25.8 C
ಪುತ್ತೂರು, ಬೆಳ್ತಂಗಡಿ
March 6, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ತೋಟತ್ತಾಡಿ ಗೌಡರ ಯಾನೆ ಒಕ್ಕಲಿಗರ ಗ್ರಾಮ ಸಮಿತಿಯ ಪದಾಧಿಕಾರಿಗಳ ಆಯ್ಕೆ

ತೋಟತ್ತಾಡಿ ಗೌಡರ ಯಾನೆ ಒಕ್ಕಲಿಗರ ಗ್ರಾಮ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆಯು ಸಂಘದ ನಿವೇಶನ ಕೃಷ್ಣ ನಗರದಲ್ಲಿ ನಡೆಯಿತು.


ಸಭೆಯಲ್ಲಿ ಮುಂದಿನ 2 ವರ್ಷದ ಅವಧಿಗೆ ಅಧ್ಯಕ್ಷರಾಗಿ ಗೋಪಾಲಕೃಷ್ಣ ಗೌಡ ಮಡೀರು, ಕಾರ್ಯದರ್ಶಿಯಾಗಿ ರೋಹಿತ್ ಗೌಡ ಕಜೆ, ಕೋಶಾಧಿಕಾರಿಯಾಗಿ ಪ್ರಮೋದ್ ಗೋಳಿದಡಿ, ಉಪಾಧ್ಯಕ್ಷರುಗಳಾಗಿ ದಿನೇಶ್ ಗೌಡ ದೇವಸ್ಯ ಮತ್ತು ಎಲ್ಯಣ್ನ ಗೌಡ ಅರ್ಬಿ, ವೆಂಕಟರಮಣ ಗೌಡ ಬಾಯಿತ್ಯಾರು, ಜೊತೆ ಕಾರ್ಯದರ್ಶಿ ಜಯಚಂದ್ರ ಬಾಯಿತ್ಯಾರು, ಮಹಿಳಾ ವೇದಿಕೆ ಅಧ್ಯಕ್ಷರಾಗಿ ರಶ್ಮಿ ದಿನೇಶ್ ಗೌಡ ದೇವಸ್ಯ ಕಾರ್ಯದರ್ಶಿಯಾಗಿ ಪ್ರಜ್ಞಾ ಗೋಳಿದಡಿ, ಯುವ ವೇದಿಕೆ ಅಧ್ಯಕ್ಷರಾಗಿ ನವೀನ್ ಗೌಡ ಬಾಯಿತ್ಯಾರು, ಕಾರ್ಯದರ್ಶಿಯಾಗಿ ನಿತೇಶ್ ಗೌಡ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಪ್ರಸಾದ್ ಗೌಡ ಬಳ್ಳಿ, ಶಶಿಧರ ಗೌಡ ಪಿತ್ತಿಲು, ರಮೆಶ್ ಗೌಡ ಹಳೆಕಕ್ಕಿಂಜೆ, ಕೀರ್ತನ್ ಅರ್ತಿದಡಿ, ವಿಜಯ ಗೌಡ ಅಗರಿ ಆಯ್ಕೆ ಮಾಡಲಾಯಿತು.


ಈ ಸಂಧರ್ಭದಲ್ಲಿ ತಾಲೂಕು ಸಂಘದ ಕಾರ್ಯದರ್ಶಿ ಗಣೇಶ್ ಗೌಡ ಕಡಿರುದ್ಯಾವರ, ನಿಕಟಪೂರ್ವ ಕಾರ್ಯದರ್ಶಿ ಮೋಹನ ಗೌಡ ಕೊಯ್ಯೂರು, ನಿಕಟಪೂರ್ವ ನಿರ್ದೇಶಕರಾದ ಆನಂದ ಗೌಡ ಉಜಿರೆ, ತಾಲೂಕು ಯುವ ವೇದಿಕೆ ಅಧ್ಯಕ್ಷರಾದ ಚಂದ್ರಕಾಂತ್ ನಿಡ್ಡಾಜೆ, ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಗೀತಾ ರಾಮಣ್ಣ ಗೌಡ ಕೊಯ್ಯೂರು, ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕರುಗಳಾದ ಸುರೇಶ್ ಕೌಡಂಗೆ, ಗೋಪಾಲಕೃಷ್ಣ ಜಿ.ಕೆ ಉಜಿರೆ ಉಪಸ್ಥಿತರಿದ್ದರು.

Related posts

ಕಣಿಯೂರು ದ.ಕ. ಜಿ.ಪ. ಸ.ಉ. ಹಿ. ಪ್ರಾ. ಶಾಲೆಗೆ ಸೀನಿಯರ್ ಮಂಜುಶ್ರೀ ಜೆಸಿಸ್ ಯಿಂದ ಸಹಾಯಧನ

Suddi Udaya

ಬೆಳ್ತಂಗಡಿ : ಕಾರು, ದ್ವಿಚಕ್ರ ವಾಹನ ಅಪಘಾತ

Suddi Udaya

ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತ ಕಡಿರುದ್ಯಾವರ ಕಾನರ್ಪ ಕೌಡಂಗೆ ನಿವಾಸಿ ನೇಮಿರಾಜ ಗೌಡ ನಿಧನ

Suddi Udaya

ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಮುಂದೆ ಸ್ಪರ್ಧಿಸುವ ಅಪೇಕ್ಷೆ: ಪತ್ರಿಕಾಗೋಷ್ಠಿ

Suddi Udaya

ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಕುವೆಟ್ಟು, ಓಡಿಲ್ನಾಳ ಗ್ರಾಮ ಸಮಿತಿ ವತಿಯಿಂದ ಗುರು ಪೂಜೆ ಹಾಗೂ ಶನೈಶ್ಚರ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಪ್ರಾಥಮಿಕ ಶಾಲೆಗಳ ಕೊಠಡಿ ನಿರ್ಮಾಣಕ್ಕೆ ಅನುದಾನ ಮತ್ತು ತಾಲೂಕಿನ ಮೂರು ಪ್ರಾಥಮಿಕ ಶಾಲೆಗಳನ್ನು ಕೆಪಿಎಸ್‌ ಶಾಲೆಯಾಗಿ ಮೇಲ್ದರ್ಜೆಗೇರಿಸಲು ಶಿಕ್ಷಣ ಸಚಿವರಿಗೆ ಮನವಿ

Suddi Udaya
error: Content is protected !!