24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಾ.14-19 ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ

ಕೊಯ್ಯೂರು : ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೆಯು ಶ್ರೀ ವೇದಮೂರ್ತಿ ನಂದಕುಮಾರ ತಂತ್ರಿ ಇವರ ನೇತೃತ್ವದಲ್ಲಿ ಮಾ.14ರಿಂದ 19ರ ತನಕ ನಡೆಯಲಿದೆ ಎಂದು ಕೊಯ್ಯರುಗುತ್ತು ಅನುವಂಶಿಕ ಆಡಳಿತ ಮೊಕ್ತೇಸರರರು ಕೆ.ಬಿ. ಹರಿಶ್ಚಂದ್ರ ಬಲ್ಲಾಳ್ ಹಾಗೂ ಪ್ರಧಾನ ಆರ್ಚಕ ಕೆ.ಅಶೋಕ್ ಕುಮಾರ್ ಬಾಂಗಿಣ್ಣಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಮಾ.14 ರಂದು ಬೆಳಿಗ್ಗೆ ಪ್ರಾರ್ಥನೆ, ಪ್ರಶ್ನಾಚಿಂತನೆ, ತೋರಣ ಮುಹೂರ್ತ, ಕಲಶಾಭಿಷೇಕ, ಧ್ವಜಾರೋಹಣ, ಮಹಾಪೂಜೆ ರಾತ್ರಿ ೮ರಿಂದ ಉತ್ಸವ, ಮಹಾಪೂಜೆ, ಬಲಿ ನಡೆಯಲಿದೆ. ಮಾ.15 ರಂದು ಬೆಳಗ್ಗೆ ಉತ್ಸವ, ಕಲಶಾಭಿಷೇಕ, ಮಹಾಪೂಜೆ, ರಾತ್ರಿ 8 ರಿಂದ ಉತ್ಸವ, ಪಡಿಯಕ್ಕಿ, ಮಹಾಪೂಜೆ, ಬಲಿ ನಡೆಯಲಿದೆ. ಮಾ.16ರಂದು ಬೆಳಗ್ಗೆ 9ರಿಂದ ದರ್ಶನ ಬಲಿ, ಕಲಶಾಭಿಷೇಕ, ಮಹಾಪೂಜೆ, ಮಧ್ಯಾಹ್ನ 1ರಿಂದ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 8 ರಿಂದ ಕೊಟ್ಟಿಗೆ ಕೆಲಸ, ಮಹಾರಥೋತ್ಸವ, ಮಹಾಪೂಜೆ, ಭೂತಬಲಿ, ಕವಾಟ ಬಂಧನ, ಶ್ರೀ ಉಮನಾಥ ದೇವಾಡಿಗ, ಅಶ್ವಥಪುರ ಮತ್ತು ಬಳಗದಿಂದ ನಾಗಸ್ವರ ವಾದನ ನಡೆಯಲಿದೆ.


ಮಾ.17 ರಂದು ಬೆಳಿಗ್ಗೆ 7 ರಿಂದ ಕವಾಟ ಉದ್ಘಾಟನೆ, ಅಭಿಷೇಕ, ಪ್ರಸನ್ನಪೂಜೆ, ಮೂಲಸ್ಥಾನ ಗುಂಡದಿಂದ ಭಂಡಾರದ ಆಗಮನ, ಮಹಾಪೂಜೆ. 11ರಿಂದ ಶ್ರೀ ಚಂಡಿಕಾ ಯಾಗ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ,ಮಹಮ್ಮಾಯಿ ಗುಮ್ಮಟ ನೃತ್ಯ ನಡೆಯಲಿದೆ. ರಾತ್ರಿ 7ರಿಂದ ಬೆಳ್ತಂಗಡಿ ‘ಶೆಟ್ಟಿ ಆರ್ಟ್ಸ್’ ಗಿರಿಧರ ಶೆಟ್ಟಿ ಬಳಗದವರಿಂದ ವಿನೂತನ ಶೈಲಿಯ ನೃತ್ಯ ಶ್ರೀ ಪಂಚದುರ್ಗಾಪರಮೇಶ್ವರಿ ಗೆಳೆಯರ ಬಳಗ ಕೊಯ್ಯೂರು ಇವರಿಂದ ‘ಬರವುದ ಬೊಳ್ಳಿ’ ರಾಜೇಶ್ ಆಚಾರ್ಯ ಪರ್ಕಳ ವಿರಚಿತ ಏರ್ ತಾಂಕುವೆರ್” ತುಳು ಹಾಸ್ಯ ಸಾಂಸಾರಿಕ ನಾಟಕ, ರಾತ್ರಿ 9ರಿಂದ ಧರ್ಮದೈವಗಳ ನೇಮೋತ್ಸವ, ಶ್ರೀ ದೇವರ ಉತ್ಸವ, ಶ್ರೀ ಉಳ್ಳಾಲ್ತಿ ನೇಮೋತ್ಸವ, ಮಹಾಪೂಜೆ ನಡೆಯಲಿದೆ. ಮಾ.18ಬೆಳಿಗ್ಗೆ 9ರಿಂದ ಕಲಶಾಭಿಷೇಕ, ಮಹಾಪೂಜೆ, ರಾತ್ರಿ ೬ರಿಂದ ಅವಕೃತ ಸ್ನಾನ, ಧ್ವಜಾವರೋಹಣ, ಮಹಾಪೂಜೆ ನಡೆಯಲಿದೆ. ಮಾ.19 ರಂದು ಸಂಪ್ರೋಕ್ಷಣೆ, ಮಹಾಪೂಜೆ. ಹಾಗೂ ಮಾ. 22 ರಂದು ಜಾತ್ರಾ ಪ್ರಯುಕ್ತ ಬಪ್ಪನಾಡು ಮೇಳದವರಿಂದ ‘ನಾಡೂರ ನಾಗಬನ’ ಯಕ್ಷಗಾನ ಬಯಲಾಟ ನಡೆಯಲಿದೆ.

Related posts

ಅಳದಂಗಡಿ ಗ್ರಾಮ ಸಭೆ: ಅಂಗಡಿ ಬಾಡಿಗೆ ಬಾಕಿದಾರರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರ ಒತ್ತಾಯ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾದ್ಯಮ (ರಾಜ್ಯ ಪಠ್ಯಾಕ್ರಮ) ಶಾಲೆಯಲ್ಲಿ ಹೊಸ ವರ್ಷ ಆಚರಣೆ

Suddi Udaya

ಅರಸಿನಮಕ್ಕಿ: ಮೂಜಿನಾಡು ನಾರಾಯಣ ಟೈಲರ್ ನಿಧನ

Suddi Udaya

ಬೆಳ್ತಂಗಡಿ: ವಾಣಿ ಕಾಲೇಜಿನ ವಿದ್ಯಾರ್ಥಿ ಅನುಕ್ಷಾ ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಆಯ್ಕೆ

Suddi Udaya

ಅಳದಂಗಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ‌ಯವರನ್ನು ಭೇಟಿ ಮಾಡಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ:ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗಳ ಕುರಿತು ಚರ್ಚೆ

Suddi Udaya
error: Content is protected !!