25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ ವೃತ್ತಿ ಕೌಶಲ್ಯ ತರಬೇತಿ ‘ಕಾರ್ಯಕ್ರಮ

ಬೆಳ್ತಂಗಡಿ: ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ ವೃತ್ತಿ ಕೌಶಲ್ಯ ತರಬೇತಿ ‘ ಕಾರ್ಯಕ್ರಮವನ್ನು ಮಾ.12 ರಂದು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೋ ಪದ್ಮನಾಭ ಕೆ, ಮುಖ್ಯಸ್ಥರು ವಾಣಿಜ್ಯ ವಿಭಾಗ ವಹಿಸಿದ್ದರು. ಇವರು ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳು ವೃತ್ತಿ ಕೌಶಲ್ಯ ತರಬೇತಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ದಿವ್ಯ. ಎ ಆಗಮಿಸಿದ್ದರು. ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆ ನಡೆಸಿದರು.

ಈ ಕಾರ್ಯಕ್ರಮದಲ್ಲಿ ಪ್ರೊ ಸುರೇಶ್ ವಿ, ಸಂಚಾಲಕರು ವಿದ್ಯಾರ್ಥಿ ಪ್ರತಿಭಾ ವೇದಿಕೆ, ಡಾ.ರವಿ ಎಂ. ಎನ್. ಸಂಚಾಲಕರು ಸ್ನಾತಕೋತ್ತರ ವಿಭಾಗ, ಪ್ರೊ ನವೀನ್ ಹಾಗೂ ಪ್ರೊ ರಾಜೇಶ್ವರಿ ವಾಣಿಜ್ಯ ಶಾಸ್ತ್ರ ವಿಭಾಗ, ಪ್ರೊ ರಶ್ಮಿ, ನಿರ್ವಹಣಾ ವಿಭಾಗ ಹಾಗೂ ಪ್ರೊ ಕವಿತಾ, ಇತಿಹಾಸ ವಿಭಾಗ ಹಾಗೂ ಇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ತೃತೀಯ ಬಿಕಾಂನ ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು. ವಿನುತ ಹಾಗೂ ತಂಡದವರು ಪ್ರಾರ್ಥಿಸಿ, ಅಂಕಿತ ಸ್ವಾಗತಿಸಿ, ವನಿತಾ ಧನ್ಯವಾದವಿತ್ತರು.

Related posts

ಮದ್ದಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ನಾರಾವಿ-ಧರ್ಮಸ್ಥಳ ಕೆಎಸ್ಸಾರ್ಟಿಸಿ ಬಸ್ ಸಂಚಾರಕ್ಕೆ ಸಚಿವ ಗುಂಡೂರಾವ್ ಚಾಲನೆ

Suddi Udaya

ಪಡಂಗಡಿಯಲ್ಲಿ ರಬ್ಬರ್ ಕೊಟ್ಟಿಗೆಗೆ ಬಿದ್ದ ಬೆಂಕಿ: ಸಾವಿರಾರು ಮೌಲ್ಯದ ರಬ್ಬರ್ ಬೆಂಕಿಗಾಹುತಿ

Suddi Udaya

ಕೊಕ್ಕಡ: ತೋಟದಲ್ಲಿ ಕಟ್ಟಿ ಹಾಕಿದ್ದ ದನ ಕಳವು: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ನಿಡ್ಲೆ ಗ್ರಾ.ಪಂ. ವ್ಯಾಪ್ತಿಯ ಬಿಜೆಪಿ ಶಕ್ತಿಕೇಂದ್ರದ ಸಭೆ

Suddi Udaya

ತಾಲೂಕು ಮಟ್ಟದ ಕರಾಟೆ ಪಂದ್ಯಾಟ : ಸ್ಟಾರ್ ಲೈನ್ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!