ಮೇಲಂತಬೆಟ್ಟು: ಇಲ್ಲಿಯ ಪಾಲೆತ್ತಡಿಗುತ್ತು ಗರಡಿ ಮನೆಯ ಶ್ರೀ ಪಿಲಿಚಾಮುಂಡಿ, ದೈವಂಕುಲು, ಕೊಡಮಣಿತ್ತಾಯ, ಮೂರ್ತಿಲ್ಲಾಯ ಮತ್ತು ಪರಿವಾರ ದೈವಗಳು ಶ್ರೀ ಬ್ರಹ್ಮ ಬೈದರ್ಕಳ, ಮಾಣಿಬಾಲೆ ಪರಿವಾರ ದೈವಗಳ ಸನ್ನಿಧಿಯಲ್ಲಿ ಬೆಳ್ತಂಗಡಿ ರವಿಚಂದ್ರ ಶಾಂತಿ ಇವರ ನೇತೃತ್ವದಲ್ಲಿ ದೈವಗಳ ಧರ್ಮಚಾವಡಿ, ಭಂಡಾರದ ಮನೆ (ತರವಾಡು) ಪುನಃ ನಿರ್ಮಾಣದ ಶಂಕುಸ್ಥಾಪನಾ ಕಾರ್ಯಕ್ರಮ ಮಾ.13ರಂದು ನಡೆಯಿತು.
ಕಾರ್ಯಕ್ರಮದ ಶಂಕುಸ್ಥಾಪನೆ ಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಿದರು. ಅಧ್ಯಕ್ಷತೆಯನ್ನು ಬೆಳ್ತಂಗಡಿ ನೋಟರಿ ವಕೀಲರು ಭಗೀರಥ ಜಿ ಗುಂಪೋಳಿ ವಹಿಸಿದರು.
ಮುಖ್ಯ ಅತಿಥಿಗಳಾಗಿ ಮೇಲಂತಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸವಿತಾ, ಯುವ ವಾಹಿನಿ ಅಧ್ಯಕ್ಷ ಹರೀಶ್ ಕೆ. ಪೂಜಾರಿ, ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ, ಧರ್ಮಸ್ಥಳ ನಿವೃತ್ತ ಶಿಕ್ಷಕ ಕೃಷ್ಣಪ್ಪ ಪೂಜಾರಿ, ಮೇಲಂತಬೆಟ್ಟು ಗ್ರಾ.ಪಂ. ಮಾಜಿ ಅಧ್ಯಕ್ಷೆ ಶ್ರೀಮತಿ ಜೆಸಿಂತಾ ಮೋನಿಸ್, ಅರೆಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಸುಕೇಶ್ ಕುಮಾರ್ ಕಡಂಬು, ಯೋಗೀಶ್ ಕುಮಾರ್ ನಡಕರ, ರಮಾನಂದ ಪೂಜಾರಿ ಮೂರ್ಜೆಗುತ್ತು, ಸುರೇಶ್ ಶೆಟ್ಟಿ ಭ್ರಾಮರಿ ಮಾಪಲಾಡಿ, ಪಂಚಾಯತ್ ಸದಸ್ಯ ಚಂದ್ರರಾಜ್ ನೂಜೆಲ್, ನಾರಾಯಣ ಪೂಜಾರಿ ಬರೆಮೇಲು, ಮೇಲಂತಬೆಟ್ಟು ಯುವಕ ಸಂಘದ ಕೃಷಿಕ ಜಗದೀಶ ಬರೆಮೇಲು, ಗಿರೀಶ್ ಒಡ್ಯಾನೆಗುತ್ತು ಎಸ್.ಕೆ.ಡಿ.ಆರ್.ಡಿ.ಪಿ. ಯೋಜನಾಧಿಕಾರಿ ಹರೀಶ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪಾಲೆತ್ತಡಿಗುತ್ತು ಗರಡಿ ಮನೆಯ ಅನುವಂಶೀಯ ಆಡಳಿತದಾರರು ಶ್ರೀಮತಿ ನಾಗಮ್ಮ ಕೆ.ಕುಂಜಿರ ಪೂಜಾರಿ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಜಯಂತ್ ಪೂಜಾರಿ ಬೆಂಗಳೂರು, ಪಾಲೆತ್ತಡಿಗುತ್ತು ಗರಡಿ ಮನೆಯ ಲಕ್ಷ್ಮೀಶ ಕೆ., ಹರಿಪ್ರಸಾದ್, ಶ್ರೀಮತಿ ದಮಯಂತಿ ಬಾಲಕೃಷ್ಣ, ಶ್ರೀಮತಿ ಪದ್ಮಿನಿ ಲಕ್ಷ್ಮಣ ಹೆಚ್, ಪ್ರಭಾಕರ ಬಂಗೇರ ಪಾಲೆತ್ತಡಿ, ವಿನಯ ಕೆ. ಗುರಿಪಳ್ಳ, ಬಾಲಕೃಷ್ಣ, ಲಕ್ಷ್ಮಣ ಪೂಜಾರಿ, ಹರ್ಷ, ರಾಜೇಶ್, ಗೀತಾ ಪ್ರಕಾಶ್, ದೇವರಾಜ್, ವಿನಯ್, ಆಡಳಿತ ಕಮಿಟಿಯ ಅಧ್ಯಕ್ಷರು, ಸದಸ್ಯರು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು, ಸದಸ್ಯರು, ಕುಟುಂಬಸ್ಥರು, ಗ್ರಾಮಸ್ಥರು ಕಾಯ೯ಕ್ರಮದಲ್ಲಿ ಉಪಸ್ಥಿತರಿದ್ದರು.
ಬೇಬಿ ಅಥ೯ ಪ್ರಾರ್ಥಿಸಿ, ಭೋಜ ಪೂಜಾರಿ ಮಜಲು ಸ್ವಾಗತಿಸಿದರು. ಸಚಿನ್ ಕುಮಾರ್ ನೂಜೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಧಾಮಣಿ ಕಾರ್ಯಕ್ರಮ ನಿರೂಪಿಸಿದರು.