddi Udaya

ಅಗ್ರಿಲೀಫ್ ಸಂಸ್ಥೆಯಲ್ಲಿ ದೀಪಾವಳಿ ಸಂಭ್ರಮ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