ಮಿತ್ತಬಾಗಿಲು: ಇಲ್ಲಿಯ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ/ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಮಾ.20 ರಿಂದ 28 ರವರೆಗೆ ವೇದಮೂರ್ತಿ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವಿವಿಧ ತಾಂತ್ರಿಕ, ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಮಾ.20 ರಂದು ಬೆಳಿಗ್ಗೆ 11.00ಗಂಟೆಗೆ ಚಪ್ಪರ ಉದ್ಘಾಟನೆ, ಅಪರಾಹ್ನ 3.00ಗಂಟೆಗೆ ಹೊರೆಕಾಣಿಕೆಯ ಮೆರವಣಿಗೆಗೆ ಚಾಲನೆ ಸಂಜೆ 5.00ಕ್ಕೆ ಉಗ್ರಾಣ ಉದ್ಘಾಟನೆ, ಭಜನಾ ಕಾರ್ಯಕ್ರಮ, ಸಂಜೆ ಗಂಟೆ 4.00 ರಿಮದ ತಂತ್ರಿಗಳ ಆಗಮನ ಪೂರ್ಣಕುಂಭ ಸ್ವಾಗತದೊಂದಿಗೆ ಸಂಜೆ ಗಂಟೆ 5ರಿಂದ ಆಚಾರ್ಯವರಣ, ಸಾಮೂಹಿಕ ಪ್ರಾರ್ಥನೆ, ಸುದರ್ಶನ ಹೋಮ, ಆವಾಹನೆ, ಉಚ್ಚಾಟನೆ, ಪಶುದ್ಧಾನ ಪುಣ್ಯಾಹ, ಅಂಕುರಾರೋಪಣ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಕಲಶ, ರಕ್ಷಾ ಕಲಶ, ವಾಸ್ತು ಬಲಿ,, ವಾಸ್ತು ಕಲಶಾಭೀಷೇಕ, ರಾತ್ರಿ 7 ರಿಂದ ಕೊಲ್ಲೂರು ಶ್ರೀ ಕ್ಷೇತ್ರ ಮಹಾತ್ಮೆ ಯಕ್ಷಗಾನ ಕಾರ್ಯಕ್ರಮ , 7.30 ರಿಂದ ಪ್ರೀತಿ ವಿಜೆ ಕಿಲ್ಲೂರು ಇವರಿಂದ ಪುಪ್ಪಾಂಜಲಿ ಗಣಪತಿ ನೃತ್ಯ ಸ್ಥಳೀಯ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಮಾ.21 ಬೆಳಿಗ್ಗೆ ಗಂಟೆ 5.00 ರಿಂದ ಗಣಹೋಮ, ತ್ರಿಕಾಲಪೂಜೆ, ಅಂಕುರಪೂಜೆ, ಸ್ಥಳಶುದ್ಧಿ, ಬಿಂಬ ಶುದ್ಧಿ ಕಲಶಪೂಜೆ, ಪ್ರೋಕ್ತಹೋಮ, ಪ್ರಾಯಶ್ಚಿತ್ತ ಹೋಮ, ಬಿಂಬ ಶುದ್ದಿ ಕಲಶಾಭಿಷೇಕ, ಹೋಮಕಲಶಾಭಿಷೇಕ, ಮಹಾಪೂಜೆ, ಭಜನಾ ಕಾರ್ಯಕ್ರಮ, ಸಂಜೆ 5.00ರಿಂದ ಕುಂಡಶುದ್ಧಿ ತ್ರಿಕಾಲಪೂಜೆ, ಅಂಕುರಪೂಜೆ, ಹಾಗೂ ರಾತ್ರಿ 7 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಾದ ತಾಳಮದ್ದಳೆ, ಯಕ್ಷಗಾನ ಶ್ರೀ ದೇವಿ ಮಹಾತ್ಮೆ, ಪ್ರಾಥಮಿಕ ಶಾಲಾ ಮಕ್ಕಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ, ನಾಟಕ ಬದ್ಕ್ ಬಡ್ಡಿದ ಕಾಸ್ ನಡೆಯಲಿದೆ.
ಮಾ.22 ಬೆಳಿಗ್ಗೆ ಗಂಟೆ 5ರಿಂದ ಗಣಹೋಮ, ತ್ರಿಕಾಲಪೂಜೆ, ಅ೦ಕುರಪೂಜೆ, ದಹನಪ್ರಾಯಶ್ಚಿತ್ತ, ಶಾ೦ತಿಹೋಮ, ಅದ್ಭುತಶಾ೦ತಿ ಹೋಮ, ಶ್ವಶಾಂತಿ ಹೋಮ, ಚೋರಶಾಂತಿ ಹೋಮ, ಹೋಮ ಕಲಶಾಭಿಷೇಕ, ಕುಂಭೇಶ ಕರ್ಕರಿ ಜಲದ್ರೋಣಿ ಕಲಶಪೂಜೆ, ಅನುಜ್ಞಾಬ್ರಹ್ಮಕಲಶಪೂಜೆ, ಪರಿಕಲಶಪೂಜೆ, ನಾಗಪ್ರತಿಷ್ಠೆ, ಕಲ್ಕುಡ-ಕಲ್ಲುರ್ಟಿ ದೈವಪ್ರತಿಷ್ಠೆ, ಮೈಸ೦ದಾಯ ರಕೇಶ್ವರೀ ದೈವ ಪ್ರತಿಷ್ಠೆ, ಮಹಾಪೂಜೆ., ಸಂಜೆ 5-00 ರಿಂದ – ಕುಂಡಶುದ್ಧಿ, ತ್ರಿಕಾಲ ಪೂಜೆ, ಅಂಕುರ ಪೂಜೆ, ಅಧಿವಾಸ ಹೋಮ, ಕಲಶಾಧಿವಾಸ, ಅಧಿವಾಸ ಬಲಿ, ರಾತ್ರಿಪೂಜೆ. ಭಜನಾ ಕಾರ್ಯಕ್ರಮಗಳು, ಸರಕಾರಿ ಶಾಲಾ ಮಕ್ಕಳು ಹಾಗೂ ಸ್ಥಳೀಯ ಕಲಾವಿದರ ಕೂಡುವಿಕೆಯಲ್ಲಿ ಮಹಿಷಮರ್ದಿನಿ -ಯಕ್ಷಾಗನ ಕಾರ್ಯಕ್ರಮ. ಮುಂಡಾಜೆ ಪದವಿ ಪೂರ್ವ ಕಾಲೇಜು ಮಕ್ಕಳಿಂದ ನೃತ್ಯ ವೈಭವ ಕಾರ್ಯಕ್ರಮ., ಮಕ್ಕಳ ಸಭಾ ಕಾರ್ಯಕ್ರಮ ನಡೆಯಲಿದೆ.
