ಮೇಲಂತಬೆಟ್ಟು : ತ್ರಿವೇಣಿ ಸಂಜೀವಿನಿ ಮಹಿಳಾ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಮೇಲಂತಬೆಟ್ಟು ಇದರ ವಾರ್ಷಿಕ ಮಹಾಸಭೆಯು ಮಾ.11 ರಂದು ಮೇಲಂತಬೆಟ್ಟು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ದಮಯಂತಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪಂಚಾಯತ್ ನ ಉಪಾಧ್ಯಕ್ಷ ಲೋಕನಾಥ ಶೆಟ್ಟಿ ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಶುಭ ಹಾರೈಸಿದರು. ಎಂ.ಬಿ.ಕೆ ಶ್ರೀಮತಿ ಮಲ್ಲಿಕಾ ಐದು ವರ್ಷಗಳ ವರದಿ ಹಾಗೂ ಜಮಾ ಖರ್ಚನ್ನು ಸಭೆಗೆ ಮಂಡಿಸಿದರು. ಸಭೆಯು ಸರ್ವಾನುಮತದಿಂದ ಅನುಮೋದನೆ ಮಾಡಲಾಯಿತು. ವಲಯ ಮೇಲ್ವಿಚಾರದ ಜಯನಂದರವರು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ರಾಷ್ಟ್ರಪತಿಯನ್ನು ಭೇಟಿ ಮಾಡಲು ದೆಹಲಿಗೆ ತೆರಳಿದ ಕೊರಗ ಸಮುದಾಯದ ಮಹಿಳೆಯರಲ್ಲಿ ತ್ರಿವೇಣಿ ಒಕ್ಕೂಟದ ಪದಾಧಿಕಾರಿ ಶ್ರೀಮತಿ ಲಕ್ಷ್ಮಿ ಇವರನ್ನು ಗೌರವಿಸಲಾಯಿತು.
ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸವಿತಾ ಸಂಜೀವಿನಿಯ ಬಗ್ಗೆ ಮಾಹಿತಿ ನೀಡಿದರು. ರಾಜ್ಯದ ಅತ್ಯುತ್ತಮ MIS ಪ್ರಶಸ್ತಿಗೆ ಬಾಜನರಾದ ತಾಲೂಕು ವ್ಯವಸ್ಥಾಪಕರು ಕೃಷಿಯೇತರ ಚಟುವಟಿಕೆಯ ಬ್ಲಾಕ್ ಮ್ಯಾನೇಜರ್ ನಿತೀಶ್ ಇವರನ್ನು ಎಲ್ಲಾ ಗಣ್ಯರು ಸೇರಿ ಗೌರವಿಸಿದರು. ನಂತರ ಸನ್ಮಾನಿತರು ಸವಿಸ್ತಾರಾವಾಗಿ NRLM ಯೋಜನೆಗಳ ಬಗ್ಗೆ ಮಾತನಾಡಿದರು. ವಲಯ ಮೇಲ್ವಿಚಾರಕರು ಆಡಳಿತ ಮಂಡಳಿಯ ಸದಸ್ಯರ ಆಯ್ಕೆ ಪ್ರಕ್ರಿಯೆ ಹಾಗೂ ಪದಗ್ರಹಣ ಕಾರ್ಯಕ್ರಮ ನಡೆಸಿಕೊಟ್ಟರು. ನಿರ್ಗಮಿತ ಪದಾಧಿಕಾರಿಗಳಿಗೆ ಗಿಡ ನೀಡುವುದರ ಮೂಲಕ ಗೌರವಿಸಲಾಯಿತು.
ಗ್ರಾಮಪಂಚಾಯಿತಿ ವತಿಯಿಂದ ನಾರಿ ಶಕ್ತಿ ವಂದನಾ ಕಾರ್ಯಕ್ರಮ ಎಮ್.ಬಿ.ಕೆ ಶ್ರೀಮತಿ ಮಲ್ಲಿಕಾ ಇವರನ್ನು ಗುರುತಿಸಿ ಸನ್ಮಾನಿಸಿದರು. ನಂತರ ಸಾಕ್ಷರತಾ ಸಮಾಲೋಚಕಿ ಶ್ರೀಮತಿ ಉಷಾ ಕಾಮತ್ ಆಗಮಿಸಿ ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ಯೋಜನೆಗಳ ಬಗ್ಗೆ ಅತ್ಯಂತ ಪ್ರಯೋಜನಕಾರಿಯಾದ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಲಿಂಗತ್ವದ್ವಾರಿತ ದೌರ್ಜನ್ಯ ಅಭಿಯಾನದ ಬಗ್ಗೆ ಸದಸ್ಯರಿಗೆ ಅರಿವು ಮೂಡಿಸಲಾಯಿತು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಾಕಾರಿ ಶ್ರೀಮತಿ ಗೀತಾ ಆರ್ ಸಾಲಿಯಾನ್, ಕಾರ್ಯದರ್ಶಿ ನಿರ್ಮಲ್ ಕುಮಾರ್ , ಗ್ರಾಮ ಆಡಳಿತಾಧಿಕಾರಿ ಹೆರಾಲ್ಡ್ ಹಾಗೂ ಪಂಚಾಯತ್ ನ ಸದಸ್ಯರುಗಳು ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪಂಚಾಯತ್ ಸಿಬ್ಬಂದಿಗಳು , ಎಲ್ ಸಿ ಆರ್ ಪಿ , ಪಶುಸಖಿ, ಕೃಷಿಸಖಿ ಕಾರ್ಯಕ್ರಮಕ್ಕೆ ಸಹಕರಿಸಿದರು. ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಶಾರದ ಸ್ವಾಗತಿಸಿ, ಪಂಚಾಯತ್ ಸಿಬ್ಬಂದಿ ಕುಮಾರಿ ಪ್ರಮೀಳಾ ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ಸದಸ್ಯೆ ಶ್ರೀಮತಿ ವಿಜಯಲಕ್ಷ್ಮಿ ಧನ್ಯವಾದವಿತ್ತರು.