23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪೆರ್ಲ ಬೈಪಾಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಭಡ್ತಿಗೊಂಡ ಕೊರಗಪ್ಪ ಟಿ.ರವರಿಗೆ ಬೀಳ್ಕೊಡುಗೆ ಸಮಾರಂಭ

ಬಂದಾರು: ಸರ್ಕಾರಿ ಪ್ರೌಢ ಶಾಲೆ ಪೆರ್ಲ ಬೈಪಾಡಿ ಇಲ್ಲಿ ಸುಮಾರು 23 ವರ್ಷ ಗಣಿತ ಶಿಕ್ಷಕರಾಗಿ, ಕೆಲವು ಸಮಯ ಪ್ರಭಾರ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಕೊರಗಪ್ಪ ಇವರು ಪದೋನ್ನತಿಗೊಂಡು ಸರ್ಕಾರಿ ಪ್ರೌಢ ಶಾಲೆ ಹಳೇಪೇಟೆ ಉಜಿರೆಗೆ ವರ್ಗಾವಣೆಗೊಂಡಿರುವ ಪ್ರಯುಕ್ತ ಅವರಿಗೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಮತ್ತು ಊರವರ ವತಿಯಿಂದ ಬೀಳ್ಕೊಡುಗೆ ಸಮಾರಂಭವು ಮಾ, 9 ರಂದು ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಮಹಾಬಲ ಗೌಡ ವಹಿಸಿದ್ದು, ಕೊರಗಪ್ಪರು ಗಣಿತ ವಿಷಯವನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಬೋಧಿಸಿ, ಮಕ್ಕಳಿಗೆ ಅಚ್ಚು ಮೆಚ್ಚಿನ ಶಿಕ್ಷಕರಾಗಿದ್ದರು ಎಂದು ಹೇಳಿದರು. ಶಾಲಾ ಸ್ಥಾಪನೆಗೆ ಕಾರಣ ಕರ್ತರಾದ ಕೊಂಕನೊಟ್ಟು ದೇಜಪ್ಪ ಗೌಡ , ಹಿರಿಯರಾದ ಹೊನ್ನಪ್ಪ ಗೌಡ, ಗ್ರಾಮ ಪಂಚಾಯಿತಿ ಸದಸ್ಯೆ ಶ್ರೀಮತಿ ಅನಿತಾ , ಕಂಚರೊಟ್ಟು ಡೀಕಯ್ಯ ಗೌಡ, ಎಸ್.ಡಿ.ಎಂ.ಸಿ.ಯ ಸದಸ್ಯರು ಉಪಸ್ಥಿತರಿದ್ದರು. ಶೇಖರ್ ಎನ್., ಮಹೇಶ್ ನಿಲಜಿ , ವಿವೇಕಾನಂದ ಗೌಡ, ಮಹೇಶ್ ಎ. ಕೊರಗಪ್ಪರ ಸೇವೆಯನ್ನು ಸ್ಮರಿಸಿ ಅಭಿನಂದನೆ ಸಲ್ಲಿಸಿದರು.

ಹಳೆವಿದ್ಯಾರ್ಥಿಗಳಾದ ಸುರಕ್ಷಿತ, ನವೀನ್ ಪ್ರಕಾಶ್ , ವಿದ್ಯಾರ್ಥಿಗಳಾದ, ಶ್ರದ್ಧಾ, ಪಲ್ಲವಿ, ವನ್ಯಶ್ರೀ, ದಿವ್ಯಾ ಗುರುಗಳ ಗುಣಗಾನ ಮಾಡಿದರು. ಕನ್ನಡ ಶಿಕ್ಷಕಿ ಹೇಮಲತಾ ಅಭಿನಂದನಾ ಪತ್ರ ವಾಚಿಸಿದರು. ಕೊರಗಪ್ಪ , ಮತ್ತು ಅವರ ಪತ್ನಿ ಶ್ರೀಮತಿ ತ್ರಿವೇಣಿಯವರನ್ನು ಅಭಿನಂದಿಸಲಾಯಿತು.

ವಿದ್ಯಾರ್ಥಿನಿಯರಾದ ಗಣ್ಯಶ್ರೀ, ರಶ್ಮಿತಾ, ಯಶಸ್ವಿಯವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಬಾಲಕೃಷ್ಣ ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅತಿಥಿ ಶಿಕ್ಷಕಿ ದೀಕ್ಷಾ ವಂದಿಸಿದರು. ವಿಜಯ ಕುಮಾರ್ ಎಂ ಕೊಯ್ಯೂರು, ಕಾರ್ಯಕ್ರಮ ನಿರೂಪಿಸಿದರು.

Related posts

ವೇಣೂರು ದೇವಾಡಿಗರ ಸೇವಾ ವೇದಿಕೆ ಹಾಗೂ ದೇವಾಡಿಗರ ಮಹಿಳಾ ವೇದಿಕೆ ಜಂಟಿ ಆಶ್ರಯದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ

Suddi Udaya

ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ

Suddi Udaya

ಅರಸಿನಮಕ್ಕಿಯ ತೇಜಸ್ವಿಗೆ ಐಸರ್ ಪರೀಕ್ಷೆಯಲ್ಲಿ 47ನೇ ರ್‍ಯಾಂಕ್

Suddi Udaya

ಮಲೆಬೆಟ್ಟು ಹಾ.ಉ. ಸಂಘದ ಆಡಳಿತ ಮಂಡಳಿಯನ್ನುವಜಾಗೊಳಿಸಿ ನೀಡಿದ ಆದೇಶ ರದ್ದು: ಮತ್ತೆ ಅಧಿಕಾರದ ಗದ್ದುಗೆಗೆ ಏರಿದ ಪ್ರಮೋದ್ ಕುಮಾರ್ ಅಧ್ಯಕ್ಷತೆಯ ಆಡಳಿತ ಮಂಡಳಿ

Suddi Udaya

ಮಾಜಿ ಶಾಸಕ ವಸಂತ ಬಂಗೇರರಿಗೆ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಒಡ್ಡಿದ ಆರೋಪ: ರಾಕೇಶ್ ಶೆಟ್ಟಿ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಆಗ್ರಹ: ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಬೆಳ್ತಂಗಡಿ ಪೊಲೀಸ್ ರಿಗೆ ದೂರು

Suddi Udaya

ಬಿರು ಬೇಸಿಗೆಯಲ್ಲಿ ನೀರಿನ ಕೊರತೆಯ ನಡುವೆ ಕುಡಿಯುವ ನೀರನ್ನು ಪೂರೈಸಿ ಮಾದರಿ ಎನಿಸಿಕೊಂಡ ಲಾಯಿಲ ಗ್ರಾ.ಪಂ. ಸದಸ್ಯರು

Suddi Udaya
error: Content is protected !!