29.6 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಹಣ ತೆಗೆಯಲು ಅಪರಿಚಿತನಿಗೆ ಎಟಿಎಂ ಕಾರ್ಡ್, ಪಿನ್ ನಂಬರ್ ನೀಡಿದ ವ್ಯಕ್ತಿ ಎಟಿಎಂ ಕಾರ್ಡ್ ಬದಲಾಯಿಸಿ ನೀಡಿದ ಅಪರಿಚಿತ ಖಾತೆಯಿಂದ 1 ಲಕ್ಷಕ್ಕೂ ಅಧಿಕ ರೂ. ತೆಗೆದು ವಂಚನೆ

ಬೆಳ್ತಂಗಡಿ: ಎಟಿಎಂನಿಂದ ಹಣ ಪಡೆಯುವ ಬಗ್ಗೆ ಗೊತ್ತಿಲ್ಲದ ವ್ಯಕ್ತಿ, ಅಪರಿಚಿತನಲ್ಲಿ ಹಣ ತೆಗೆದುಕೊಡುವಂತೆ ಎಟಿಎಂ ಕಾರ್ಡ್, ಪಿನ್ ನಂಬರ್ ನೀಡಿದ್ದು, ಎಟಿಎಂ ಕಾರ್ಡ್ ಬದಲಾಯಿಸಿ ವಾಪಾಸು ನೀಡಿದ ವ್ಯಕ್ತಿಬಳಿಕ ಖಾತೆಯಿಂದ 1 ಲಕ್ಷಕ್ಕೂ ಅಧಿಕ ರೂ.ಲಪಟಾಯಿಸಿದ ಘಟನೆ ನಡೆದಿದೆ.

ಮೆಲಂತಬೆಟ್ಟು ಗ್ರಾಮದ ಶರೀಫ್‌ (53) ಎಂಬವರ ದೂರಿನಂತೆ, ಬೆಳ್ತಂಗಡಿ ಕಸಬಾ ಗ್ರಾಮದ ರಾಷ್ಟ್ರೀಕೃತ ಬ್ಯಾಂಕು ಒಂದರ ಎಟಿಎಂ ನಿಂದ ಹಣ ತೆಗೆಯಲು ಜ.11ರಂದು ತೆರಳಿದ್ದು, ಎಟಿಎಂ ಕಾರ್ಡ್ ಬಳಕೆಯ ಬಗ್ಗೆ ತಿಳಿಯದೇ ಇದ್ದುದರಿಂದ,ಅಲ್ಲೇ ಪಕ್ಕದಲ್ಲಿರುವ ಅಪರಿಚಿತ ವ್ಯಕ್ತಿಗೆ ಎಟಿಎಂ ಕಾರ್ಡ್‌ ನೀಡಿ,ಎ.ಟಿ.ಎಂ.ಪಿನ್‌ ನಂಬರ್‌ ತಿಳಿಸಿ ಹಣ ತೆಗೆದುಕೊಡುವಂತೆ ವಿನಂತಿಸಿಕೊಂಡಿದ್ದು, ಅಪರಿಚಿತ ವ್ಯಕ್ತಿಯು 3,000ರೂ.ಗಳನ್ನು ಎ.ಟಿ.ಎಂ.ಮಿಷನ್‌ ನಿಂದ ತೆಗೆದು ನೀಡಿರುತ್ತಾನೆ. ಮೂರು ದಿನಗಳ ನಂತರ ಇವರ ಖಾತೆಯಿಂದ ರೂ 1,05,300 ರೂ. ಕಡಿತವಾಗಿರುವ ವಿಚಾರ ತಿಳಿದುಬಂದಿದೆ.

ಈ ಬಗ್ಗೆ ಬ್ಯಾಂಕಿನಲ್ಲಿ ವಿಚಾರಿಸಿದಾಗ, ಅಪರಿಚಿತ ವ್ಯಕ್ತಿ ಎಟಿಎಂ ಕಾರ್ಡ್‌ ಬದಲಾಯಿಸಿ ನೀಡಿರುವುದು ತಿಳಿದುಬಂದಿರುತ್ತದೆ.ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಬೆಳ್ತಂಗಡಿ: ಸ.ಪ್ರ.ದ. ಕಾಲೇಜಿನಲ್ಲಿ ರೋವರ್ ರೇಂಜರ್ ಹಾಗೂ ಯುವ ರೆಡ್ ಕ್ರಾಸ್ ಘಟಕದ ಚಟುವಟಿಕೆಗಳ ಉದ್ಘಾಟನೆ

Suddi Udaya

ನಿರಂತರ ಮಳೆ: ಪೆರಾಡಿ ಕನ್ಯಾನ ಎಂಬಲ್ಲಿ ಮನೆ ಕುಸಿತ

Suddi Udaya

ಆರು ಜನ ನಕ್ಸಲರು ಶರಣಾಗತಿ ಬೆನ್ನಲ್ಲೇ ನಕ್ಸಲರು ಬಳಸುತ್ತಿದ್ದ ಶಸ್ತ್ರಾಸ್ತ್ರಗಳು ಪತ್ತೆ

Suddi Udaya

ಉಜಿರೆ : ಎಸ್.ಡಿ.ಎಂ. ಬಿ. ವೋಕ್ ವಿಭಾಗದ ವತಿಯಿಂದ ರಾಜ್ಯ ಮಟ್ಟದ ಅಂತರ್ ಕಾಲೇಜು ಫೆಸ್ಟ್ ‘ಬಿ. ವೋಕ್ ಉತ್ಸವ

Suddi Udaya

ರೆಖ್ಯ: ಬೋರ್‌ವೆಲ್ ವಿಷಯದಲ್ಲಿ ಮಾತುಕತೆ ,: ಹಲ್ಲೆ ಆರೋಪ ಪೊಲೀಸ್ ಠಾಣೆಗೆ ದೂರು

Suddi Udaya

ಕಡಿರುದ್ಯಾವರ ಜೋಡು ನೆರೋಳು ಮಥಾಯಿ ಪಣಕಾಟು ಪರಂಬಿಲಿ ನಿಧನ

Suddi Udaya
error: Content is protected !!