31.1 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪೆರ್ಲ ಬೈಪಾಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಭಡ್ತಿಗೊಂಡ ಕೊರಗಪ್ಪ ಟಿ.ರವರಿಗೆ ಬೀಳ್ಕೊಡುಗೆ ಸಮಾರಂಭ

ಬಂದಾರು: ಸರ್ಕಾರಿ ಪ್ರೌಢ ಶಾಲೆ ಪೆರ್ಲ ಬೈಪಾಡಿ ಇಲ್ಲಿ ಸುಮಾರು 23 ವರ್ಷ ಗಣಿತ ಶಿಕ್ಷಕರಾಗಿ, ಕೆಲವು ಸಮಯ ಪ್ರಭಾರ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಕೊರಗಪ್ಪ ಇವರು ಪದೋನ್ನತಿಗೊಂಡು ಸರ್ಕಾರಿ ಪ್ರೌಢ ಶಾಲೆ ಹಳೇಪೇಟೆ ಉಜಿರೆಗೆ ವರ್ಗಾವಣೆಗೊಂಡಿರುವ ಪ್ರಯುಕ್ತ ಅವರಿಗೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಮತ್ತು ಊರವರ ವತಿಯಿಂದ ಬೀಳ್ಕೊಡುಗೆ ಸಮಾರಂಭವು ಮಾ, 9 ರಂದು ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಮಹಾಬಲ ಗೌಡ ವಹಿಸಿದ್ದು, ಕೊರಗಪ್ಪರು ಗಣಿತ ವಿಷಯವನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಬೋಧಿಸಿ, ಮಕ್ಕಳಿಗೆ ಅಚ್ಚು ಮೆಚ್ಚಿನ ಶಿಕ್ಷಕರಾಗಿದ್ದರು ಎಂದು ಹೇಳಿದರು. ಶಾಲಾ ಸ್ಥಾಪನೆಗೆ ಕಾರಣ ಕರ್ತರಾದ ಕೊಂಕನೊಟ್ಟು ದೇಜಪ್ಪ ಗೌಡ , ಹಿರಿಯರಾದ ಹೊನ್ನಪ್ಪ ಗೌಡ, ಗ್ರಾಮ ಪಂಚಾಯಿತಿ ಸದಸ್ಯೆ ಶ್ರೀಮತಿ ಅನಿತಾ , ಕಂಚರೊಟ್ಟು ಡೀಕಯ್ಯ ಗೌಡ, ಎಸ್.ಡಿ.ಎಂ.ಸಿ.ಯ ಸದಸ್ಯರು ಉಪಸ್ಥಿತರಿದ್ದರು. ಶೇಖರ್ ಎನ್., ಮಹೇಶ್ ನಿಲಜಿ , ವಿವೇಕಾನಂದ ಗೌಡ, ಮಹೇಶ್ ಎ. ಕೊರಗಪ್ಪರ ಸೇವೆಯನ್ನು ಸ್ಮರಿಸಿ ಅಭಿನಂದನೆ ಸಲ್ಲಿಸಿದರು.

ಹಳೆವಿದ್ಯಾರ್ಥಿಗಳಾದ ಸುರಕ್ಷಿತ, ನವೀನ್ ಪ್ರಕಾಶ್ , ವಿದ್ಯಾರ್ಥಿಗಳಾದ, ಶ್ರದ್ಧಾ, ಪಲ್ಲವಿ, ವನ್ಯಶ್ರೀ, ದಿವ್ಯಾ ಗುರುಗಳ ಗುಣಗಾನ ಮಾಡಿದರು. ಕನ್ನಡ ಶಿಕ್ಷಕಿ ಹೇಮಲತಾ ಅಭಿನಂದನಾ ಪತ್ರ ವಾಚಿಸಿದರು. ಕೊರಗಪ್ಪ , ಮತ್ತು ಅವರ ಪತ್ನಿ ಶ್ರೀಮತಿ ತ್ರಿವೇಣಿಯವರನ್ನು ಅಭಿನಂದಿಸಲಾಯಿತು.

ವಿದ್ಯಾರ್ಥಿನಿಯರಾದ ಗಣ್ಯಶ್ರೀ, ರಶ್ಮಿತಾ, ಯಶಸ್ವಿಯವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಬಾಲಕೃಷ್ಣ ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅತಿಥಿ ಶಿಕ್ಷಕಿ ದೀಕ್ಷಾ ವಂದಿಸಿದರು. ವಿಜಯ ಕುಮಾರ್ ಎಂ ಕೊಯ್ಯೂರು, ಕಾರ್ಯಕ್ರಮ ನಿರೂಪಿಸಿದರು.

Related posts

ಸಾರ್ವಜನಿಕ ಸ್ಥಳಗಳಲ್ಲಿ ಮಚ್ಚು ತೋರಿಸಿ ಬೆದರಿಕೆಯೊಡ್ಡಿದ ಆರೋಪ, ಆನಂದ ಆಚಾರ್ಯ ಎಂಬಾತನ ವಿರುದ್ದ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಬೆಳ್ತಂಗಡಿ ಬ್ಯಾಟರಿ ಅಂಗಡಿಗೆ ಕನ್ನ ಹಾಕಿದ ಕಳ್ಳರು: ಅಂಗಡಿ ಶಟರ್ ಮುರಿದು ಒಳಹೋಗಲು ಪ್ರಯತ್ನ, ಗಾಳಿ-ಮಳೆಗೆ ಸಿಸಿ ಕ್ಯಾಮರಾ ಬಂದ್ ಮಾಡಿದ್ದರಿಂದ ಕಳ್ಳರ ಚಹರೆ ಪತ್ತೆಯಾಗಿಲ್ಲ.

Suddi Udaya

ಧರ್ಮಸ್ಥಳ ಮುಳಿಕ್ಕಾರ್ ನಲ್ಲಿ ಕಾಡಾನೆ ದಾಳಿ: ಭತ್ತದ ಕೃಷಿಗೆ ಹಾನಿ

Suddi Udaya

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಮಾತೃಶ್ರೀ ಶ್ರೀಮತಿ ಅಮಣಿ ಶೆಟ್ಟಿ ನಿಧನ

Suddi Udaya

ಮರದಿಂದ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾದ ಜನಾರ್ದನರವರ ಚಿಕಿತ್ಸೆಗೆ ನೆರವಾಗಿ

Suddi Udaya

ಮತ ಚಲಾಯಿಸಿದ ಧರ್ಮಸ್ಥಳ ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ್

Suddi Udaya
error: Content is protected !!