ಮೊಗ್ರು: ಕರಂಬಾರುವಿನಲ್ಲಿ ಕಾಡಾನೆ ಪ್ರತ್ಯಕ್ಷ: ನೇತ್ರಾವತಿ ನದಿಯಲ್ಲಿ ಜಳಕ

Suddi Udaya

ಬೆಳ್ತಂಗಡಿ: ಕಳೆದ ಕೆಲವು ದಿನಗಳಿಂದ ತಾಲೂಕಿನ ವಿವಿಧೆಡೆ ಒಂಟಿ ಸಲಗ ತಿರುಗಾಡುತ್ತಿದ್ದು, ಜನರು ಭಯಭೀತರಾಗಿದ್ದಾರೆ. ಕಾಡಾನೆಯ ಸಂಚಾರದಿಂದ ರೈತರ ಕೃಷಿ ಭೂಮಿ ಹಲವು ಕಡೆ ನಾಶವಾಗಿದೆ.

ಇಂದು ಬೆಳಿಗ್ಗೆ ಮೊಗ್ರು ಗ್ರಾಮದ ಕರಂಬಾರುವಿನಲ್ಲಿ ಕಾಡಾನೆಯು ಪ್ರತ್ಯಕ್ಷವಾಗಿದ್ದು, ಕರಂಬಾರು ಕೃಷ್ಣಪ್ಪ ಗೌಡರ ನೀರಿನ ಪಂಪುಗೆ ಹಾನಿಮಾಡಿದ್ದು, ಗ್ರಾಮಸ್ಥರು ಜಾಗರುಕತೆಯಿಂದ ಇರುವಂತೆ ತಿಳಿಸಿದ್ದಾರೆ.

ಕಾಡಾನೆಯು ಕೊಯ್ಯರು, ಕಣಿಯೂರು ದಾಟಿ ಮಲೆಂಗಲ್ಲು, ಪದ್ಮುಂಜ, ಪೊಯ್ಯ ಮೂಲಕ ಮೊಗ್ರು ಗ್ರಾಮದ ಬುಳೇರಿ ಸಮೀಪದ ಕರಂಬಾರು ಸುದೆಪಿಲ ಸಮೀಪದ ನೇತ್ರಾವತಿ ನದಿಯಲ್ಲಿ ಜಳಕ ಮಾಡಿ ಮುಂದೆ ಸಾಗಿದೆ ಎಂದು ಮಾಹಿತಿ ಲಭಿಸಿದೆ.

Leave a Comment

error: Content is protected !!