23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ: ಅಂಬ್ಯೂಲೆನ್ಸ್ ಚಾಲಕನ ಮೇಲೆ ಹಲ್ಲೆ

ಬೆಳ್ತಂಗಡಿ: ಅಂಬ್ಯೂಲೆನ್ಸ್‌ ವಾಹನವು ಬೆಳ್ತಂಗಡಿಯಿಂದ ಉಜಿರೆ ಕಡೆಗೆ ಚಲಾಯಿಸಿಕೊಂಡು ಹೋಗುವಾಗ ವಿರುದ್ದ ದಿಕ್ಕಿನಿಂದ ಬಂದ ಕಾರನ್ನು ಆದರ ಚಾಲಕನು ಅಂಬ್ಯೂಲೆನ್ಸ್‌ ವಾಹನಕ್ಕೆ ಅಡ್ಡ ನಿಲ್ಲಿಸಿ, ಕಾರಿನ ಚಾಲಕ ಮತ್ತು ಓರ್ವ ಮಹಿಳೆ ಕಾರಿನಿಂದ ಇಳಿದು ಅಂಬ್ಯೂಲೆನ್ಸ್ ಚಾಲಕನಿಗೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು, ವಾಹನಕ್ಕೆ ಹಾನಿ ಮಾಡಿದ ಘಟನೆ ಮಾ.12ರಂದು ನಡೆದಿದೆ.

ಕಡಬ ವಿದ್ಯಾ ನಗರ ಸುಬ್ರಮಣ್ಯ ಗ್ರಾಮದ ನಿವಾಸಿ ರಕ್ಷಿತ್‌ ಕುಮಾರ್‌, (27) ಎಂಬವರ ದೂರಿನಂತೆ, ಮಾ.12 ರಂದು ಮಧ್ಯಾಹ್ನ ಸಮಯ, ಬೆಳ್ತಂಗಡಿ ತಾಲೂಕು ಲಾಯಿಲಾ ಗ್ರಾಮದ ಲಾಯಿಲಾ ಜಂಕ್ಷನ್‌ ಎಂಬಲ್ಲಿ, ಅಂಬ್ಯುಲೆನ್ಸ್ ಚಾಲಕ ರಕ್ಷಿತ್ ರವರು ತಮ್ಮ ಬಾಬ್ತು ಕೆಎ-06-ಜಿ-1259 ನೇ ನಂಬ್ರದ ಅಂಬ್ಯೂಲೆನ್ಸ್‌ ವಾಹನವನ್ನು ಬೆಳ್ತಂಗಡಿಯಿಂದ ಉಜಿರೆ ಕಡೆಗೆ ಚಲಾಯಿಸಿಕೊಂಡು ಹೋಗುವಾಗ ವಿರುದ್ದ ದಿಕ್ಕಿನಿಂದ ಬಂದ ಕೆಎ-51- ಎಂಡಿ -4631 ನೇ ಕಾರನ್ನು ಆದರ ಚಾಲಕನು ರಕ್ಷಿತ್ ಚಲಾಯಿಸುತ್ತಿದ್ದ ಅಂಬ್ಯೂಲೆನ್ಸ್‌ ವಾಹನಕ್ಕೆ ಅಡ್ಡ ನಿಲ್ಲಿಸಿ, ಕಾರಿನ ಚಾಲಕ ಮತ್ತು ಓರ್ವ ಮಹಿಳೆ ಕಾರಿನಿಂದ ಇಳಿದು ಬಂದು ರಕ್ಷಿತ್ಗೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು, ವಾಹನಕ್ಕೆ ಹಾನಿ ಮಾಡಿ ಸುಮಾರು 3000/-ರೂ ಗಳಷ್ಟು ನಷ್ಟ ಉಂಟಾಗಿದೆ ಎಂದು ಆರೋಪಿಸಿದ್ದಾರೆ.

ಹಲ್ಲೆಯಿಂದ ಗಾಯಗೊಂಡ ರಕ್ಷಿತ್ ರವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ 33/2024 ಕಲಂ:504,341,323, 427, ಜೊತೆಗೆ 34 ಭಾ ದಂ ಸಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ. ಬಿ.ಎಸ್. ಇ) ಶಾಲೆಯಲ್ಲಿ “ಪ್ರತಿಭಾ ಸಂಗಮ” ಕಾರ್ಯಕ್ರಮ

Suddi Udaya

ಬಟ್ಲಡ್ಕ ಜುಮಾ ಮಸೀದಿಯಲ್ಲಿ ದಿ| ಶೈಖುನಾ ಮರ್ಹೂಮ್ ಕೂರಾ ತಂಙಲ್ ಅವರ ಹೆಸರಿನಲ್ಲಿ ಅನುಸ್ಮರಣೆ ಕಾರ್ಯಕ್ರಮ

Suddi Udaya

ಉಜಿರೆ : ದ್ವಿಚಕ್ರ ವಾಹನಗಳು ಡಿಕ್ಕಿ: ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಕುಮ್ಕಿ ಜಮೀನಿನ ಹಕ್ಕನ್ನು ರೈತರಿಗೆ ನೀಡುವ ಕುರಿತಾಗಿ ಸದನದಲ್ಲಿ ಧ್ವನಿ ಎತ್ತಿದ ಶಾಸಕ ಹರೀಶ್ ಪೂಂಜ

Suddi Udaya

ಜೇಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಕುಟುಂಬೋತ್ಸವ

Suddi Udaya

ಚಾರ್ಮಾಡಿ: ಚಲಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್ಸಿನ ಸ್ಟೇರಿಂಗ್ ಜಾಯಿಂಟ್ ಕಟ್

Suddi Udaya
error: Content is protected !!