ಮಾ.23-24 ವೈದಿಕ ಕಾರ್ಯಕ್ರಮಗಳು , ಭಜನಾ ಕಾರ್ಯಕ್ರಮ, ಧಾರ್ಮಿಕ ಸಭಾ ಕಾರ್ಯಕ್ರಮಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಮಾ.25 ರಂದು 108 ಕಾಯಿ ಗಣಪತಿ ಹೋಮ, ತ್ರಿಕಾಲಪೂಜೆ, ಅಂಕುರಪೂಜೆ, ಶಯ್ಕೆಯಲ್ಲಿ ಪೂಜೆ, ವಿದ್ವೇಶ್ವರ ಕಲಶಪ್ರೋಕ್ಷಣೆ, ಅಲ್ಪಪ್ರಾಸಾದಶುದ್ಧಿ, ನಾ೦ದೀಮುಖಪುಣ್ಯಾಹ, ಪ್ರಾಸಾದಪ್ರತಿಷ್ಠೆ, ರತ್ನನ್ಯಾಸ, ಪೀಠ ಪ್ರತಿಷ್ಠೆ ಪೂರ್ವಾಹ್ನ ಗಂಟೆ 10.40 ಶ್ರೀ ದುರ್ಗಾಪರಮೇಶ್ವರಿ – ಶ್ರೀ ದುರ್ಗಾದೇವಿ – ಶ್ರೀ ಗಣಪತಿ ದೇವರ ಪ್ರತಿಷ್ಠೆ ಅಷ್ಟಬಂಧ ಕ್ರಿಯೆ ಕೊಡಮಣಿತ್ತಾಯಿ, ವ್ಯಾಘ್ರ ಚಾಮುಂಡಿ ದೈವಗಳ ಪ್ರತಿಷ್ಠೆ, ಕುಂಭೇಶ ಕಲಶಾಭಿಷೇಕ, ನಿದ್ರಾಕಲಶಾಭಿಷೇಕ, ಜೀವಕಲಶಾಭಿಷೇಕ, ಜೀವಾವಹನ, ಪಾಯಸ ಪೂಜೆ, ಪ್ರತಿಷ್ಠಾ ಬಲಿ, ಮಹಾಪೂಜೆ. ಸಂಜೆ ಗಂಟೆ 5-00 ರಿಂದ
ನಿತ್ಯ ಪೂಜಾ ವಿಧಾನಗಳನಿರ್ಣಯ, ಭದ್ರದೀಪ ಪ್ರತಿಷ್ಠೆ, ಕವಾಟಬಂಧನ, ತ್ರಿಕಾಲ ಪೂಜೆ, ಅಂಕುರ ಪೂಜೆ, ಮಂಟಪದಲ್ಲಿ ರಾತ್ರಿಪೂಜೆ. ದುರ್ಗಾದೇವಿಯ ಸನ್ನಿಧಿಯಲ್ಲಿ ಕುಂಭೇಶ ಕರ್ಕರಿ ಜಲದ್ರೋಣಿ ಕಲಶಪೂಜೆ, ಬ್ರಹ್ಮಕಲಶ ಪೂಜೆ, ಪರಿಕಲಶ ಪೂಜೆ, ಅಧಿವಾಸ ಹೋಮ.
ಮಾ.26 ವೈದಿಕ ಕಾರ್ಯಕ್ರಮ ಸಂಜೆ ದುರ್ಗಾದೇವಿ ಸನ್ನಿಧಿಯಲ್ಲಿ ಭೂತ ಬಲಿ ಉತ್ಸವ , ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ , ಸಾಂಸ್ಕೃತಿಕ ಕಾರ್ಯಕ್ರಮ, ಮಾ.27 ವೈದಿಕ ಕಾರ್ಯಕ್ರಮಗಳು ಭಜನಾ ಕಾರ್ಯಕ್ರಮಗಳು
ಮಾ.28 ರಂದು ಬೆಳಿಗ್ಗೆ ಕವಾಟೋದ್ಘಾಟನೆ, ತೈಲಾಭಿಷೇಕ, ಮಹಾಬಲಿಪೀಠ ಪ್ರತಿಷ್ಠೆ, ಹೋಮಕಲಶಾಭಿಷೇಕ, ತತ್ವ ಕಲಶಾಭೀಷೇಕ , ಕುಂಭೇಶಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಸಂಜೆ ಭೂತ ಬಲಿ ಉತ್ಸವ, ಭಜನಾ ಕಾರ್ಯಕ್ರಮ, ಧಾರ್ಮಿಕ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಪ್ರತಿ ದಿನ ಧಾರ್ಮಿಕ ಸಭಾ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.