22.8 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಮಾ.18-23: ಮಣ್ಣಿನ ಹರಕೆಯ ಪ್ರಖ್ಯಾತ ಕ್ಷೇತ್ರ ಸುರ್ಯ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ

ಬೆಳ್ತಂಗಡಿ: ಮಣ್ಣಿನ ಹರಕೆಯ ಪ್ರಖ್ಯಾತ ಕ್ಷೇತ್ರ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ಮಾ.18 ರಿಂದ ಮಾ.23ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ ಎಂದು ಅನುವಂಶಿಕ ಆಡಳಿತ ಮೊಕ್ತೇಸರ ಡಾ. ಸತೀಶ್ಚಂದ್ರ ಸುರ್ಯಗುತ್ತು ತಿಳಿಸಿದ್ದಾರೆ.

ಮಾ.18ರಂದು ಬೆಳಿಗ್ಗೆ ಗಣಪತಿ ಹೋಮ, ಕಲಶಪೂಜೆ, ಕಲಶಾಭೀಷೇಕ, ಸಂಜೆ ರಂಗಪೂಜೆ ಉತ್ಸವ, ಮಾ.19ರಂದು ಬೆಳಿಗ್ಗೆ ಗಣಹೋಮ, ನವಕಪ್ರಧಾನ ಕಲಶಾಭೀಷೇಕ, ಧ್ವಜಾರೋಹಣ, ಮಹಾಪೂಜೆ, ಮಾ.20ರಂದು ಸಂಜೆ ಸುರ್ಯಗುತ್ತು ಮನೆಯಿಂದ ಧರ್ಮದೈವಗಳ ಭಂಡಾರದ ಆಗಮನ, ಉತ್ಸವ, ವಸಂತ ಕಟ್ಟೆ ಪೂಜೆ, ಮಾ.21ರಂದು ಸೊಡರಬಲಿ ಉತ್ಸವ, ರಾತ್ರಿ ಕೆರೆಕಟ್ಟೆ ಪೂಜೆ, ಉತ್ಸವ, ಮಾ.22ರಂದು ದರ್ಶನಬಲಿ ಉತ್ಸವ, ಮಹಾಪೂಜೆ, ರಾತ್ರಿ ಉತ್ಸವ, ಪುಷ್ಪ ರಥೋತ್ಸವ, ನೃತ್ಯಬಲಿ ಉತ್ಸವ, ರಥಕಟ್ಟೆ ಪೂಜೆ, ಮಹಾಪೂಜೆ ಶಯನೋತ್ಸವ, ಮಾ.23ರಂದು ಕವಾಟೋದ್ಘಾಟನೆ, ಕಲಶಾಭೀಷೇಕ, ಮಹಾಪೂಜೆ, ಸಂಜೆ ಯಾತ್ರಾಹೋಮ, ಅವಭೃತ ಸ್ನಾನ ಕಾರ್ಯಕ್ರಮ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾ.20 ರಂದು ರಾತ್ರಿ ರಾಜ್ಯಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ರಚಿಸಿ ನಿರ್ದೇಶಿಸಿದ ಪುದರ್ ದೀದಾಂಡ್' ತುಳು ಹಾಸ್ಯಮಯ ನಾಟಕ, ಮಾ.21ರಂದು ದುರ್ಗಾ ಸ್ವಾತಿ ನೃತ್ಯಾಲಯ ಅಸೈಗೋಳಿ ಇದರ ನೃತ್ಯಗುರು ಕರ್ನಾಟಕ ಕಲಾಶ್ರೀ ವಿದುಷಿ ಸ್ವಾತಿ ಭಟ್ ಪಿ. ಇವರ ಶಿಷ್ಯರಿಂದನೃತ್ಯಾರಾಧನ’ ಕಾರ್ಯಕ್ರಮ ಮತ್ತು ಚಾಚಕೆರೆ ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿ ಸರಪಾಡಿ ಇವರಿಂದ ಯಕ್ಷಗಾನ ಬಯಲಾಟ ನಾಗರ ಪಂಚಮಿ, ಮಾ.22ರಂದು ರಾತ್ರಿ ಅಂಗನವಾಡಿ ಕೇಂದ್ರ ಸುರ್ಯ ಮತ್ತು ಕಿ.ಪ್ರಾ ಶಾಲೆ ಸುರ್ಯ ಇಲ್ಲಿಯ ಮಕ್ಕಳಿಂದಸಾಂಸ್ಕೃತಿಕ ಕಾರ್ಯಕ್ರಮ’ ರಾತ್ರಿ ಸಂಗಮ ಕಲಾವಿದರು ಉಜಿರೆ ಇವರಿಂದ ಸುಬ್ಬು ಸಂಟ್ಯಾರು ರಚಿಸಿ, ಗಿರೀಶ್ ಹೊಳ್ಳ ನಿರ್ದೇಶಿಸಿರುವ ತುಳು ಸಾಂಸಾರಿಕ ಹಾಸ್ಯಮಯ ನಾಟ `ಪಚ್ಚು ಪಾತೆರೊಡು’ ಪ್ರದರ್ಶನಗೊಳ್ಳಲಿದೆ.

Related posts

ಅ.31: ಅಳದಂಗಡಿಯಲ್ಲಿ ಶ್ರೀ ಮಹಾವೀರ ಮೆಡಿಕಲ್ಸ್ ಶುಭಾರಂಭ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

Suddi Udaya

ತೆಗೆದುಕೊಂಡ ಒಡವೆಗಳನ್ನು ಯಾಕೆ ಇನ್ನು ಕೊಟ್ಟಿಲ್ಲ ಎಂದು ಪ್ರಶ್ನಿಸಿದ ಮಹಿಳೆಗೆ ಕೈಯಿಂದ ಹೊಡೆದು ಕುತ್ತಿಗೆಯನ್ನು ಹಿಚುಕಿ ಜೀವಬೆದರಿಕೆ

Suddi Udaya

ರಕ್ತೇಶ್ವರಿಪದವು ಪೌಷ್ಟಿಕಾಹಾರ ಪೋಷಣ್ ಅಭಿಯಾನ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಪೋಷಕರಿಂದ ಗಿಡ ನೆಡುವ ಕಾರ್ಯಕ್ರಮ

Suddi Udaya

ರಾಜ್ಯಮಟ್ಟದ ಸಾಹಿತ್ಯೋತ್ಸವ: ಮಂಜೊಟ್ಟಿ ಸ್ಟಾರ್ ಲೈನ್ ಶಾಲೆಯ ವಿದ್ಯಾರ್ಥಿ ಸಯ್ಯದ್ ಮುಹಮ್ಮದ್ ಉವೈಸ್ ಉರ್ದು ಭಾಷಣ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!